ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಉದ್ಘಾಟನೆಗೆ ಮುನ್ನ ಕುಸಿಯಿತು 389 ಕೋಟಿಯ ಅಣೆಕಟ್ಟು

|
Google Oneindia Kannada News

ಮುಖ್ಯಮಂತ್ರಿ ನಿತೀಶ್ ಕುಮಾರ್ ರಿಂದ ಉದ್ಘಾಟನೆ ಆಗಬೇಕಿದ್ದ ಅಣೆಕಟ್ಟೆಯ ಭಾಗವೊಂದು ಅದಕ್ಕೂ ಒಂದು ದಿನಕ್ಕೆ ಮುಂಚೆ ಕುಸಿದು ಹೋಗಿದೆ. ಅಂದಹಾಗೆ ಈ ಕಾಲುವೆಯನ್ನು 389.31 ಕೋಟಿ ರುಪಾಯಿ ವೆಚ್ಚದಲ್ಲಿ ಬಿಹಾರದ ಭಾಗಲ್ಪುರ್ ನಲ್ಲಿ ನಿರ್ಮಿಸಲಾಗಿದೆ.

ಸರ್ಕಾರಿ ಬಂಗಲೆಯಿಂದ ಲಾಲು ಪುತ್ರನ ಎತ್ತಂಗಡಿಸರ್ಕಾರಿ ಬಂಗಲೆಯಿಂದ ಲಾಲು ಪುತ್ರನ ಎತ್ತಂಗಡಿ

ಈ ಕಾಲುವೆ ಯೋಜನೆಯು ಬಿಹಾರ ಹಾಗೂ ನೆರೆಯ ಜಾರ್ಖಂಡ್ ಗೆ ನೀರಾವರಿ ಸೌಕರ್ಯ ಒದಗಿಸುವ ಉದ್ದೇಶ ಹೊಂದಿದೆ. ಪ್ರಯೋಗಾರ್ಥವಾಗಿ ಪರೀಕ್ಷೆ ನಡೆಸುವಾಗ ಗಂಗಾ ನದಿಯ ನೀರು ರಭಸವಾಗಿ ಬಡಿದಿದ್ದರಿಂದ ಕಾಲುವೆಯ ಗೋಡೆ ಕುಸಿದಿದೆ. ಅಷ್ಟೇ ಅಲ್ಲ, ಕಹಲ್ಗಾಂವ್ ಮತ್ತು ಸುತ್ತಮುತ್ತಲ ಪ್ರದೇಶಗಳಿಗೂ ನೀರು ನುಗ್ಗಿದೆ. ಕಹಲ್ಗಾಂವ್ ನ ಸಿವಿಲ್ ನ್ಯಾಯಾಧೀಶರ ಮನೆಗೂ ನೀರು ನುಗ್ಗಿದೆ.

Rs 389-crore dam in Bihar collapses a day before inauguration

ತಾಂತ್ರಿಕ ಕಾರಣಗಳಿಂದ ಬಿಹಾರ ಮುಖ್ಯಮಂತ್ರಿಗಳ ಭಾಗಲ್ಪುರ್ ಕಾರ್ಯಕ್ರಮ ರದ್ದಾಗಿದೆ ಎಂದು ಬುಧವಾರ ಸಂಜೆ ಪಾಟ್ನಾದಲ್ಲಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಆಗುತ್ತದೆ. ಜಲಸಂಪನ್ಮೂಲ ಸಚಿವ ರಾಜೀವ್ ರಂಜನ್ ಸಿಂಗ್ ಲಲ್ಲನ್ ಮತ್ತು ಸ್ಥಳೀಯ ಕಾಂಗ್ರೆಸ್ ಶಾಸಕ ಸದಾನಂದ ಸಿಂಗ್ ಭಾಗವಹಿಸುತ್ತಾರೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿತ್ತು.

ವಿಡಿಯೋ: ಬಿಹಾರ ಜಲ ಪ್ರಳಯದ ನಡುವ ಮನಕಲಕುವ ದೃಶ್ಯವಿಡಿಯೋ: ಬಿಹಾರ ಜಲ ಪ್ರಳಯದ ನಡುವ ಮನಕಲಕುವ ದೃಶ್ಯ

ಅಣೆಕಟ್ಟು ಯೋಜನೆಯನ್ನು ಬಿಹಾರ ಹಾಗೂ ಜಾರ್ಖಂಡ್ ಜಂಟಿಯಾಗಿ ಕೈಗೊಂಡಿದ್ದವು. ಈ ಯೋಜನೆಯಿಂದ ಬಿಹಾರದ ಭಾಗಲ್ಪುರ್ ನ 18,620 ಹೆಕ್ಟೇರ್ ಭೂಮಿ ಹಾಗೂ ಜಾರ್ಖಂಡ್ ನ ಗೊಡ್ಡಾ ಜಿಲ್ಲೆಯ 4038 ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯ ಪಡೆಯಲಿದೆ ಎಂದು ಸರಕಾರ ಮಾಹಿತಿ ಬಿಡುಗಡೆ ಮಾಡಿದೆ.

ಅಂದಹಾಗೆ, ಯೋಜನಾ ಆಯೋಗವು ಈ ಅಣೆಕಟ್ಟು ಯೋಜನೆಗೆ ಮೊದಲು 1977ರಲ್ಲಿ ಅಂದಾಜು 13.88 ಕೋಟಿ ರುಪಾಯಿಗೆ ಒಪ್ಪಿಗೆ ನೀಡಿತ್ತು. ಮೊದಲ ಆಡಳಿತಾತ್ಮಕ ಒಪ್ಪಿಗೆ 2008ರಲ್ಲಿ 389.31 ಕೋಟಿಗೆ ಸಿಕ್ಕಿತು ಎಂಬ ಮಾಹಿತಿಯನ್ನೂ ಸರಕಾರ ಬಿಡುಗಡೆ ಮಾಡಿದೆ.

English summary
A day before it was to be inaugurated by Bihar Chief Minister Nitish Kumar, a portion of canal bilt at the cost of Rs 389.31 crore in Bhagalpur collapsed on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X