ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಜ್ ಮಹಲ್ ನಲ್ಲಿ ನಮಾಜ್ ನಿಷೇಧಿಸುವಂತೆ ಒತ್ತಾಯ

|
Google Oneindia Kannada News

ಆಗ್ರಾ, ಅಕ್ಟೋಬರ್, 27 ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಕೈಪಿಡಿಯಲ್ಲಿ ತಾಜ್ ಮಹಲ್ ನಾಪತ್ತೆಯಾದ ದಿನಗಳಿಂದ ಈ ಸ್ಮಾರಕದ ಬಗ್ಗೆ ಒಂದಿಲ್ಲೊಂದು ಚರ್ಚೆಗಳು ನಡೆಯುತ್ತಿವೆ.

ಯೋಗಿಯ ಸ್ವಚ್ಛತಾ ನಾಟಕಕ್ಕೆ ವೇದಿಕೆಯಾದ ತಾಜ್ ಮಹಲ್ಯೋಗಿಯ ಸ್ವಚ್ಛತಾ ನಾಟಕಕ್ಕೆ ವೇದಿಕೆಯಾದ ತಾಜ್ ಮಹಲ್

ತಾಜ್ ಮಹಲ್ ನಲ್ಲಿ ಶುಕ್ರವಾರದಂದು ನಡೆಯುವ ನಮಾಜ್ ಮಾಡಲು ಅವಕಾಶ ಕೊಡಬಾರದು ಎಂದು ಅಖಿಲ ಭಾರತೀಯ ಇತಿಹಾಸ ಸಂಕಲನ ಸಮಿತಿ ಆಗ್ರಹಿಸಿದೆ.

RSS history wing wants ban on namaz at Taj Mahal

ಇಂಡಿಯಾಟುಡೇ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ. ಬಾಲಮುಕುಂದ್ ಪಾಂಡೆ, ಅದು ಪಾರಂಪರಿಕ ಸ್ಥಳವಾಗಿ ಉಳಿಯಬೇಕಾದರೆ ಅಲ್ಲಿ ನಮಾಜ್ ನ್ನು ನಿಷೇಧಿಸಬೇಕು.

ತಾಜ್ ಮಹಲ್ ಒಂದು ರಾಷ್ಟ್ರೀಯ ಪಾರಂಪರಿಕ ಸ್ಥಳವಾಗಿದ್ದರೇ, ಅದನ್ನು ಮುಸ್ಲಿಮರು ಧಾರ್ಮಿಕ ಸ್ಥಳವನ್ನಾಗಿರಿಸಿಕೊಂಡಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.

ಒಂದು ವೇಳೆ, ತಾಜ್ ಮಹಲ್ ನಲ್ಲಿ ನಮಾಜ್ ನಿಷೇಧಿಸಲು ಸಾಧ್ಯವಿಲ್ಲವಾದರೆ ಅಲ್ಲಿ ಹಿಂದೂಗಳಿಗೆ ಶಿವನ ಪ್ರಾರ್ಥನೆ ಮಾಡಲೂ ಅನುವು ಮಾಡಿಕೊಡಬೇಕೆಂದು ಪಾಂಡೆ ಒತ್ತಾಯಿಸಿದರು.

ಪ್ರತಿ ಶುಕ್ರವಾರದಂದು ತಾಜ್ ಮಹಲ್ ನಲ್ಲಿ ನಮಾಜ್ ನಡೆಯುತ್ತದೆ. ಈ ಸಂದರ್ಭದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.

ಪಾಂಡೆ ಅವರ ಈ ಹೇಳಿಕೆ ಇದೀಗ ಹಲವು ಚರ್ಚೆಗೆ ಎಡೆಮಾಡಿಕೊಟ್ಟಿದೆ.

English summary
In what likely to pave way for a new round of debate, the history wing of Rashtriya Swayamsevak Sangh-Akhil Bhartiya Itihaas Sankalan Samiti has demanded that Friday prayers at Taj Mahal should be banned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X