• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ ಅವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತೇ? RTI ಸ್ಪೋಟಕ ಮಾಹಿತಿ

|

ನವದೆಹಲಿ, ಮೇ 7: ಜಮ್ಮು ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಆರ್ಟಿಐ ಅರ್ಜಿಯನ್ನು ರಕ್ಷಣಾ ಸಚಿವಾಲಯ (MoD) ವಿಲೇವಾರಿ ಮಾಡಿದೆ. ಈ ಹಿಂದೆ, ಸರ್ಜಿಕಲ್ ಸ್ಟ್ರೈಕ್ ನಡೆದಿತ್ತೇ ಎಂದು ಅರ್ಜಿದಾರರು ಮಾಹಿತಿ ಕೇಳಿದ್ದರು.

ಎನ್ದಿಎ ಅಧಿಕಾರಕ್ಕೆ ಬರುವ ಮೊದಲು ಕೂಡಾ, ಯುಪಿಎ ಸರಕಾರದ ಅವಧಿಯಲ್ಲಿ ಆರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು, ಆದರೆ, ಕಾಂಗ್ರೆಸ್ ಪಕ್ಷ ಅದನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಂಡಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡರು ಸಾಲುಸಾಲಾಗಿ ಹೇಳಿಕೆಯನ್ನು ನೀಡಿದ್ದರು.

ಸೈನಿಕರ ರಕ್ತಕ್ಕೆ ಕಾಂಗ್ರೆಸ್ ಕ್ರೆಡಿಟ್ ಪಡೆದುಕೊಳ್ಳಲಿಲ್ಲ: ರಾಹುಲ್ ಗಾಂಧಿ

ಯುಪಿಎ ಅವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆದ ಬಗ್ಗೆ ಪಾಕಿಸ್ತಾನಕ್ಕಾಗಲಿ, ಉಗ್ರರಿಗಾಗಲಿ, ಅಷ್ಟೇ ಯಾಕೆ ಭಾರತೀಯ ಸೇನೆಗೂ ಈ ವಿಚಾರ ತಿಳಿದಿಲ್ಲ ಎಂದು ಪ್ರಧಾನಿ ಮೋದಿಯಾದಿಯಾಗಿ ಬಿಜೆಪಿಯವರು ಲೇವಡಿ ಮಾಡಿದ್ದರು.

ರೋಹಿತ್ ಚೌಧುರಿ ಎನ್ನುವ ಜಮ್ಮು ಮೂಲದ ಕಾರ್ಯಕರ್ತ, 2004 ರಿಂದ 2014ರ ಅವಧಿಯಲ್ಲಿ ಎಷ್ಟು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂದು ರಕ್ಷಣಾ ಸಚಿವಾಲಯಕ್ಕೆ ಆರ್ಟಿಐ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವಾಲಯ, ಇದುವರೆಗೆ 'ಒಂದು' ಸರ್ಜಿಕಲ್ ಸ್ಟ್ರೈಕ್ ನಡೆದ ಬಗ್ಗೆ ಮಾತ್ರ ಮಾಹಿತಿಯಿದೆ ಎಂದು ಹೇಳಿದೆ.

'ಯುಪಿಎ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ಪಾಕ್‌ಗೂ ಗೊತ್ತಿಲ್ಲ, ಉಗ್ರರಿಗೂ ಗೊತ್ತಿಲ್ಲ'

ಉತ್ತರ ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಸೆಪ್ಟಂಬರ್ 29, 2016ರಂದು ನಡೆದ ಸರ್ಜಿಕಲ್ ಸ್ಟ್ರೈಕ್ ಬಿಟ್ಟರೆ, ಬೇರೆ ಯಾವ ಮಾಹಿತಿಯೂ ಇಲ್ಲ ಎಂದು ಅರ್ಜಿದಾರರಿಗೆ ರಕ್ಷಣಾ ಸಚಿವಾಲಯ ಉತ್ತರಿಸಿದೆ.

ಸಚಿವಾಲಯದಿಂದ ಉತ್ತರ ಬಂದ ನಂತರ ಮಾತನಾಡಿದ ಅರ್ಜಿದಾರ ರೋಹಿತ್, ಸರ್ಜಿಕಲ್ ಸ್ಟ್ರೈಕ್ ಯುಪಿಎ ಅವಧಿಯಲ್ಲೂ ನಡೆದಿತ್ತು ಎನ್ನುವ ಮೂಲಕ, ಕಾಂಗ್ರೆಸ್ ಜನರನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

English summary
In reply to an RTI filed by a Jammu-based activist, the Ministry of Defence (MoD) has said that they do not have information about any surgical strikes conducted by the Indian Army before 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X