ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ನೇ ಹಂತದ ಚುನಾವಣೆ ಕಾರ್ಯಾಚರಣೆ, 3274 ಕೋಟಿ ರು ವಶ

|
Google Oneindia Kannada News

ನವದೆಹಲಿ, ಏಪ್ರಿಲ್ 30: ಲೋಕಸಭೆ ಚುನಾವಣೆ 2019ರ ನಾಲ್ಕನೇ ಹಂತದ ಮತದಾನದ ಸಂದರ್ಭದಲ್ಲಿ ಆಯೋಗದ ಅಧಿಕಾರಿಗಳು, ಅಪಾರ ಪ್ರಮಾಣದಲ್ಲಿ ಅಕ್ರಮ ನಗದು, ಮದ್ಯ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತಂತೆ ಕೇಂದ್ರ ಚುನಾವಣೆ ಆಯೋಗವು ಮಾಹಿತಿ ನೀಡಿದ್ದು, ಒಟ್ಟಾರೆ, 3274 ಕೋಟಿ ರು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

4ನೇ ಹಂತದ ಮತದಾನವು 9 ರಾಜ್ಯಗಳಲ್ಲಿ ಏಪ್ರಿಲ್ 29ರಂದು ಮುಕ್ತಾಯವಾಗಿದೆ. ಈ ಅವಧಿಯಲ್ಲಿ 785.26 ಕೋಟಿರು ನಗದು, 249.038 ಕೋಟಿ ರು ಮೌಲ್ಯದ ಅಕ್ರಮ ಮದ್ಯ, 1214.46 ಕೋಟಿ ರು ಮೌಲ್ಯದ ಮಾದಕ ದ್ರವ್ಯ ಅಥವಾ ಡ್ರಗ್ಸ್, 972.253 ಕೋಟಿ ರು ಮೌಲ್ಯದ ಚಿನ್ನಾಭರಣ, 53.167 ಕೋಟಿ ರು ಮೌಲ್ಯದ ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲದರ ಮೌಲ್ಯ ಅಂದಾಜು 3274 ಕೋಟಿ ರು ಆಗಬಹುದು ಎಂದು ಅಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಿದ್ದಾರೆ.

4ನೇ ಹಂತದ ಮತದಾನ: 6 ಗಂಟೆಯವರೆಗೆ 62.15% ಮತದಾನ ದಾಖಲು4ನೇ ಹಂತದ ಮತದಾನ: 6 ಗಂಟೆಯವರೆಗೆ 62.15% ಮತದಾನ ದಾಖಲು

ಸುಮಾರು 72 ಲೋಕಸಭಾ ಕ್ಷೇತ್ರಗಳ ಪೈಕಿ 42 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 97 ವೀಕ್ಷಕರು ಕಾರ್ಯಾಚರಣೆ ನಡೆಸಿ, ಅಭ್ಯರ್ಥಿಗಳ ಖರ್ಚುವೆಚ್ಚಗಳ ಮೇಲೆ ನಿಗಾ ವಹಿಸಿ ಈ ಮೌಲ್ಯದ ಅಕ್ರಮ ಸಂಪತ್ತನ್ನು ಸರ್ಕಾರದ ವಶಕ್ಕೆ ಸಿಗುವಂತೆ ಮಾಡಿದ್ದಾರೆ.

Rs 785.26cr cash, liquor worth Rs 249.038cr seized during 4th phase of polling

ಏಪ್ರಿಲ್ 11 ರಿಂದ ಮೇ 19ರವರೆಗೆ ದೇಶದೆಲ್ಲೆಡೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ನಾಲ್ಕನೇ ಹಂತದಲ್ಲಿ ಜಮ್ಮು ಕಾಶ್ಮೀರ, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಹಲವು ಕ್ಷೇತ್ರಗಳಲ್ಲಿ ಮತದಾನ ನಡೆಸಲಾಗಿತ್ತು. ಶೇ 64.05ರಷ್ಟು ಮತದಾನವಾಗಿತ್ತು. ಮೇ 23ರಂದು ಫಲಿತಾಂಶ ಹೊರಬರಲಿದೆ.

English summary
The Election Commission said it has seized unaccounted money, illicit liquor, drugs and other inducements worth a total of Rs 3274 crore in the fourth phase of the ongoing Lok Sabha elections on Monday. "Total cash seizure is Rs 785.26 crore, liquor (Rs 249.038 crore), narcotics (Rs 1214.46 crore), Gold and precious materials (Rs 972.253 crore) and other freebies (Rs 53.167 crore), which makes the grand total of Rs 3274.18 crore," said an official statement issued by the EC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X