ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚೇರಿ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯದ ಅಪರಾಧಕ್ಕೆ ಯಾವ ಕಾನೂನು, ಶಿಕ್ಷೆಗಳಿವೆ ಗೊತ್ತೇ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 10: ಮಹಿಳಾ ಸಬಲೀಕರಣದ ಮಾತುಗಳ ನಡುವೆಯೇ ದೇಶದಲ್ಲಿ ಅತ್ಯಾಚಾರ, ಕಚೇರಿ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಪದೇ ಪದೇ ಕೇಳಿಬರುತ್ತಿವೆ.

ಮುಖ್ಯವಾಗಿ ನಟಿ ತನುಶ್ರೀ ದತ್ತಾ ಪ್ರಮುಖ ನಟ, ನಿರ್ದೇಶಕರ ವಿರುದ್ಧ ಮಾಡಿದ ಲೈಂಗಿಕ ಕಿರುಕುಳದ ಆರೋಪವು ದೇಶದಾದ್ಯಂತ ಬೃಹತ್ ಆಂದೋಲನಕ್ಕೆ ಕಾರಣವಾಗಿದೆ. ಎಷ್ಟೋ ವರ್ಷಗಳ ಹಿಂದೆ ತಮ್ಮ ಕೆಲಸದ ಸ್ಥಳಗಳಲ್ಲಿ ಪುರುಷರಿಂದ ಲೈಂಗಿಕ ಮತ್ತು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದ ಮಹಿಳೆಯರು #MeToo ಎಂದು ಧ್ವನಿ ಎತ್ತುವ ಧೈರ್ಯ ಪಡೆದುಕೊಂಡಿದ್ದಾರೆ.

ನನ್ನೆದುರೇ ಬೆತ್ತಲಾದ ಅಲೋಕ್ ನಾಥ್ : ಅಸಹ್ಯಕರ ಘಟನೆ ಬಿಚ್ಚಿಟ್ಟ ಕಲಾವಿದೆನನ್ನೆದುರೇ ಬೆತ್ತಲಾದ ಅಲೋಕ್ ನಾಥ್ : ಅಸಹ್ಯಕರ ಘಟನೆ ಬಿಚ್ಚಿಟ್ಟ ಕಲಾವಿದೆ

ಸಿನಿಮಾ ನಟಿಯರು, ಪತ್ರಕರ್ತೆಯರು, ವಿವಿಧ ಕಂಪೆನಿಗಳ ಉದ್ಯೋಗಿಗಳು, ರಾಜಕೀಯ ಕ್ಷೇತ್ರಗಳಲ್ಲಿ ತೊಡಿಸಿಕೊಂಡವರು ತಮ್ಮ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಜನಪ್ರಿಯ ವ್ಯಕ್ತಿಗಳ ವಿರುದ್ಧದ ಆರೋಪಗಳು ಸುದ್ದಿಯಾಗುತ್ತಿವೆ.

ಇನ್ನು ಅದೆಷ್ಟೋ ಉದ್ಯೋಗ ಸಂಸ್ಥೆಗಳಲ್ಲಿನ ಮಹಿಳೆಯರಿಗೆ ಈಗಲೂ ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ಮುಖ್ಯವಾಹಿನಿಗಳಲ್ಲಿ ಇರುವ ಸ್ಥಿತಿವಂತರು ಮಾತ್ರ ಇದರ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿದ್ದಾರೆ.

#metoo ಅಭಿಯಾನ ತಪ್ಪು ದಾರಿಗೆ ಸೂಚನೆ: ಬಿಜೆಪಿ ಸಂಸದ #metoo ಅಭಿಯಾನ ತಪ್ಪು ದಾರಿಗೆ ಸೂಚನೆ: ಬಿಜೆಪಿ ಸಂಸದ

ಆದರೆ, ಕಾನೂನು ಎಲ್ಲರಿಗೂ ಒಂದೇ. ಕೆಲಸದ ಸ್ಥಳಗಳಲ್ಲಿ ನಡೆಯುವ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳ ವಿರುದ್ಧ ಯಾವ ಕಾನೂನುಗಳಿವೆ ಮತ್ತು ಯಾವ ರೀತಿಯ ಶಿಕ್ಷೆಗಳಿವೆ ಎಂಬುದನ್ನು ಮಹಿಳೆಯರು ಮತ್ತು ಪುರುಷರು ಇಬ್ಬರೂ ತಿಳಿದುಕೊಳ್ಳಬೇಕಿದೆ.

