ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಸ್ತಿನ ಚಡ್ಡಿಯಿಂದ ಪ್ಯಾಂಟಿಗೆ ಬದಲಾಯಿತು RSS ಗಣವೇಷ

|
Google Oneindia Kannada News

ಬದಲಾದ ಕಾಲಘಟ್ಟಕ್ಕೆ ತಕ್ಕಂತೆ, ಸುಮಾರು ಒಂಬತ್ತು ದಶಕಗಳಿಂದ ಚಾಲ್ತಿಯಲ್ಲಿದ್ದ ಗಣವೇಷವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬದಲಾಯಿಸಿದೆ. ಇನ್ಮುಂದೆ ಸಂಘಟನೆಯ ಸಮವಸ್ತ್ರ ಚಡ್ಡಿ ಬದಲು ಪ್ಯಾಂಟಿಗೆ ಬದಲಾಗಲಿದೆ.

ರಾಜಸ್ಥಾನದ ಜೈಪುರ ಬಳಿಯ ನಾಗೌರ್ ನಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿಗಳ ನೀತಿ ನಿರ್ಧಾರಕ ಸಭೆಯಲ್ಲಿ (ಮಾ 13) ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ಈ ಮೂಲಕ ಸಂಘದ ಶಿಸ್ತಿನ ಸಂಕೇತವಾಗಿದ್ದ ಖಾಕಿ ಚಡ್ಡಿ ಇತಿಹಾಸದ ಪುಟಕ್ಕೆ ಸೇರಲಿದೆ. (RSS ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಕಾಂಗ್ರೆಸ್)

ಬದಲಾದ ಸಮವಸ್ತ್ರದ ವಿವರ, ಮಹಿಳೆಯರ ದೇವಾಲಯ ಪ್ರವೇಶ, ಮೀಸಲಾತಿ, ಗುಲಾಂನಬಿ ಆಜಾದ್ ಹೇಳಿಕೆ, ಹೆಚ್ಚುತ್ತಿರುವ ಕೋಮು ವೈಷಮ್ಯದ ಬಗ್ಗೆ ಸಂಘಟನೆಯ ಕಾರ್ಯದರ್ಶಿ ಭಯ್ಯಾಜಿ ಜೋಷಿ ಹೇಳಿಕೆಯನ್ನು ನೀಡಿದ್ದಾರೆ. (ಈ ಸುದ್ದಿಯನ್ನು ಒನ್ ಇಂಡಿಯಾ ಸುದ್ದಿದನಿ (podcast) ಮೂಲಕ ಕೇಳಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ )

ಸಂಘಟನೆಯ ಪಥಸಂಚಲನ, ಎಲ್ಲಾ ಪ್ರಮುಖ ಕಾರ್ಯಕ್ರಮಗಳು, ತರಬೇತಿ ಶಿಬಿರ ಮತ್ತು ಸರಸಂಘ ಸಂಚಾಲಕರ ಭಾಷಣದ ವೇಳೆ RSS ಕಾರ್ಯಕರ್ತರು ಹೊಸ ಸಮವಸ್ತ್ರ ಧರಿಸುವುದು ಕಡ್ಡಾಯವಾಗಲಿದೆ. ಹೊಸ ಡ್ರೆಸ್ ಕೋಡ್ ಇದೇ ವಿಜಯದಶಮಿಯ ದಿನದಿಂದ ಜಾರಿಗೆ ಬರಲಿದೆ.

ಕಾಂಗ್ರೆಸ್ ಮುಖಂಡ ಗುಲಾಂನಬಿ ಆಜಾದ್ RSS ಸಂಘಟನೆಯನ್ನು ಉಗ್ರ ಸಂಘಟನೆಗೆ ಹೋಲಿಸಿದ ಬಗ್ಗೆ ತಿರುಗೇಟು ನೀಡಿದ ಭಯ್ಯಾಜಿ ಜೋಷಿ, ಕಾಂಗ್ರೆಸ್ ಮುಖಂಡರಿಗೆ 'ಕಾಮನ್ ಸೆನ್ಸಿ'ನ ಕೊರತೆಯಿದೆ ಎಂದು ಹೇಳಿದ್ದಾರೆ.

