ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ನೀಡುವ ಸ್ಥಳದಲ್ಲಿ ಪಾಲಿಸಬೇಕಾದ ನಿಯಮಗಳೇನು?

|
Google Oneindia Kannada News

ನವದೆಹಲಿ, ಜನವರಿ 16: ಶನಿವಾರ ರಾಷ್ಟ್ರಾದ್ಯಂತ ಕೊರೊನಾ ಲಸಿಕಾ ಅಭಿಯಾನ ಆರಂಭಗೊಳ್ಳುತ್ತಿದ್ದು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲಾಗುತ್ತಿದೆ.

ಕೊರೊನಾ ಲಸಿಕೆ ನೀಡುವ ಸ್ಥಳಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಅದರಂತೆ ಕೊರೊನಾ ಲಸಿಕೆ ಪಡೆದುಕೊಳ್ಳುವವರು ಲಸಿಕೆ ಪಡೆದ ನಂತರ ಒಂದು ಗಂಟೆಯ ಅವಧಿ ವಿಶ್ರಾಂತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

"ಕೊರೊನಾ ಅಂತ್ಯಕ್ಕಿಂದು ಆರಂಭ"; ಲಸಿಕಾ ಅಭಿಯಾನದ 10 ಪ್ರಮುಖಾಂಶಗಳು

ಕೊರೊನಾ ಲಸಿಕೆ ಪಡೆದುಕೊಳ್ಳಲು ಕೆಲವು ನಿಯಮಗಳಿದ್ದು, ಅದರಂತೆ ಕೊರೊನಾ ಲಸಿಕೆ ನೀಡುವ ಸ್ಥಳವನ್ನು ಕಾಯುವ ಕೊಠಡಿ, ಲಸಿಕಾ ಕೊಠಡಿ ಹಾಗೂ ನಿಗಾ ಕೊಠಡಿ ಎಂದು ವಿಭಾಗಿಸಲಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದೆ. ಲಸಿಕೆ ಪಡೆದ ವ್ಯಕ್ತಿಯು ತಕ್ಷಣವೇ ತೆರಳದೇ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗಿದೆ. ಈ ಅವಧಿಯಲ್ಲಿ ದೇಹದಲ್ಲಿ ಲಸಿಕೆಯ ಪರಿಣಾಮದ ಕುರಿತು ನಿಗಾ ವಹಿಸಲಾಗುತ್ತದೆ.

Rules To Be Followed After Coronavirus Vaccination

Recommended Video

ಕೋವಿಶೀಲ್ಡ್ ಲಸಿಕೆ ಪಡೆದ ಸೇರಮ್‌ ಇನ್ಸ್‌ಟಿಟ್ಯೂಟ್‌ CEO ಅದರ್‌ Poonawala | Oneindia Kannada

ಶನಿವಾರ ಆರಂಭಗೊಳ್ಳಲಿರುವ ಕೊರೊನಾ ಲಸಿಕೆ ಅಭಿಯಾನದಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತದ ಒಟ್ಟು 3006 ಸ್ಥಳಗಳಲ್ಲಿ ಲಸಿಕೆಗಳನ್ನು ನೀಡಲಾಗುತ್ತಿದೆ. ಆನ್ ಲೈನ್ ಡಿಜಿಟಲ್ ವೇದಿಕೆ ಕೋವಿನ್ ಆಪ್ ಸಹಕಾರದೊಂದಿಗೆ ಲಸಿಕೆ ಅಭಿಯಾನ ನಡೆಯಲಿದೆ. ಕೊರೊನಾ ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ 24x7 ಕಾಲ್ ಸೆಂಟರ್ ತೆರೆದಿದ್ದು, 1075ಗೆ ಕರೆ ಮಾಡಲು ಸೂಚಿಸಲಾಗಿದೆ.

English summary
Health ministry has advised to follow some rules after vaccination. Here is list of rules
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X