ಪೋಶ್ ಮತ್ತು ಅಪರಾಧ ಕಾನೂನು ಕಾಯ್ದೆ

ಪೋಶ್ ಮತ್ತು ಅಪರಾಧ ಕಾನೂನು ಕಾಯ್ದೆ

1997ರಲ್ಲಿ ಸುಪ್ರೀಂಕೋರ್ಟ್ ಅಸ್ತಿತ್ವಕ್ಕೆ ತಂದಿದ್ದ ವಿಶಾಖಾ ಗೈಡ್‌ಲೈನ್ಸ್‌ಅನ್ನು (ಭಾರತದಲ್ಲಿನ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಬಳಸುವ ಮಾರ್ಗಸೂಚಿ) ರದ್ದುಗೊಳಿಸಿ, ಕೆಲಸದ ಸ್ಥಳದಲ್ಲಿ ಮಹಿಳೆಯ ಮೇಲಿನ ಕಿರುಕುಳ (ತಡೆ, ನಿಷೇಧ ಮತ್ತು ನಿವಾರಣೆ) ಕಾಯ್ದೆ, 2013 ಅಥವಾ ಪೋಶ್ ಕಾಯ್ದೆಯನ್ನು ಅಂಗೀಕರಿಸಲಾಯಿತು.

ಅಪರಾಧ ಕಾನೂನು (ತಿದ್ದುಪಡಿ) ಕಾಯ್ದೆ, 2013ಅನ್ನು ಅಂಗೀಕರಿಸಲಾಯಿತು. ಭಾರತೀಯ ನೀತಿ ಸಂಹಿತೆಗೆ ಸೆಕ್ಷನ್ 354ಅನ್ನು ಅಳವಡಿಸಲಾಯಿತು. ಇದರಲ್ಲಿ ಲೈಂಗಿಕ ಕಿರುಕುಳ ಮತ್ತು ಆ ಅಪರಾಧಕ್ಕೆ ಇರುವ ದಂಡಗಳ ಕುರಿತು ವಿವರಿಸಲಾಗಿದೆ. ಜತೆಗೆ ಲೈಂಗಿಕ ಕಿರುಕುಳವನ್ನು ಅಪರಾಧವಾಗಿದ್ದು, ಇಂತಹ ಅಪರಾಧಗಳ ಬಗ್ಗೆ ನೌಕರರು ಮಾಹಿತಿ ನೀಡಬೇಕು ಎಂದು ಈ ಕಾಯ್ದೆ ಹೇಳಿದೆ.

ಉದ್ಯೋಗದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ

ಉದ್ಯೋಗದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ

ಅನುಚಿತವಾದ, ಲೈಂಗಿಕ ಉದ್ದೇಶದ ವರ್ತನೆಯನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದು ನೇರ ಅಥವಾ ಪರೋಕ್ಷವಾಗಿ ಇರಬಹುದು.

* ದೈಹಿಕ ಸ್ಪರ್ಶ ಮತ್ತು ಅದರ ಮುಂದುವರಿಕೆ
* ಲೈಂಗಿಕ ಸಹಕಾರಗಳಿಗೆ ಬೇಡಿಕೆ ಅಥವಾ ಮನವಿ
* ಲೈಂಗಿಕತೆಗೆ ಸಂಬಂಧಿಸಿದ ಹೇಳಿಕೆಗಳು
* ಅಶ್ಲೀಲ ಚಿತ್ರಗಳನ್ನು ತೋರಿಸುವುದು
* ಯಾವುದೇ ರೀತಿಯ ಲೈಂಗಿಕ ಅನುಚಿತ ದೈಹಿಕ, ವಾಕ್ ಅಥವಾ ಇತರೆ ರೀತಿಯ ನಡವಳಿಕೆ.

ಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳ ಆರೋಪಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ

ಉದ್ಯೋಗದಾತರ ಕರ್ತವ್ಯ

ಉದ್ಯೋಗದಾತರ ಕರ್ತವ್ಯ

* ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುದು ಉದ್ಯೋಗದಾತರ ಕರ್ತವ್ಯ. ಇಲ್ಲಿ ಲೈಂಗಿಕ ಕಿರುಕುಳದ ವಿರುದ್ಧದ ನಿಯಮಗಳನ್ನು ಸೂಕ್ತ ರೀತಿಯಲ್ಲಿ ಪ್ರಸರಿಸುವ, ಪ್ರದರ್ಶಿಸುವ ಕೆಲಸ ಮಾಡಬೇಕು.
* ಅದರ ಉಲ್ಲಂಘನೆಗೆ ಸಮರ್ಪಕ ಶಿಕ್ಷೆ ವಿಧಿಸಬೇಕು.

