ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ: ಮನೋಜ್‌ ಕುಮಾರ್ ಸಿನ್ಹಾಗೆ ಬೆಂಬಲ ಘೋಷಿಸಿದ ಎಎಪಿ

|
Google Oneindia Kannada News

ನವದೆಹಲಿ, ಸೆ. 14: ಕೊರೊನಾವೈರಸ್ ಕರಿನೆರಳಿನ ನಡುವೆ ಸಕಲ ಭದ್ರತೆ, ಆರೋಗ್ಯ ದೃಷ್ಟಿಯಿಂದ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಮುಂಗಾರು ಅಧಿವೇಶನಕ್ಕೆ ಇಂದು ಚಾಲನೆ ನೀಡಲಾಗಿದೆ.

ಸೆ. 14ರಿಂದ ಆರಂಭವಾಗಲಿರುವ ಮಳೆಗಾಲದ ಅಧಿವೇಶ ಅಕ್ಟೋಬರ್ 1ರಂದು ಅಂತ್ಯವಾಗಲಿದೆ. ಕೊರೊನಾ ವೈರಸ್ ಸಂಕಷ್ಟ ಆರಂಭವಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಈ ನಡುವೆ ಆರ್ಥಿಕ ಕುಸಿತ, ಚೀನಾ ಗಡಿ ವಿವಾದ, ಉದ್ಯೋಗ ನಷ್ಟ ಮುಂತಾದ ಅನೇಕ ಘಟನೆಗಳು ಸಂಭವಿಸಿವೆ. ಮುಖ್ಯವಾಗಿ ಜಿಡಿಪಿ ಕುಸಿತ, ರಾಜ್ಯಗಳಿಗೆ ಜಿಎಸ್‌ಟಿ ಹಂಚಿಕೆಯ ವಿವಾದ ಹಾಗೂ ಕೊರೊನಾ ವೈರಸ್ ಸಂಕಷ್ಟವನ್ನು ನಿಭಾಯಿಸಿದ ರೀತಿ ಚರ್ಚೆಗೆ ಬರಲಿದ್ದು, ವಿರೋಧಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಕಾವೇರಿದ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಲಾಕ್‌ಡೌನ್‌ನಿಂದಾಗಿ 37-78 ಸಾವಿರ ಜನರ ಮರಣ ನಿಯಂತ್ರಣ: ಆರೋಗ್ಯ ಸಚಿವಲಾಕ್‌ಡೌನ್‌ನಿಂದಾಗಿ 37-78 ಸಾವಿರ ಜನರ ಮರಣ ನಿಯಂತ್ರಣ: ಆರೋಗ್ಯ ಸಚಿವ

ಈ ನಡುವೆ ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕಾಗಿ ಚುನಾವಣೆ ಕಣ ಸಿದ್ಧವಾಗಿದೆ. 12 ಪಕ್ಷಗಳ ಬೆಂಬಲ ಪಡೆದುಕೊಂಡಿದ್ದ ಕಾಂಗ್ರೆಸ್ ಪ್ಲಸ್ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಅಭ್ಯರ್ಥಿ ಮನೋಜ್ ಝಾ ಅವರಿಗೆ ಆಮ್ ಆದ್ಮಿ ಪಕ್ಷ ಕೂಡಾ ಬೆಂಬಲ ಘೋಷಿಸಿದೆ.

RS Deputy Speaker Election: Manoj Kumar Jha get AAP support

" ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ಸ್ಪರ್ಧಿಸಿರುವ ವಿಪಕ್ಷಗಳ ಅಭ್ಯರ್ಥಿ ಮನೋಜ್ ಕುಮಾರ್ ಝಾ ಅವರಿಗೆ ಆಮ್ ಆದ್ಮಿ ಪಕ್ಷ ಬೆಂಬಲ ವ್ಯಕ್ತಪಡಿಸಿದೆ'' ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಘೋಷಿಸಿದ್ದಾರೆ.

 ಉಪಸಭಾಪತಿ ಚುನಾವಣೆ: RJD ಮನೋಜ್‌ಗೆ 12 ಪಕ್ಷಗಳ ಬೆಂಬಲ ಉಪಸಭಾಪತಿ ಚುನಾವಣೆ: RJD ಮನೋಜ್‌ಗೆ 12 ಪಕ್ಷಗಳ ಬೆಂಬಲ

Recommended Video

ಪ್ರಧಾನಿ ಕಚೇರಿಗೆ ಹೊಸ ಸೇರ್ಪಡೆ Amrapali IAS | Oneindia Kannada

ರಾಜ್ಯಸಭೆಯಲ್ಲಿ ಎಎಪಿ ಮೂರು ಸ್ಥಾನ ಹೊಂದಿದೆ. ಈ ನಡುವೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಎಂದು ಟಿಆರ್ ಎಸ್ ಸಂಸದ ಕೆ ಕೇಶವ ರಾವ್ ಹೇಳಿದ್ದಾರೆ. ಕೇಶವರಾವ್ ಸೇರಿದಂತೆ 7 ಮಂದಿ ಸದಸ್ಯರನ್ನು ಹೊಂದಿದೆ.

English summary
Aam Aadmi Party (AAP) will support Opposition candidate Manoj Kumar Jha for the post of Deputy Chairman in Rajya Sabha: Sanjay Singh, AAP MP to ANI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X