ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ಸ್ಪರ್ಧೆ: ವಿಪಕ್ಷದಿಂದ ವಂದನಾ ಕಣಕ್ಕೆ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 07: ಭಾರಿ ಕುತೂಹಲ ಕೆರಳಿಸಿರುವ ರಾಜ್ಯಸಭೆ ಉಪ ಸಭಾಪತಿ ಸ್ಥಾನ ಚುನಾವಣೆಗೆ ವಿಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಹೆಸರಿಸಿವೆ.

ವಿರೋಧಪಕ್ಷದಿಂದ ಸಂಸದೆ, ಪುಣೆಯ ಮಾಜಿ ಮೇಯರ್ ವಂದನಾ ಚವಾನ್​ ಅವರನ್ನು ಜಂಟಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.

ಮಹಾರಾಷ್ಟ್ರದಿಂದ 2ನೇ ಬಾರಿಗೆ ರಾಜ್ಯಸಭಾ ಸಂಸದೆಯಾಗಿರುವ ವಂದನಾ ಅವರಿಗೆ ಇದು ಮೊದಲ ಅಗ್ನಿಪರೀಕ್ಷೆಯಾಗಿದೆ. ಎನ್​ಡಿಎಯಿಂದ ಹರಿವಂಶ್​ ಸಿಂಗ್​ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದ್ದು, ಎನ್​ಸಿಪಿಯಿಂದ ಸಂಸದೆ ವಂದನಾ ಚವಾನ್​ ಅವರನ್ನು ಕಣಕ್ಕಿಳಿಯುತ್ತಿದ್ದಾರೆ.

ಉಪ ಸಭಾಪತಿ ಚುನಾವಣೆ: ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲ ಎಷ್ಟಿದೆ?ಉಪ ಸಭಾಪತಿ ಚುನಾವಣೆ: ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲ ಎಷ್ಟಿದೆ?

ಎನ್​ಡಿಎ ಘೋಷಿಸಿರುವ ಅಭ್ಯರ್ಥಿಯ ವಿಷಯದಲ್ಲಿ ಮಿತ್ರ ಪಕ್ಷಗಳು ಅಸಮಾಧಾನ ವ್ಯಕ್ತವಾಗಿದೆ. ಹೀಗಾಗಿ, ಪುಣೆ ಮೂಲದ ವಂದನಾ ಅವರಿಗೆ ಶಿವಸೇನಾ ಬೆಂಬಲ ಸಿಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

ಡಿಸೆಂಬರ್ 17, 1969 ರಿಂದ ಏಪ್ರಿಲ್ 1, 1972ರ ಅವಧಿಯಲ್ಲಿ ಬಿಡಿ ಖೋಬ್ರಾಗಡೆ(ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ) ಅವರು ಉಪಾಧ್ಯಕ್ಷರಾಗಿದ್ದು ಬಿಟ್ಟರೆ, ಕಾಂಗ್ರೆಸ್ ಅಭ್ಯರ್ಥಿಗೆ ಉಪಾಧ್ಯಕ್ಷ ಸ್ಥಾನ ಲಭಿಸುತ್ತಾ ಬಂದಿದೆ.

RS Deputy Chairman election: NCPs Vandana Chavan to be Oppositions candidate
English summary
The opposition has reportedly picked Vandana Chavan(57) from Sharad Pawar's Nationalist Congress Party (NCP) as the candidate for the post of Rajya Sabha Deputy Speaker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X