ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ಮಲ್ಯ -ಜೇಟ್ಲಿ ಭೇಟಿ, ಸ್ವಾಮಿ ಹೇಳಿದ ಸತ್ಯಕಥೆ

|
Google Oneindia Kannada News

Recommended Video

ವಿಜಯ್ ಮಲ್ಯ -ಜೇಟ್ಲಿ ಭೇಟಿ, ಸ್ವಾಮಿ ಹೇಳಿದ ಸತ್ಯಕಥೆ | Oneindia Kannada

ಬೆಂಗಳೂರು, ಸೆಪ್ಟೆಂಬರ್ 14: ಭಾರತದ ಹತ್ತಾರು ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚಿಸಿ, ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ಮಲ್ಯ ಅವರನ್ನು ಭಾರತಕ್ಕೆ ಕರೆತರುವ ಯತ್ನ ಜಾರಿಯಲ್ಲಿದೆ.

ಈ ನಡುವೆ ವಿದೇಶಕ್ಕೆ ಹಾರುವುದಕ್ಕೂ ಮೊದಲು ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಮಲ್ಯ ನಡುವೆ ಭೇಟಿಯಾಗಿದ್ದರ ಬಗ್ಗೆ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ದೇಶ ಬಿಡುವ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ಮಲ್ಯ ಅವರು ಭೇಟಿ ಮಾಡಿದ್ದನ್ನು ನಿರಾಕರಿಸುವಂತಿಲ್ಲ ಎಂದಿರುವ ಸ್ವಾಮಿ, ತಮ್ಮ ಎರಡು ಟ್ವೀಟ್ ಗಳ ಮೂಲಕ ಅನೇಕ ಒಳಾರ್ಥಗಳನ್ನು ಬಿಚ್ಚಿಟ್ಟಿದ್ದಾರೆ.

ವಿಜಯ್ ಮಲ್ಯ ಪರಾರಿಯಾಗಲು ಹಣಕಾಸು ಇಲಾಖೆಯ ಕೆಲವರು ಪರೋಕ್ಷ ನೆರವು ನೀಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಆದರೆ, ಜೊತೆಗೆ ಮಲ್ಯ ವಿರುದ್ಧ ನೀಡಿದ್ದ ಲುಕ್ ಔಟ್ ನೋಟಿಸ್ ದಿನಾಂಕದ ಬಗ್ಗೆ ಕೂಡಾ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದು, ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡ್ತಾ ಇದೆ. ಮಲ್ಯ ಒಟ್ಟು 54 ಲಗೇಜ್ ಗಳೊಂದಿಗೆ ವಿದೇಶಕ್ಕೆ ಪರಾರಿಯಾಗುವ ವೇಳೆ ಬಂಧನ ನೋಟೀಸ್ ಹೊರಡಿಸಲಾಗಿದ್ದರೂ ಅದನ್ನು ಅಕ್ಟೋಬರ್ 24, 2015 ರಲ್ಲಿ ತಿದ್ದಲಾಗಿತ್ತು ಎಂದು ಸ್ವಾಮಿ ತಿಳಿಸಿದ್ದಾರೆ.

ವಿಜಯ್ ಮಲ್ಯ ಪರಾರಿಯಾಗಲು ಹಣಕಾಸು ಇಲಾಖೆಯ ಕೆಲವರು ಪರೋಕ್ಷ ನೆರವು ನೀಡಿದ್ದರೆಂದು ಸುಬ್ರಮಣಿಯನ್ ಸ್ವಾಮಿ, ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದು, ಪರೋಕ್ಷವಾಗಿ ಅರುಣ್ ಜೇಟ್ಲಿಯವರತ್ತ ಬೊಟ್ಟು ಮಾಡಿದ್ದಾರೆ.