ಬದಲಾದ ಡ್ರೆಸ್ ಕೋಡ್ ಹೀಗಿರುತ್ತದೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಮೀಸಲಾತಿ

ಮೀಸಲಾತಿ

ಸಮಾಜದಲ್ಲಿ ಹಿಂದುಳಿದ ವರ್ಗಕ್ಕೆ ಅನುಕೂಲವಾಗಲು ಮೀಸಲಾತಿ ಪದ್ದತಿ ಜಾರಿಗೆ ತರಲಾಯಿತು, ಈಗ ಧನಿಕರೂ ಮೀಸಲಾತಿ ಬೇಕೆಂದು ಆಗ್ರಹಿಸುತ್ತಿದ್ದಾರೆ. ಇದು ಅಂಬೇಡ್ಕರ್ ಅವರ ನಿಜವಾದ ಉದ್ದೇಶದಿಂದ ದೂರವಾಗಿದೆ ಮತ್ತು ನಮ್ಮ ಸಂವಿಧಾನವನ್ನು ದಾರಿ ತಪ್ಪಿಸುವಂತಿದೆ - ಭಯ್ಯಾಜಿ ಜೋಷಿ.

ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ

ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ

ದೇಶದ ಕೆಲವೊಂದು ದೇವಾಲಯಕ್ಕೆ ಮಹಿಳೆಯರ ಪ್ರವೇಶ ಇಲ್ಲ ಎನ್ನುವ ಧಾರ್ಮಿಕ ಕಟ್ಟುಪಾಡಿಗೆ ನಮ್ಮ ವಿರೋಧವಿದೆ. ಇದೊಂದು ಗಂಭೀರ ಸಮಸ್ಯೆ, ಸೌಹಾರ್ದಯುತವಾಗಿ ಪರಿಹರಿಸಬೇಕಾಗಿದೆ. ಈ ವಿಚಾರ ರಾಜಕೀಯ ವಿಷಯವಾಗಬಾರದು. ಪರಸ್ಪರ ಮಾತುಕತೆಯ ಮೂಲಕ, ಮಹಿಳೆಯರ ದೇವಾಲಯ ಪ್ರವೇಶಕ್ಕೆ ವಿರೋಧ ಪಡಿಸುತ್ತಿರುವವರ ಮನವೊಲಿಸಬೇಕಾಗಿದೆ. ಈ ಕೆಲಸಕ್ಕೆ ನಮ್ಮ ಸಂಘಟನೆ ಮುಂದಾಗಲಿದೆ - ಭಯ್ಯಾಜಿ ಜೋಷಿ.

ಹೊಸ ಸಮವಸ್ತ್ರ

ಹೊಸ ಸಮವಸ್ತ್ರ

91 ವರ್ಷಗಳ ನಂತರ ಸಂಘಟನೆ ತನ್ನ ಗಣವೇಷದಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಈಗಿನ ಖಾಕಿ ಚಡ್ಡಿಯ ಬದಲು, ಕಡು ಕಂದು ಪ್ಯಾಂಟ್ ಇನ್ಮುಂದೆ ಆರ್ ಎಸ್ ಎಸ್ ಹೊಸ ಸಮವಸ್ತ್ರವಾಗಲಿದೆ. ಬಿಳಿ ಶರ್ಟ್, ಬೆಲ್ಟ್ ಮತ್ತು ಟೋಪಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಂಘಟನೆಯ ಕಾರ್ಯದರ್ಶಿ ಭಯ್ಯಾಜಿ ಜೋಷಿ ನಾಗೌರ್ ನಲ್ಲಿ ಹೇಳಿದ್ದಾರೆ.

ಅಲ್ಪಸ್ವಲ್ಪ ಬದಲಾವಣೆಯಾಗಿತ್ತು

ಅಲ್ಪಸ್ವಲ್ಪ ಬದಲಾವಣೆಯಾಗಿತ್ತು

ಸಂಘಟನೆಯ ಸಮವಸ್ತ್ರ ಕಾಲಕಾಲಕ್ಕೆ ಅಲ್ಪ ಬದಲಾವಣೆ ಕಂಡಿದ್ದರೂ, ಖಾಕಿ ಚಡ್ಡಿ ಮಾತ್ರ ಬದಲಾಗಿರಲಿಲ್ಲ. ಖಾಕಿ ಅಂಗಿ ಜಾಗದಲ್ಲಿ ಬಿಳಿ ಅಂಗಿ ಬಂದಿತ್ತು. ಚರ್ಮದ ಬೂಟು ರೆಕ್ಸಿನ್‌ ಬೂಟುಗಳಿಗೆ ಬದಲಾಗಿತ್ತು. ಇದನ್ನು ಬಿಟ್ಟರೆ ಸಂಘಟನೆ ಯಾವುದೇ ಮಹತ್ತರ ಬದಲಾವಣೆ ತನ್ನ ಡ್ರೆಸ್ ಕೋಡ್ ನಲ್ಲಿ ತಂದಿರಲಿಲ್ಲ.

