ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬ್ಬ ಹಿಂದೂ ಎಂದಿಗೂ ದೇಶ ವಿರೋಧಿಯಾಗಲಾರ: ಮೋಹನ್ ಭಾಗವತ್

|
Google Oneindia Kannada News

ನವದೆಹಲಿ, ಜನವರಿ 2: ಒಬ್ಬ ವ್ಯಕ್ತಿ ಹಿಂದೂವಾಗಿದ್ದರೆ, ಆತ ದೇಶಭಕ್ತನೂ ಆಗಿರುತ್ತಾನೆ. ಅದು ಆತನ ಮೂಲ ಗುಣ ಮತ್ತು ಸ್ವಭಾವವಾಗಿರುತ್ತದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ತಮ್ಮ ದೇಶಭಕ್ತಿಯು ತಮ್ಮ ಧರ್ಮದಿಂದಲೇ ಬಂದಿರುವುದು ಎಂಬ ಮಹಾತ್ಮ ಗಾಂಧಿ ಅವರ ಹೇಳಿಕೆಯನ್ನು ಮೋಹನ್ ಭಾಗವತ್ ಉಲ್ಲೇಖಿಸಿದ್ದಾರೆ.

ಜೆಕೆ ಬಜಾಜ್ ಮತ್ತು ಎಂಡಿ ಶ್ರೀನಿವಾಸ್ ಅವರು ಬರೆದ 'ಮೇಕಿಂಗ್ ಆಫ್ ಎ ಹಿಂದೂ ಪ್ಯಾಟ್ರಿಯಾಟ್: ಬ್ಯಾಕ್‌ಗ್ರೌಂಡ್ ಆಫ್ ಗಾಂಧೀಜಿಸ್ ಹಿಂದ್ ಸ್ವರಾಜ್' (ಹಿಂದೂ ದೇಶಭಕ್ತನೊಬ್ಬನ ಸೃಷ್ಟಿಸುವಿಕೆ: ಗಾಂಧೀಜಿ ಅವರ ಹಿಂದ್ ಸ್ವರಾಜ್ ಹಿನ್ನೆಲೆ) ಎಂಬ ಕೃತಿಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದರು.

ಮುಸ್ಲಿಮರ ಬಗ್ಗೆ ಮೋಹನ್ ಭಾಗ್ವತ್ ಹೇಳಿಕೆಗೆ ಓವೈಸಿ ತಿರುಗೇಟುಮುಸ್ಲಿಮರ ಬಗ್ಗೆ ಮೋಹನ್ ಭಾಗ್ವತ್ ಹೇಳಿಕೆಗೆ ಓವೈಸಿ ತಿರುಗೇಟು

ಪುಸ್ತಕದ ಕುರಿತು ಮಾತನಾಡಿದ ಅವರು, ಇದು ಮಹಾತ್ಮ ಗಾಂಧಿ ಅವರ ಕುರಿತಾದ ಅಧಿಕೃತ ಪಾಂಡಿತ್ಯಪೂರ್ಣ ಸಂಶೋಧನಾ ದಾಖಲೆ ಎಂದು ಬಣ್ಣಿಸಿದರು. ತಮ್ಮ ಧರ್ಮ ಮತ್ತು ದೇಶಭಕ್ತಿಯು ತಮ್ಮಲ್ಲಿನ ಅಧ್ಯಾತ್ಮದಿಂದ ಉತ್ಪತ್ತಿಯಾಗುವ ತಾಯ್ನಾಡಿನ ಪ್ರೀತಿಗಿಂತ ಭಿನ್ನವಲ್ಲ ಎಂದರು. ಮುಂದೆ ಓದಿ.

ಶಕ್ತಿ, ವ್ಯಾಪ್ತಿಯಲ್ಲಿ ಚೀನಾ ಮೀರಿಸಿ ಭಾರತ ಬೆಳೆಯಲಿ: ಭಾಗ್ವತ್ಶಕ್ತಿ, ವ್ಯಾಪ್ತಿಯಲ್ಲಿ ಚೀನಾ ಮೀರಿಸಿ ಭಾರತ ಬೆಳೆಯಲಿ: ಭಾಗ್ವತ್

ಧರ್ಮದಿಂದಲೇ ದೇಶಭಕ್ತಿ ಹುಟ್ಟಿತು

ಧರ್ಮದಿಂದಲೇ ದೇಶಭಕ್ತಿ ಹುಟ್ಟಿತು

'ತಮ್ಮ ಧರ್ಮದಿಂದಲೇ ತಮ್ಮ ದೇಶಭಕ್ತಿ ಹುಟ್ಟಿಕೊಂಡಿತ್ತು ಎಂದು ಗಾಂಧೀಜಿ ಹೇಳಿದ್ದರು. ಧರ್ಮ ಎಂದರೆ ಕೇವಲ ಮತದ ಅರ್ಥವಲ್ಲ. ಅದು ಮತಕ್ಕಿಂತಲೂ ವಿಶಾಲವಾಗಿದೆ' ಎಂದು ಮೋಹನ್ ಭಾಗವತ್ ತಿಳಿಸಿದರು.