ಲುಕ್ ಔಟ್ ನೋಟಿಸ್ ದಿನಾಂಕ ಪ್ರಕಟಿಸಿದ ಸ್ವಾಮಿ

ಮಲ್ಯ ಅವರ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ವಿಷಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ಮೊದಲನೆಯದ್ದು, ಲುಕ್ ಔಟ್ ನೋಟಿಸ್ ಆಕ್ಟೋಬರ್ 24, 2015ರಲ್ಲೇ ನೀಡಲಾಗಿತ್ತು. 54 ಲಗ್ಗೇಜ್ ಸಾಮಾಗ್ರಿಗಳನ್ನು ಹೊತ್ತು ಮಲ್ಯ ನಿರ್ಗಮಿಸಿದ್ದರು. ಎರಡನೇಯದ್ದು, ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ವಿತ್ತ ಸಚಿವರನ್ನು ಭೇಟಿಯಾಗಿದ್ದ ಮಲ್ಯ ಅವರು ಲಂಡನ್ನಿಗೆ ತೆರಳುತ್ತಿರುವುದಾಗಿ ಅವರಿಗೆ ತಿಳಿಸಿದ್ದರು ಎಂದು ಟ್ವೀಟ್ ಮಾಡಿದ್ದಾರೆ.

ಐಪಿಎಲ್ ಕ್ರಿಕೆಟ್ ಟೀಂ ಮಾರಾಟದ ಬಗ್ಗೆ ಸ್ವಾಮಿ

ಲಂಡನ್ನಿನಲ್ಲಿರುವ ನಮ್ಮ ವಿಶ್ವ ಹಿಂದೂ ಪರಿಷತ್ ಮೂಲಗಳ ಪ್ರಕಾರ, ಮಲ್ಯ ಅವರಿಗೆ ಸ್ಪೈಸ್ ಜೆಟ್ ಗೆ ನೀಡಿದಂಥ ಬದಲಿ ಆಫರ್ ಸಿಕ್ಕಿತ್ತು. ಮಲ್ಯ ಅವರ ಐಪಿಎಲ್ ಕ್ರಿಕೆಟ್ ಕ್ಲಬ್ (ಆರ್ ಸಿಬಿ) ನ್ನು 1 ರು ಮೌಲ್ಯಕ್ಕೆ ನೀಡುವುದಾಗಿತ್ತು. ಆದರೆ, ಈ ಆಫರ್ ನೀಡಿದವರು ಯಾರು ಎಂಬುದು ನನಗೆ ಗೊತ್ತಿಲ್ಲ.

ಮಲ್ಯ ಪರಾರಿಯಾಗಲು ಬಿಜೆಪಿಯೇ ಕಾರಣ

ಮಲ್ಯ ಪರಾರಿಯಾಗಲು ಬಿಜೆಪಿಯೇ ಕಾರಣ, 54 ಲಗ್ಗೇಜ್ ಬ್ಯಾಗ್ ಕ್ಲಿಯರ್ ಆಗಲು ನೆರವಾದವರು ಯಾರು? ಬ್ರಿಟನ್ ನಲ್ಲಿ ಕೋರ್ಟಿಗೆ ಖರ್ಚು ಮಾಡುತ್ತಿರುವ ಮೊತ್ತವನ್ನು ಬೇರೆಯದ್ದೇ ಉಪಯೋಗಿಸಬಹುದು ಎಂದಿದ್ದಾರೆ.

ಮಲ್ಯ -ಸ್ವಾಮಿ ದೋಸ್ತಿ ಬಗ್ಗೆ ಹೇಳಬೇಕಾಗಿಲ್ಲ

ಮಲ್ಯ -ಸ್ವಾಮಿ ದೋಸ್ತಿ ಬಗ್ಗೆ ಹೇಳಬೇಕಾಗಿಲ್ಲ, ಸ್ವಾಮಿ ಅವರ ಜನತಾ ಪಾರ್ಟಿಗೆ 2003ರಲ್ಲಿ ಮಲ್ಯ ಸೇರ್ಪಡೆಯಾಗಿದ್ದರು. ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿದ್ದರು. 203-2010ರ ತನಕ ಕಿಂಗ್ ಆಫ್ ಗುಡ್ ಟೈಮ್ಸ್ ಜತೆ ದೋಸ್ತಿ ಚೆನ್ನಾಗಿ ಇತ್ತು ಎಂದ ಕೆಲವರು.

English summary
It's an "undeniable fact" that Vijay Mallya told Finance Minister Arun Jaitley in Parliament that he was leaving for London, Rajya Sabha MP Subramanian Swamy said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X