ತನಿಖೆಗೆ ಹೋಗುವುದು ಹೇಗೆ?

ತನಿಖೆಗೆ ಹೋಗುವುದು ಹೇಗೆ?

ಯಾವುದೇ ಆರೋಪವನ್ನು ವಿಚಾರಣೆ ನಡೆಸಲು ಪ್ರತಿ ಉದ್ಯೋಗ ಸ್ಥಳದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳಿರುವಲ್ಲಿ ಆಂತರಿಕ ತನಿಖಾ ಸಮಿತಿಯೊಂದನ್ನು ರಚಿಸಬೇಕು. ಕಂಪೆನಿಯ ಎಲ್ಲ ಘಟಕ ಅಥವಾ ಕಚೇರಿಗಳಲ್ಲಿ ಸಮಿತಿ ಇರಬೇಕು. ಈ ಸಮಿತಿಯಲ್ಲಿ ಕನಿಷ್ಠ ನಾಲ್ಕು ಸದಸ್ಯರು ಇರಬೇಕು ಮತ್ತು ಅದರಲ್ಲಿ ಅರ್ಧದಷ್ಟು ಮಹಿಳಾ ಸದಸ್ಯರು ಇರಬೇಕು. ಇದರ ನೇತೃತ್ವವನ್ನು ಹಿರಿಯ ಮಟ್ಟದಲ್ಲಿನ ಮಹಿಳಾ ಅಧಿಕಾರಿಗೆ ವಹಿಸಬೇಕು.

ಹತ್ತಕ್ಕಿಂತ ಕಡಿಮೆ ನೌಕರರು ಇರುವ ಕಂಪೆನಿಗಳಲ್ಲಿ ಸಮಿತಿ ರಚಿಸುವ ಅಗತ್ಯವಿಲ್ಲ. ಇಲ್ಲಿನ ಎಲ್ಲ ದೂರುಗಳನ್ನೂ ಪ್ರತಿ ಜಿಲ್ಲೆಗಳಲ್ಲಿ ಕಾಯ್ದೆ ಅಡಿ ಇರುವ ಜಿಲ್ಲಾ ಅಧಿಕಾರಿಗಳ ಸಮಿತಿಗೆ ಸಲ್ಲಿಸಬೇಕು.

ಈ ಸಮಿತಿಯು ಮಹಿಳಾ ಹಕ್ಕು ಅಥವಾ ಅದಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎನ್‌ಜಿಒದ ಒಬ್ಬ ಬಾಹ್ಯ ಸದಸ್ಯರನ್ನು ಒಳಗೊಂಡಿರಬೇಕು.

ಲೈಂಗಿಕ ದೌರ್ಜನ್ಯದ ದೂರು ನೀಡುವುದಕ್ಕೆ ಸಮಯದ ಮಿತಿಯಿಲ್ಲ: ಮನೇಕಾ ಗಾಂಧಿಲೈಂಗಿಕ ದೌರ್ಜನ್ಯದ ದೂರು ನೀಡುವುದಕ್ಕೆ ಸಮಯದ ಮಿತಿಯಿಲ್ಲ: ಮನೇಕಾ ಗಾಂಧಿ

ಕಂಪೆನಿಯ ಹೊಣೆಗಳೇನು?

ಕಂಪೆನಿಯ ಹೊಣೆಗಳೇನು?

* ಲೈಂಗಿಕ ಕಿರುಕುಳದ ವಿಚಾರಗಳನ್ನು ಸಿಬ್ಬಂದಿ ಸಭೆಗಳಲ್ಲಿ ಮತ್ತು ಇತರೆ ಸೂಕ್ತ ವೇದಿಕೆಗಳಲ್ಲಿ ಪ್ರಸ್ತಾಪಿಸಲು ಕೆಲಸಗಾರರಿಗೆ ಅವಕಾಶ ನೀಡಬೇಕು ಮತ್ತು ಇದರ ಬಗ್ಗೆ ಉದ್ಯೋಗದಾತರ ಸಭೆಗಳಲ್ಲಿ ವ್ಯಾಪಕವಾಗಿ ಚರ್ಚೆ ನಡೆಯಬೇಕು ಎಂದು ಕಾನೂನು ಹೇಳುತ್ತದೆ.