ದೇಶ ವಿರೋಧಿಯಾಗಲಾರ

ದೇಶ ವಿರೋಧಿಯಾಗಲಾರ

'ಒಬ್ಬ ವ್ಯಕ್ತಿ ಹಿಂದೂ ಆಗಿದ್ದರೆ, ಆತ ದೇಶಭಕ್ತನಾಗಿರಲೇಬೇಕು. ಅದು ಆತ/ಆಕೆಯ ಮೂಲ ಗುಣ ಮತ್ತು ಸ್ವಭಾವವಾಗಿರುತ್ತದೆ. ಕೆಲವು ಸಮಯಗಳಲ್ಲಿ ನೀವು ಆತನ ದೇಶಭಕ್ತಿಯನ್ನು ಎಚ್ಚರಿಸಬೇಕಾಗುತ್ತದೆ. ಆದರೆ ಆತ ಎಂದಿಗೂ ಭಾರತ ವಿರೋಧಿಯಾಗಿರಲಾರ. ಆದರೆ ಒಬ್ಬ ವ್ಯಕ್ತಿ ತನ್ನ ದೇಶವನ್ನು ಪ್ರೀತಿಸುತ್ತಾನೆ ಎಂದರೆ ಅದು ಭೂಮಿ ಮಾತ್ರವಲ್ಲ, ಅದು ಜನರು, ನದಿಗಳು, ಸಂಸ್ಕೃತಿ, ಆಚರಣೆಗಳು ಮತ್ತು ಎಲ್ಲವೂ ಆಗಿರುತ್ತದೆ ಎಂಬ ವಾಸ್ತವದ ಬಗ್ಗೆಯೂ ತಿಳಿದಿರಬೇಕು' ಎಂದರು.

ವಿವಿಧತೆಯಲ್ಲಿ ಏಕತೆ

ವಿವಿಧತೆಯಲ್ಲಿ ಏಕತೆ

ವಿವಿಧತೆಯಲ್ಲಿ ಏಕತೆ ನೀತಿಯ ವಿಷಯ ಮಾತ್ರವಲ್ಲ, ಅದು ನಮ್ಮ ಭಾವನೆಗಳಲ್ಲಿದೆ. ನಾನು ನನ್ನ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ. ಆದರೆ ಇತರೆ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಗಾಂಧೀಜಿ ಹೇಳಿದ್ದರು. ಇದು ಭಾರತೀಯ ಚಿಂತನೆಯ ಮೂಲತತ್ವ ಎಂದು ತಿಳಿಸಿದರು.

ಎಲ್ಲ ಧರ್ಮಗಳ ಧರ್ಮ ಹಿಂದುತ್ವ

ಎಲ್ಲ ಧರ್ಮಗಳ ಧರ್ಮ ಹಿಂದುತ್ವ

ಹಿಂದುತ್ವವು ಏಕತೆಯ ಅಸ್ತಿತ್ವವನ್ನು ನಂಬುತ್ತದೆ ಎಂದು ಭಾಗ್ವತ್ ಒತ್ತಿ ಹೇಳಿದರು. 'ಭಿನ್ನಾಭಿಪ್ರಾಯಗಳಿವೆ ಎಂದರೆ ಅದು ಪ್ರತ್ಯೇಕತಾವಾದ ಎಂದರ್ಥವಲ್ಲ. ಹಿಂದೂಯಿಸಂ ಎನ್ನುವುದು ಎಲ್ಲ ಧರ್ಮಗಳ ಧರ್ಮ ಎಂದು ಗಾಂಧೀಜಿ ತಿಳಿಸಿದ್ದರು' ಎಂದು ಹೇಳಿದರು.

ಸ್ವರಾಜ್ಯ ಮತ್ತು ಸ್ವಧರ್ಮ

ಸ್ವರಾಜ್ಯ ಮತ್ತು ಸ್ವಧರ್ಮ

'ಗಾಂಧೀಜಿ ಅವರು 'ಧರ್ಮ' ಎಂದು ಹೇಳಲು ಬಯಸುತ್ತಿದ್ದರು. ಆದರೆ ಅದಕ್ಕೆ ಇಂಗ್ಲಿಷ್‌ನಲ್ಲಿ ಸಮಾನಾಂತರ ಪದವಿಲ್ಲ. ಗಾಂಧೀಜಿ ಸ್ವರಾಜ್ಯ (ಸ್ವಯಂ ಆಡಳಿತ) ಚಳವಳಿಯನ್ನು ಆರಂಭಿಸಿದರು. ಆದರೆ ನಿಮಗೆ 'ಸ್ವಧರ್ಮ' ಆರ್ಥವಾಗುವವರೆಗೂ ನೀವು ಸ್ವರಾಜ್ಯವನ್ನು ಅರ್ಥಮಾಡಿಕೊಳ್ಳಲಾರಿರಿ' ಎಂದರು.

English summary
If someone is a Hindu, he has to be patriotic and that will be his basic character and nature: RSS chief Mohan Bhagwat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X