ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಜತೆ ಮೋಹನ್ ಲಾಲ್ ಭೇಟಿ, ಸೂಪರ್ ಸ್ಟಾರ್ ಕಣಕ್ಕೆ?

By Mahesh
|
Google Oneindia Kannada News

Recommended Video

ಮೋದಿ ಭೇಟಿ ಮಾಡಿದ ನಟ ಮಲಯಾಳಂ ನಟ ಮೋಹನ್ ಲಾಲ್‌ | Oneindia Kannada

ನವದೆಹಲಿ, ಸೆಪ್ಟೆಂಬರ್ 04: ಕೇರಳದಲ್ಲಿ ಕೇಸರಿ ರಂಗು ಪಸರಿಸಲು ಇನ್ನಿಲ್ಲದ್ದಂತೆ ಯತ್ನಿಸುತ್ತಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ವು ಸ್ಟಾರ್ ನಟರ ಹಿಂದೆ ಬಿದ್ದಿದೆ. ಸುರೇಶ್ ಗೋಪಿ ನಂತರ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎಂಬ ಸುದ್ದಿ ಹಬ್ಬಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೋಹನ್ ಲಾಲ್ ಅವರು ಭೇಟಿ ಮಾಡಿದ ನಂತರ ಈ ರೀತಿ ಸುದ್ದಿ ಹಬ್ಬಿದೆ. ಆದರೆ, ಕೇರಳದ ಪ್ರವಾಹ ಪರಿಸ್ಥಿತಿ ಬಗ್ಗೆ ಮೋದಿ ಅವರಿಗೆ ಮನವರಿಕೆ ಮಾಡಿಕೊಡಲು ಮೋಹನ್ ಲಾಲ್ ಭೇಟಿ ನೀಡಿದ್ದರು ಎಂದು ಅವರ ವಕ್ತಾರರು ಹೇಳಿದ್ದಾರೆ.

ಕುತೂಹಲದ ಸಂಗತಿಯೆಂದರೆ, ಮೋಹನ್ ಲಾಲ್ ಅವರ ವಿಶ್ವಶಾಂತಿ ಫೌಂಡೇಷನ್ ಜತೆ ಆರೆಸ್ಸೆಸ್ ನ ರಾಷ್ಟ್ರೀಯ ಸೇವಾ ಭಾರತಿ ಕೂಡಾ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ, ಮೋಹನ್ ಲಾಲ್ ಅವರನ್ನು ಸಕ್ರಿಯ ರಾಜಕೀಯಕ್ಕೆ ಕರೆ ತರಲು ಆರೆಸ್ಸೆಸ್ ಕೂಡಾ ಸಹಮತ ವ್ಯಕ್ತಪಡಿಸಿದೆ. ಎಲ್ಲವೂ ಅಂದು ಕೊಂಡತೆ ನಡೆದರೆ, ತ್ರಿವೇಂಡ್ರಮ್ ಕ್ಷೇತ್ರದಲ್ಲಿ ಮಾಜಿ ಕೇಂದ್ರ ಸಚಿವ ಶಶಿ ತರೂರ್ ವಿರುದ್ಧ ಮೋಹನ್ ಲಾಲ್ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎದುರಿಸಬಹುದು.

ಗೋಪಿಗೆ ಕೊಟ್ಟ ಮಾತು ಉಳಿಸಿಕೊಂಡ ಪ್ರಧಾನಿ ಮೋದಿಗೋಪಿಗೆ ಕೊಟ್ಟ ಮಾತು ಉಳಿಸಿಕೊಂಡ ಪ್ರಧಾನಿ ಮೋದಿ

ಕೇರಳದಲ್ಲಿ ಬಿಜೆಪಿ ತನ್ನ ವೋಟ್ ಶೇರ್ ಹೆಚ್ಚಿಸಿಕೊಂಡರೂ, ಹೆಚ್ಚಿನ ಮಟ್ಟದಲ್ಲಿ ಪ್ರಭಾವವನ್ನು ಹೊಂದಲಾಗಿಲ್ಲ. ಅಸೆಂಬ್ಲಿ ಸ್ಥಾನ ಗೆಲ್ಲಲು ಪರದಾಡುತ್ತಿದೆ. ಆದೆ, ಸ್ಟಾರ್ ನಟರನ್ನು ಪಕ್ಷಕ್ಕೆ ಸೇರಿಸಿಕೊಂಡು, ತನ್ನ ಬಲ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ.

