ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ಸೌಲಭ್ಯದಡಿಯಲ್ಲಿ ಕೇಂದ್ರದಿಂದ 44,000 ಕೋಟಿ ರೂ. ಬಿಡುಗಡೆ; ಕರ್ನಾಟಕಕ್ಕೆ ಅತ್ಯಧಿಕ ಸಾಲ

|
Google Oneindia Kannada News

ನವದೆಹಲಿ, ಅಕ್ಟೋಬರ್ 29: ಜಿಎಸ್‌ಟಿ ಪರಿಹಾರದ ಬದಲಿಗೆ ಬ್ಯಾಕ್ ಟು ಬ್ಯಾಕ್ ಸಾಲ ಸೌಲಭ್ಯದ ಅಡಿಯಲ್ಲಿ ಕೇಂದ್ರ ಹಣಕಾಸು ಸಚಿವಾಲಯವು ಗುರುವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 44,000 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಪರಿಹಾರದ ಬದಲಾಗಿ ಬ್ಯಾಕ್ ಟು ಬ್ಯಾಕ್ ಸಾಲವಾಗಿ ಬಿಡುಗಡೆಯಾದ ಒಟ್ಟು ಮೊತ್ತ 1,59,000 ಕೋಟಿ ರೂ. ಆಗಿದೆ. ಇದು ಸೆಸ್ ಸಂಗ್ರಹದಿಂದ ಪ್ರತಿ 2 ತಿಂಗಳಿಗೊಮ್ಮೆ ಬಿಡುಗಡೆಯಾಗುವ ಸಾಮಾನ್ಯ ಜಿಎಸ್‌ಟಿ ಪರಿಹಾರಕ್ಕೆ ಹೆಚ್ಚುವರಿಯಾಗಿದೆ.

ಕೇಂದ್ರ ಸರಕಾರವು 43ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ನಂತರ, ಸಂಪನ್ಮೂಲ ಕೊರತೆಯನ್ನು ಸರಿದೂಗಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬ್ಯಾಕ್ ಟು ಬ್ಯಾಕ್ ಆಧಾರದ ಮೇಲೆ ಸಾಲ ಬಿಡುಗಡೆ ಮಾಡಲು ನಿರ್ಧರಿಸಿತು. ಕಳೆದ ಆರ್ಥಿಕ ವರ್ಷದಲ್ಲಿ ಇದೇ ರೀತಿಯ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ 1.10 ಲಕ್ಷ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿತ್ತು.

Rs. 44,000 Crore Release From The Center Under Back To Back Loan Facility; Highest Loan To Karnataka

ಪ್ರಸಕ್ತ ವರ್ಷದಲ್ಲಿ ಬಿಡುಗಡೆಯಾದ 1.59 ಲಕ್ಷ ಕೋಟಿ ಮೊತ್ತವು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲು ಅಂದಾಜಿಸಲಾದ 1 ಲಕ್ಷ ಕೋಟಿ ರೂ. (ಸೆಸ್ ಸಂಗ್ರಹದ ಆಧಾರದ ಮೇಲೆ) ಪರಿಹಾರಕ್ಕಿಂತ ಹೆಚ್ಚಾಗಿದೆ. 2021-22ನೇ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಪರಿಹಾರದ ಮೊತ್ತವು ಒಟ್ಟು 2.59 ಲಕ್ಷ ಕೋಟಿ ರೂಪಾಯಿ ಮೀರುವ ನಿರೀಕ್ಷೆ ಇದೆ.

ಈಗ ಬಿಡುಗಡೆ ಮಾಡಲಾಗಿರುವ 44,000 ಕೋಟಿಯನ್ನು ಭಾರತ ಸರಕಾರ ಹಣಕಾಸು ಸಚಿವಾಲಯವು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪಡೆದ ಶೇ.5.69 ಬಡ್ಡಿ ದರದ 5 ವರ್ಷಗಳ ಭದ್ರತಾ ಪತ್ರ ಆಧಾರಿತ ಸಾಲದಿಂದ ಎತ್ತುವಳಿ ಮಾಡಲಾಗಿದೆ. ಈ ಬಿಡುಗಡೆಯ ಕಾರಣದಿಂದ ಕೇಂದ್ರ ಸರಕಾರವು ಯಾವುದೇ ಹೆಚ್ಚುವರಿ ಮಾರುಕಟ್ಟೆ ಸಾಲವನ್ನು ಪಡೆಯುವ ಅಗತ್ಯ ಇರುವುದಿಲ್ಲ.

ಈ ಹಣದ ಬಿಡುಗಡೆಯಿಂದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಸಾರ್ವಜನಿಕ ವೆಚ್ಚವನ್ನು ಇತರ ವಿಷಯಗಳ ಜೊತೆಗೆ ಸುಧಾರಣೆ, ಆರೋಗ್ಯ ಮೂಲಸೌಕರ್ಯ ಮತ್ತು ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇಂದು ಬಿಡುಗಡೆಯಾದ ಮೊತ್ತದಲ್ಲಿ ದೊಡ್ಡ ಪಾಲವನ್ನು ಪಡೆದಿರುವುದು ಕರ್ನಾಟಕ ರಾಜ್ಯ. ಅತ್ಯಧಿಕ ಅಂದರೆ 5,010.9 ಕೋಟಿ ರೂ. ಕರ್ನಾಟಕ ರಾಜ್ಯಕ್ಕೆ ಸಿಗುತ್ತಿದೆ. ಗುಜರಾತ್ 3608.53 ಕೋಟಿ ರೂ., ಹರಿಯಾಣ 2045.79 ಕೋಟಿ ರೂ., ಕೇರಳ 2418.49 ಕೋಟಿ ರೂ., ಮಹಾರಾಷ್ಟ್ರ 3814 ಕೋಟಿ ರೂ., ಪಂಜಾಬ್ 3357.48 ಕೋಟಿ ರೂ., ಉತ್ತರ ಪ್ರದೇಶ 2252.37 ಕೋಟಿ ರೂ. ಸೇರಿದಂತೆ ಒಟ್ಟು 26 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಣವನ್ನು ಹಂಚಿಕೆ ಮಾಡಲಾಗಿದೆ.

Recommended Video

ಕನ್ನಡಿಗ KL ರಾಹುಲ್ ಗೆ ಬಿಗ್ ಶಾಕ್ ಕೊಟ್ಟ ಪಂಜಾಬ್ ಟೀಂನ ಮಾಲೀಕ | Oneindia Kannada

English summary
The Union Finance Ministry on Thursday released Rs 44,000 crore to states and Union Territories under a back-to-back loan facility instead of a GST relief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X