ಭಯೋತ್ಪಾದಕರ ಉಪದ್ರ

ಭಯೋತ್ಪಾದಕರ ಉಪದ್ರ

ನಮ್ಮ ಸೈನಿಕರು ವಿರೋಧಿಗಳನ್ನು ಹಿಮ್ಮೆಟ್ಟಿಸುವಲ್ಲಿ ಸಶಕ್ತರಾಗಿದ್ದಾರೆ, ಆದರೆ ಪಠಾಣಕೋಟ್ ದಾಳಿ ಗಂಭೀರವಾದದ್ದು. ಪಾಕ್ ಪ್ರೇರಿತ ಉಗ್ರರ ದಾಳಿ, ಅಕ್ರಮ ವಲಸೆ, ಸ್ಮಂಗ್ಲಿಂಗ್ ಮುಂತಾದವುದಕ್ಕೆ ಕಡಿವಾಣ ಹಾಕಬೇಕಾಗಿದೆ - ಭಯ್ಯಾಜಿ ಜೋಷಿ.

ಕೋಮು ಗಲಭೆ

ಕೋಮು ಗಲಭೆ

ದೇಶದಲ್ಲಿ ಕೋಮು ಗಲಭೆಯ ವೇಳೆ ಬಹುಸಂಖ್ಯಾತ ಸಮುದಾಯದ ಅಸ್ತಿಪಾಸ್ತಿಗಳ ಮೇಲೆ ಹೆಚ್ಚಿನ ನಷ್ಟವಾಗುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ಇಂತಹ ಸಂದರ್ಭದಲ್ಲಿ ಒಗ್ಗಟ್ಟಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರಕಾರಕ್ಕೆ ಸಹಕರಿಸ ಬೇಕಾಗಿದೆ ಎಂದು ಭಯ್ಯಾಜಿ ಜೋಷಿ ಮನವಿ ಮಾಡಿದ್ದಾರೆ.

ವಿಶ್ವವಿದ್ಯಾಲಯಗಳು

ವಿಶ್ವವಿದ್ಯಾಲಯಗಳು

ದೇಶದ ಕೆಲವು ವಿದ್ಯಾಲಯಗಳಲ್ಲಿ ದೇಶ ವಿರೋಧಿ ಘೋಷಣೆ ಹೊರಹೊಮ್ಮುತ್ತಿರುವುದು ವಿಷಾದನೀಯ. ಅಧಿಕಾರದಲ್ಲಿರುವ ಸರಕಾರ ಇದಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಬೇಕಾಗಿದೆ. ಇಲ್ಲದಿದ್ದಲ್ಲಿ ವಾಕ್ ಸ್ವಾತಂತ್ರ್ಯ ಹೆಸರಿನಲ್ಲಿ ವಿಷಯ ಗಂಭೀರವಾಗುತ್ತಾ ಸಾಗುತ್ತದೆ ಎಂದು ಜೋಷಿ ಕೇಂದ್ರ ಸರಕಾರವನ್ನು ಎಚ್ಚರಿಸಿದ್ದಾರೆ.

ಕಾರ್ಯಕಾರಿಣಿ ಸದಸ್ಯರು

ಕಾರ್ಯಕಾರಿಣಿ ಸದಸ್ಯರು

ಡಾ. ಮೋಹನ್ ರಾವ್ ಭಾಗವತರ್ - ಸರಸಂಘ ಸಂಚಾಲಕರು
ಪ್ರಧಾನ ಕಾರ್ಯದರ್ಶಿ - ಭಯ್ಯಾಜಿ ಜೋಷಿ
ಜಂಟಿ ಕಾರ್ಯದರ್ಶಿಗಳು - ದತ್ತಾತ್ರೇಯ ಹೊಸಬಾಳೆ, ಸುರೇಶ್ ಸೋನಿ, ಡಾ ಕೃಷ್ಣ ಗೋಪಾಲ, ವಿ ಭಾಗಯ್ಯ
ಕರ್ನಾಟಕ ಪ್ರಾಂತ್ಯ ಸಂಘ ಸಂಚಾಲಕ - ಅರವಿಂದ ರಾವ್ ದೇಶಪಾಂಡೆ
(ಚಿತ್ರದಲ್ಲಿ ದತ್ತಾತ್ರೇಯ ಹೊಸಬಾಳೆ)

English summary
RSS (Rashtriya Svayam Sevak Sangh) announces change in Ganavesh: Khakhi Shorts will be replaced by Brown Pants with effect from Vijayadashami day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X