ಬಿಜೆಪಿಯ ಸ್ಥಿತಿ ಬದಲಾಗಿಲ್ಲ

ಬಿಜೆಪಿಯ ಸ್ಥಿತಿ ಬದಲಾಗಿಲ್ಲ

ಮಾಜಿ ಕೇಂದ್ರ ಸಚಿವ ಓ ರಾಜಗೋಪಾಲ್ ಅವರು ಒಂದು ಅಸೆಂಬ್ಲಿ ಸ್ಥಾನ ಗಳಿಸಿದ್ದು ಬಿಟ್ಟರೆ, ಮಲೆಯಾಳಂನ ಸ್ಟಾರ್ ನಟ ಸುರೇಶ್ ಗೋಪಿ ಅವರು ಬಿಜೆಪಿ ಪರ ಅಸೆಂಬ್ಲಿ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರು. ತೆರಿಗೆ ವಂಚನೆ ಪ್ರಕರಣದಲ್ಲಿ ಸಿಲುಕಿದ್ದ ಗೋಪಿ ಸದ್ಯ ರಾಜ್ಯಸಭಾ ಸದಸ್ಯರಾಗಿದ್ದಾರೆ. ಈಗ ಮೋಹನ್ ಲಾಲ್ ಅವರನ್ನು ಕರೆ ತಂದು ಕೇರಳದಲ್ಲಿ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ.

ಮೋದಿ ಬೆಂಬಲಿಸಿದ್ದ ಮೋಹನ್ ಲಾಲ್

ಪ್ರಧಾನಿ ಮೋದಿ ಅವರ ಅಪನಗದೀಕರಣ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಸ್ವಚ್ಛತಾ ಹಿ ಸೇವಾ ಅಭಿಯಾನಗಳನ್ನು ಮೆಚ್ಚಿದ್ದ ಮೋಹನ್ ಲಾಲ್ ಅವರು, ಮೋದಿ ಅವರು ಈ ಅಭಿಯಾನದಲ್ಲಿ ಕೈ ಜೋಡಿಸುವಂತೆ ಮೋಹನ್ ಲಾಲ್ ಅವರಿಗೆ ಬರೆದ ಪತ್ರವನ್ನು ಕೇರಳ ಬಿಜೆಪಿ ಬಹಿರಂಗ ಪಡಿಸಿ, ಪ್ರಚಾರ ಪಡೆದಿತ್ತು

ಮೋಹನ್ ಲಾಲ್ ಟ್ವೀಟ್

ಜಲಪ್ರಳಯದಿಂದಾಗಿ ನಾಶವಾಗಿರುವ ಕೇರಳದಲ್ಲಿ ಹೊಸಬದುಕನ್ನು ಕಟ್ಟಿಕೊಡಲು ಮೋಹನ್ ಲಾಲ್ ಅವರ ಎನ್ ಜಿಒ ಮುಂದಾಗಿದೆ. ಇದಕ್ಕಾಗಿ ಜಾಗತಿಕ ಮಲೆಯಾಳಿ ದುಂಡು ಮೇಜಿನ ಸಭೆ ಕರೆಯಲಾಗಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸಕಲ ನೆರವು ನೀಡುವ ಭರವಸೆ ನೀಡಿದೆ ಎಂದು ಮೋಹನ್ ಲಾಲ್ ಹೇಳಿದ್ದಾರೆ.

ಮೋದಿ ಅಣತಿಯಂತೆ ಬಿಜೆಪಿ ಸೇರಿದ ಗೋಪಿ

ಮೋದಿ ಅಣತಿಯಂತೆ ಬಿಜೆಪಿ ಸೇರಿದ ಗೋಪಿ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕರೂ, 1998ರಲ್ಲಿ ನ್ಯೂಡೆಲ್ಲಿ ಕನ್ನಡ ಚಿತ್ರದಲ್ಲಿ ನಟಿಸಿದ್ದ ಗೋಪಿ ಅವರು ಬಿಜೆಪಿ ಆಫರ್ ತಿರಸ್ಕರಿಸಿದ್ದರು. ಸ್ಟಾರ್ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದರು. ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ, ನ್ಯಾಷನಲ್ ಫಿಲಂ ಡೆವಲ್ಪ್ ಮೆಂಟ್ ಕಾರ್ಪೊರೇಷನ್ (ಎನ್ಎಫ್ ಡಿಸಿ) ಚೇರ್ಮನ್ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಗೋಪಿಗೆ ರಾಜ್ಯಸಭೆ ಸ್ಥಾನ ಒಲಿದು ಬಂದಿತ್ತು.

English summary
Speculations have started doing the rounds that Malayalam superstar Mohanlal might join the BJP ahead of the 2019 Lok Sabha elections after his meeting with Prime Minister Narendra Modi on Janmashtami
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X