ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಬಳಿಕ ರಾಮ ಮಂದಿರ ವಿಚಾರ ಕೆದಕಿದ ಆರೆಸ್ಸೆಸ್

|
Google Oneindia Kannada News

ನವದೆಹಲಿ, ಮೇ 27: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮರಳಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ರಾಮ ಮಂದಿರ ವಿಚಾರವನ್ನು ಕೆದಕಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಮಾಡುವುದು ಶತಃಸಿದ್ಧ ಎಂದರು.

ನೀವು ದೇಶವನ್ನು ನೆಮ್ಮದಿಯಾಗಿರಲು ಬಿಡಲ್ಲ: ಆಯೋಧ್ಯೆ ವಿಚಾರಕ್ಕೆ ತರಾಟೆ ನೀವು ದೇಶವನ್ನು ನೆಮ್ಮದಿಯಾಗಿರಲು ಬಿಡಲ್ಲ: ಆಯೋಧ್ಯೆ ವಿಚಾರಕ್ಕೆ ತರಾಟೆ

ಶ್ರೀರಾಮನ ಕೆಲಸ ನಡೆಯಬೇಕಿದೆ. ಅದು ನಡೆದೇ ನಡೆಯುತ್ತದೆ. ಈ ಕಾರ್ಯವನ್ನು ಮುಗಿಸಲು ಎಲ್ಲರೂ ಜತೆಗೂಡಿ ಬರಬೇಕು ಎಂದು ಹೇಳಿದರು.

rss chief Mohan Bhagwat lord ramas work will be done

ಇದು ನಮ್ಮ ಕೆಲಸ. ಹೀಗಾಗಿ ಇದನ್ನು ನಾವೇ ಮಾಡಬೇಕು. ನಾವು ಕೆಲವರಿಗೆ ಇದರ ಜವಾಬ್ದಾರಿಯನ್ನು ನೀಡಿದ್ದೇವೆ. ಆದರೆ, ಅದರ ಮೇಲೆ ನಾವು ಕಣ್ಣಿಟ್ಟಿರಬೇಕು ಎಂದರು.

ಶತಮಾನಗಳಿಂದ ಈ ದೇಶ ರಾಮನ ಹೆಸರು ಪಠಿಸುತ್ತಿದೆ. ರಾಮನ ಕೆಲಸವನ್ನೂ ಮಾಡಲೇಬೇಕು ಎಂಬಂತಹ ಸಂದರ್ಭದೊಳಗೆ ದೇಶ ಇಂದು ಸಾಗುತ್ತಿದೆ. ಯುವಜನರ ಕೈಗಳಲ್ಲಿ ರಾಮನ ಹೆಸರು ನೋಡಿದಾಗ ನನಗೆ ಸಂತೋಷವಾಗುತ್ತದೆ ಎಂದು ಹೇಳಿದರು.

ಅಯೋಧ್ಯೆ ವಿವಾದ : ಸುಪ್ರೀಂಕೋರ್ಟ್‌ ತೀರ್ಪಿನ 5 ಪ್ರಮುಖ ಅಂಶಗಳು ಅಯೋಧ್ಯೆ ವಿವಾದ : ಸುಪ್ರೀಂಕೋರ್ಟ್‌ ತೀರ್ಪಿನ 5 ಪ್ರಮುಖ ಅಂಶಗಳು

ಚುನಾವಣೆ ಫಲಿತಾಂಶ ಹೊರಬಂದ ಕೆಲವೇ ದಿನಗಳಲ್ಲಿ ಮೋಹನ್ ಭಾಗವತ್ ಈ ಹೇಳಿಕೆ ನೀಡಿದ್ದಾರೆ. ಅಯೋಧ್ಯಾ ವಿವಾದವು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ.

ಅಯೋಧ್ಯೆ ವಿವಾದ: ಸಂಧಾನಕಾರರಾಗಿ ಶ್ರೀಗಳು ಬೇಡ ಎಂದ ಓವೈಸಿ, ಕಾರಣವೇನು? ಅಯೋಧ್ಯೆ ವಿವಾದ: ಸಂಧಾನಕಾರರಾಗಿ ಶ್ರೀಗಳು ಬೇಡ ಎಂದ ಓವೈಸಿ, ಕಾರಣವೇನು?

ಚುನಾವಣಾ ಪ್ರಚಾರದುದ್ದಕ್ಕೂ ಬಿಜೆಪಿ ನಾಯಕರು ರಾಮ ಮಂದಿರವನ್ನು ರಾಜಕೀಯ ಭಾಷಣಗಳಲ್ಲಿ ಪ್ರಸ್ತಾಪಿಸಿರಲಿಲ್ಲ. ಬಿಜೆಪಿ ಯಾವುದೇ ಚುನಾವಣಾ ಪ್ರಣಾಳಿಕೆ ಮತ್ತು ರಾಜಕೀಯ ಸಮಾವೇಶಗಳಲ್ಲಿ ರಾಮ ಮಂದಿರ ವಿಚಾರವನ್ನು ಪ್ರಸ್ತಾಪಿಸಿದೆ ಇರುವುದು ಇದೇ ಮೊದಲು.

English summary
RSS Chief Mohan Bhagwat said that, Lord Ram's work needs to be done. Ram's work will be done.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X