ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್ ನಲ್ಲಿ ಆರೆಸ್ಸೆಸ್ ಬೆಂಬಲಿತ ಗೋಮೂತ್ರ ಇನ್ಮುಂದೆ ಲಭ್ಯ

|
Google Oneindia Kannada News

ಲಕ್ನೋ, ಸೆಪ್ಟೆಂಬರ್ 24: ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಬಲಿತ ದೀನ ದಯಾಳ್ ಧಾಮ ಕೇಂದ್ರದಿಂದ ಉತ್ಪನ್ನಗಳು ಇನ್ಮುಂದೆ ಅಮೆಜಾನ್ ನಲ್ಲಿ ಮಾರಾಟಕ್ಕೆ ಲಭ್ಯವಾಗಲಿವೆ. ಇದರಲ್ಲಿ ಏನು ವಿಶೇಷ ಎಂದು ನೋಡಿದರೆ, ಇದೇ ಮೊದಲ ಬಾರಿಗೆ ಗೋಮೂತ್ರ, ಸಗಣಿ ಆಧಾರಿತ ಉತ್ಪನ್ನಗಳು ಆನ್ ಲೈನ್ ಶಾಪಿಂಗ್ ಮೂಲಕ ಗ್ರಾಹಕರಿಗೆ ಸಿಗಲಿದೆ.

ಬಿರ್ಲಾ ಒಡೆತನದ MORE ಖರೀದಿಗೆ ಮುಂದಾದ ಅಮೆಜಾನ್ಬಿರ್ಲಾ ಒಡೆತನದ MORE ಖರೀದಿಗೆ ಮುಂದಾದ ಅಮೆಜಾನ್

ಗೋಮೂತ್ರ, ಸಗಣಿ ಆಧಾರಿತ ಸೋಪು, ಶಾಂಪು, ಡಿಟರ್ಜಂಟ್ ಇನ್ನಿತರ ಉತ್ಪನ್ನಗಳ ಮಾರಾಟವನ್ನು ಅಮೆಜಾನ್ ಆರಂಭಿಸಿದೆ. ಗೋ ಮೂತ್ರ ಹಾಗೂ ಸಗಣಿಯಿಂದ ತಯಾರಿಸಿರುವ ಸೋಪು, ಫೇಸ್​ಪ್ಯಾಕ್, ಶಾಂಪೂ, ವೈದ್ಯಕೀಯ ಉತ್ಪನ್ನಗಳು ಉತ್ತರಪ್ರದೇಶದ ಮಥುರಾದಲ್ಲಿ ದೀನದಯಾಳ್ ಧಾಮ ಕೇಂದ್ರದಲ್ಲಿ ಉತ್ಪಾದಿಸಲಾಗುತ್ತಿದೆ.

ಸ್ವಾತಂತ್ರ್ಯೋತ್ಸವ ಸಂಭ್ರಮ : ಆನ್ಲೈನ್ ಶಾಪಿಂಗ್ ಶೇ 80ರಷ್ಟು ರಿಯಾಯಿತಿಸ್ವಾತಂತ್ರ್ಯೋತ್ಸವ ಸಂಭ್ರಮ : ಆನ್ಲೈನ್ ಶಾಪಿಂಗ್ ಶೇ 80ರಷ್ಟು ರಿಯಾಯಿತಿ

RSS-backed centre to start selling cow urine, dung-based soaps and face packs on Amazon

ಆರ್​ಎಸ್​ಎಸ್ ಬೆಂಬಲಿತ ಈ ಕೇಂದ್ರದ ಉತ್ಪನ್ನಗಳ ಕುರಿತ ಜಾಹೀರಾತುಗಳು ಇನ್ನೊಂದು ವಾರದಲ್ಲಿ ಅಮೆಜಾನ್ ಪುಟದಲ್ಲಿ ಕಾಣಿಸಲಿವೆ. ಸುದೀರ್ಘ ಚರ್ಚೆ ಬಳಿಕ ಮಾರಾಟಕ್ಕೆ ಅಮೆಜಾನ್ ಒಪ್ಪಿಗೆ ಸೂಚಿಸಿದೆ. ಮೊದಲಿಗೆ ಸೌಂದರ್ಯ ಹಾಗೂ ವೈದ್ಯಕೀಯ ಉತ್ಪನ್ನಗಳು ಮಾತ್ರ ದೊರೆಯಲಿವೆ. ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಇನ್ನಷ್ಟು ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗುವುದು ಎಂದು ಕೇಂದ್ರದ ಕಾರ್ಯ ನಿರ್ವಾಹಕ ಅಧಿಕಾರಿ ಘನಶ್ಯಾಮ ಗುಪ್ತಾ ತಿಳಿಸಿದ್ದಾರೆ.

English summary
Soaps, face packs, shampoos and medicinal products made from cow urine and dung may soon be just a click away as an RSS-backed centre says it is set to sell these on e-commerce major Amazon India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X