ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹ ಬಳಕೆ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ ಏರಿಕೆ

|
Google Oneindia Kannada News

ನವದೆಹಲಿ, ಆಗಸ್ಟ್ 17; ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೆ ಕಹಿಸುದ್ದಿ. ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಬೆಲೆ ಏರಿಕೆ ಬಳಿಕ ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 859.5 ರೂ. ಆಗಿದೆ.

ಮಂಗಳವಾರ ಪೆಟ್ರೋಲಿಯಂ ಕಂಪನಿಗಳು ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂ. ಏರಿಕೆ ಮಾಡಿವೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 68 ರೂ. ನಷ್ಟು ಏರಿಕೆಯಾಗಿದೆ.

ಬಂದಿದೆ ಹೊಸ ರೀತಿಯ ಎಲ್‌ಪಿಜಿ ಸಿಲಿಂಡರ್; ಹಳೇ ಸಿಲಿಂಡರ್ ವಿನಿಮಯ ಹೇಗೆ?ಬಂದಿದೆ ಹೊಸ ರೀತಿಯ ಎಲ್‌ಪಿಜಿ ಸಿಲಿಂಡರ್; ಹಳೇ ಸಿಲಿಂಡರ್ ವಿನಿಮಯ ಹೇಗೆ?

ಬೆಂಗಳೂರು ನಗರದಲ್ಲಿ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ 837.50 ರೂ.ಗಳಿಂದ 863 ರೂ.ಗಳಿಗೆ ಏರಿಕೆಯಾಗಿದೆ. ಈ ಹಿಂದೆ ಜುಲೈ 1ರಂದು ಸಿಲಿಂಡರ್‌ಗಳ ಬೆಲೆಯಲ್ಲಿ 25 ರೂ. ಏರಿಕೆಯಾಗಿತ್ತು.

ಗ್ರಾಹಕರೇ ಗಮನಿಸಿ: ವಾಣಿಜ್ಯ ಬಳಕೆ ಅಡುಗೆ ಅನಿಲ ದರ ಏರಿಕೆಗ್ರಾಹಕರೇ ಗಮನಿಸಿ: ವಾಣಿಜ್ಯ ಬಳಕೆ ಅಡುಗೆ ಅನಿಲ ದರ ಏರಿಕೆ

Rs 25 Hike In LPG Cylinder Price

ಪೆಟ್ರೋಲಿಂ ಕಂಪನಿಗಳು ಪ್ರತಿ ತಿಂಗಳ 1 ಮತ್ತು 15ನೇ ತಾರೀಕಿನ ಬಳಿಕ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಬೆಲೆ ಏರಿಕೆಯಾಗುತ್ತಲೇ ಹೋಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆಗಸ್ಟ್ 17: ಬಳ್ಳಾರಿ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಅತಿ ದುಬಾರಿ ಆಗಸ್ಟ್ 17: ಬಳ್ಳಾರಿ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಅತಿ ದುಬಾರಿ

ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಗಳ ಏರಿಕೆಯಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷದ ಡಿಸೆಂಬರ್ ಬಳಿಕ ಹಲವು ಬಾರಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾಗಿದೆ.

ತೈಲ ಬೆಲೆಗಳು ಏರಿಕೆಯಾದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಸಿಲಿಂಡರ್ ಬೆಲೆ ಹೆಚ್ಚಳವಾದರೆ ಹೋಟೆಲ್‌ಗಳಲ್ಲಿ ತಿನಿಸುಗಳ ಬೆಲೆ ಏರಿಕೆಯಾಗುತ್ತದೆ. ರಸ್ತೆ ಬದಿಯಲ್ಲಿ ಆಹಾರ ಉತ್ಪನ್ನಗಳನ್ನು ಮಾರುವ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ.

ಯಾವ ನಗರದಲ್ಲಿ ಎಷ್ಟು?; ಗೃಹ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳವಾದ ಬಳಿಕ ಚೆನ್ನೈನಲ್ಲಿ 875.50 ರೂ. ಪಾವತಿ ಮಾಡಬೇಕು. ಲಕ್ನೋದಲ್ಲಿ 897.5 ರೂ., ಅಹಮದಾಬಾದ್‌ನಲ್ಲಿ 866.50 ರೂ. ಆಗಿದೆ.

Recommended Video

ಈ ಮೂವರ ಮೇಲೆ ಚೀಲ ತುಂಬಿದ್ದ ಲಾರಿ ಬಿದ್ರೂ ಬದುಕುಳಿದಿದ್ದು ಹೇಗೆ? | Oneindia Kannada

ಮುಂಬೈ ನಗರದಲ್ಲಿ 859.5 ರೂ., ಕೋಲ್ಕತ್ತಾದಲ್ಲಿ 866 ರೂ. ಆಗಿದೆ. 2021ರ ಜನವರಿಯಲ್ಲಿ ನವದೆಹಲಿಯಲ್ಲಿ ಸಿಲಿಂಡರ್ ಬೆಲೆ 694 ರೂ. ಆಗಿತ್ತು. ಈಗ 859 ರೂ. ಆಗಿದೆ.

English summary
Rs 25 hike in liquified petroleum gas (LPG) cylinder on Tuesday. Prices had been hiked multiple times since December last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X