* ಮಾರ್ಗದರ್ಶಿಗಳನ್ನು ಪ್ರಕಟಿಸುವುದರ ಮೂಲಕ ಮಹಿಳಾ ಉದ್ಯೋಗಿಗಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಮುಖವಾಗಿ ಮಾಡಬೇಕು.

* ಸಂತ್ರಸ್ತೆ ಅಥವಾ ಸಾಕ್ಷಿದಾರರ ವಿರುದ್ಧ ತಾರತಮ್ಯ ನಡೆಯದಂತೆ ತಡೆಯುವುದು ಮತ್ತು ದೌರ್ಜನ್ಯಕ್ಕೆ ಒಳಗಾದ ಆರೋಪ ಮಾಡಿರುವ ಸಂತ್ರಸ್ತೆ ವರ್ಗಾವಣೆಯ ಆಯ್ಕೆ ಇದ್ದು ಅದಕ್ಕೆ ಕೋರಿದಾಗ ಅದಕ್ಕೆ ಅವಕಾಶ ನೀಡುವುದು ಕಂಪೆನಿಯ ಹೊಣೆಗಾರಿಕೆ.

* ಕಚೇರಿ ಮಾತ್ರವಲ್ಲದೆ, ಕೆಲಸಕ್ಕೆ ಸಂಬಂಧಿಸಿದಂತೆ ಉದ್ಯೋಗಿಯು ಭೇಟಿ ನೀಡುವ ಯಾವುದೇ ಸ್ಥಳ, ಆ ಭೇಟಿಗೆ ಒದಗಿಸುವ ಸಾರಿಗೆ ಸೌಲಭ್ಯ ಕೂಡ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ರೆಸ್ಟೋರೆಂಟ್‌ಗಳಲ್ಲಿನ ಊಟದ ಅವಧಿಯಲ್ಲಿ ಕಿರುಕುಳ ನಡೆದರೂ ಅದನ್ನು ಪರಿಗಣಿಸಲಾಗುತ್ತದೆ.

ಉಲ್ಲಂಘನೆಯಾದರೆ ಏನು ಶಿಕ್ಷೆ?

ಉಲ್ಲಂಘನೆಯಾದರೆ ಏನು ಶಿಕ್ಷೆ?

* ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುವ ಅಪರಾಧಕ್ಕೆ ಕ್ರಮಿನಲ್ ಲಾ ಆಕ್ಟ್ 2013ರ ಅಡಿಯಲ್ಲಿ 1ರಿಂದ 5 ವರ್ಷ ಜೈಲು ಮತ್ತು ದಂಡ ವಿಧಿಸಬಹುದು.

* ಮಹಿಳೆಯ ಗಮನಕ್ಕೆ ಬಾರದಂತೆ ಆಕೆಯ ಚಿತ್ರವನ್ನು ನೋಡುವುದು, ತೆಗೆಯುವುದು ಮತ್ತು ಹಂಚುವುದನ್ನು ಮಾಡಿದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಅಡಿ 1 ರಿಂದ 7 ವರ್ಷ ಜೈಲು ಮತ್ತು ದಂಡ ವಿಧಿಸಲು ಅವಕಾಶವಿದೆ.

* ಮಹಿಳೆಯ ಗೌರವಕ್ಕೆ ಕುಂದು ತರುವಂತೆ ಪದಗಳ ಬಳಕೆ, ಹಾವಭಾವಗಳನ್ನು ಪ್ರದರ್ಶನಕ್ಕೆ 2013ರ ಕ್ರಿಮಿನಲ್ ಕಾನೂನು ಕಾಯ್ದೆಯಡಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದು.

* ತಮ್ಮ ಅಧೀನ ನೌಕರರ ಜತೆ ಸಹಮತದ ಲೈಂಗಿಕ ಸಂಬಂಧ ಹೊಂದಿದರೂ ಅಪರಾಧ ಕಾನೂನು ಕಾಯ್ದೆಯಡಿ 5 ರಿಂದ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು.

English summary
There are many laws to protect women in workplace from the cases related to sexual harassment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X