ಕೈಸ್ತ್ರ ಧರ್ಮದಿಂದ 53 ಕುಟುಂಬಗಳು ಮತ್ತೆ ಹಿಂದೂ ತೆಕ್ಕೆಗೆ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 11: ಜಾರ್ಖಂಡ್ ರಾಜ್ಯದಲ್ಲಿ ತಾನು ಇತ್ತೀಚೆಗೆ ಕೈಗೊಂಡಿದ್ದ 'ಕ್ರಿಶ್ಚಿಯಾನಿಟಿ ಫ್ರೀ' ಅಭಿಯಾನದ ಫಲವಾಗಿ ಸುಮಾರು 53 ಕ್ರೈಸ್ತ ಕುಟುಂಬಗಳು ಹಿಂದೂ ಧರ್ಮಕ್ಕೆ ಪರಿವರ್ತನೆಗೊಂಡಿದ್ದಾರೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಅಧಿಕೃತವಾಗಿ ಪ್ರಕಟಿಸಿರುವುದಾಗಿ ದ ಹಫಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಈ 53 ಕುಟುಂಬಗಳು ಮೂಲತಃ ಜಾರ್ಖಂಡ್ ನ ಬುಡಕಟ್ಟು ಜನಾಂಗಗಳಿಗೆ ಸೇರಿದವು. ಅಭಿಯಾನದ ವೇಳೆ ಈ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿವೆ ಎಂದು ಹೇಳಿದೆ.

RSS Claims That 53 Families 'Returned' To Hinduism In Its 'Christianity in Jharkhand

ಘರ್ ವಾಪಸೀ ಹೆಸರಿನಲ್ಲಿ ನಡೆಯುತ್ತಿರುವ ಈ ಅಭಿಯಾನವನ್ನು ತಾನು ಏಪ್ರಿಲ್ ಮಾಸಾದ್ಯಂತ ಕೈಗೊಳ್ಳುವುದಾಗಿ ಅದು ಹೇಳಿದೆ.

ಆದರೆ, ಜಾರ್ಖಂಡ್ ನ ಮುಖ್ಯಮಂತ್ರಿ ರಘುಬಾರ್ ದಾಸ್ ಅವರು, ಬುಡಕಟ್ಟು ಜನಾಂಗದವರನ್ನು ಹೀಗೆ ಮತಪರಿವರ್ತನೆ ಮಾಡುವುದು ಛೋಟಾ ನಾಗ್ಪುರ ಹಿಡುವಳಿ ಕಾಯ್ದೆ (ಸಿಎನ್ ಟಿಎ) ಹಾಗೂ ಸಂತಾಳ್ ಪರ್ಗಣಾ ಹಿಡುವಳಿ ಕಾಯ್ದೆ (ಎಸ್ ಪಿಟಿಎ) ಸ್ಪಷ್ಟ ಉಲ್ಲಂಘನೆ ಎಂದು ಹೇಳಿದ್ದರು. ಅಲ್ಲದೆ, ಬುಡಕಟ್ಟು ಜನಾಂಗದವರ ಮತಾಂತರ ಪ್ರಯತ್ನಗಳು ಕಾನೂನು ಬಾಹಿರವಾದವು ಎಂದೂ ಎಚ್ಚರಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Rashtriya Swayamsevak Sangh (RSS) workers have claimed that they recently re-converted 53 families to Hinduism as part of its "Christianity-free" campaign in the Arki block of Khunti district in Jharkhand, the Huffington Post reports.
Please Wait while comments are loading...