• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರ್‌ಎಸ್‌ಎಸ್‌, ಬಿಜೆಪಿ ಸಿದ್ಧಾಂತ ವಿಷಕಾರಿ; ಮಲ್ಲಿಕಾರ್ಜುನ ಖರ್ಗೆ

|
Google Oneindia Kannada News

ಪುದುಚೇರಿ, ಏಪ್ರಿಲ್ 2: ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಸಿದ್ಧಾಂತಗಳು ವಿಷಕಾರಿ. ಅದನ್ನು ಜನರು ತಮಿಳುನಾಡು ಹಾಗೂ ಪುದುಚೇರಿಗೆ ಪ್ರವೇಶಿಸಲು ಅನುಮತಿ ನೀಡಬಾರದು ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಚುನಾಯಿತ ನಾಯಕರದ್ದೇ ಈ ಸ್ಥಿತಿಯಾದರೆ, ರಾಜ್ಯದಲ್ಲಿ ಕಾನೂನಿನ ಕಥೆಯೇನು; ಖರ್ಗೆಚುನಾಯಿತ ನಾಯಕರದ್ದೇ ಈ ಸ್ಥಿತಿಯಾದರೆ, ರಾಜ್ಯದಲ್ಲಿ ಕಾನೂನಿನ ಕಥೆಯೇನು; ಖರ್ಗೆ

ಪುದುಚೇರಿಗೆ ಭೇಟಿ ನೀಡಿದ್ದ ಸಂದರ್ಭ ಗುರುವಾರ ಜನರನ್ನುದ್ದೇಶಿಸಿ ಮಾತನಾಡಿದ ಅವರು,"ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿಷವಿದ್ದಂತೆ. ಅದರ ರುಚಿ ನೋಡಿದರೆ ನೀವು ಸಾಯುತ್ತೀರಿ. ಅದು ಹೇಗೋ ಇವು ಕರ್ನಾಟಕಕ್ಕೆ ಸೇರಿವೆ. ಆದರೆ ತಮಿಳುನಾಡು ಹಾಗೂ ಪುದುಚೇರಿಗೆ ಆ ಅವಕಾಶ ಕೊಡಬೇಡಿ. ಇಲ್ಲಿಯೂ ಆ ವಿಷವನ್ನು ಅವರು ಉಗುಳುತ್ತಾರೆ" ಎಂದು ಕಿಡಿಕಾರಿದ್ದಾರೆ.

ಪುದುಚೇರಿಯ 30 ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿಯೂ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿಯಲ್ಲಿದ್ದರೆ, ಡಿಎಂಕೆ-ಕಾಂಗ್ರೆಸ್ ಮೈತ್ರಿಯಲ್ಲಿವೆ. ಈ ಎರಡರ ನಡುವೆಯೂ ಹಣಾಹಣಿ ಏರ್ಪಟ್ಟಿದೆ.

English summary
RSS and BJPs ideology is poisonous. Dont allow it in puduchery and tamilnadu, commented Congress leader Mallikarjuna Kharge,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X