ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೇತನ್ ಭಗತ್ 'ಗರ್ಲ್ ಫ್ರೆಂಡ್' ವಿರುದ್ಧ 'ರಾಯಲ್' ಮೊಕದ್ದಮೆ

By Mahesh
|
Google Oneindia Kannada News

ನವದೆಹಲಿ, ಏ.22: ಜನಪ್ರಿಯ ಕಾದಂಬರಿಕಾರ ಚೇತನ್‌ ಭಗತ್‌ ವಿರುದ್ಧ ಬಿಹಾರದ ರಾಜ ಮನೆತನವೊಂದು ಒಂದು ಕೋಟಿ ರು. ಮಾನನಷ್ಟ ಮೊಕದ್ದಮೆ ಹೂಡಿದೆ. ಚೇತನ್ ಅವರ ಇತ್ತೀಚಿನ 'ಹಾಫ್ ಗರ್ಲ್ ಫ್ರೆಂಡ್' ಈಗ ವಿವಾದದ ಕೇಂದ್ರ ಬಿಂದುವಾಗಿದೆ.

ಬಿಹಾರದ ದುಮ್ರಾವೋ ಅರಸು ಮನೆತನದ ಬಗ್ಗೆ ಹಾಫ್ ಗರ್ಲ್ ಫ್ರೆಂಡ್ ಕಾದಂಬರಿಯಲ್ಲಿ ಚೇತನ್ ಅವರು ಕೆಟ್ಟದಾಗಿ ಬರೆದಿದ್ದಾರೆ. ಇದರಿಂದ ರಾಜ ಮನೆತನದ ಘನತೆ, ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ದುಮ್ರಾವೋ ಅರಸು ವಂಶಸ್ಥ 67 ವರ್ಷ ವಯಸ್ಸಿನ ಯುವರಾಜ್ ಚಂದ್ರ ವಿಜಯ್ ಸಿಂಗ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. [ಕೃತಿ ಚೌರ್ಯ ಆರೋಪ ಅಲ್ಲಗಳೆದ ಚೇತನ್ ಭಗತ್]

Half Girlfriend' in trouble: Delhi HC summons Chetan Bhagat for defaming 'Royal family of Dumraon'

ಹಾಫ್ ಗರ್ಲ್ ಫ್ರೆಂಡ್‌ ಕಾದಂಬರಿಯಲ್ಲಿ ದುಮ್ರಾವೋ ರಾಜ ಮನೆತನದವರನ್ನು ಕುಡುಕರು ಮತ್ತು ಗ್ಯಾಂಬ್ಲಿರ್ ಗಳೆಂದು ಚಿತ್ರೀಕರಿಸಿರುವುದು ಸಂಪೂರ್ಣ ರಾಜ ಕುಟುಂಬಕ್ಕೆ ಅವಮಾನಕಾರಿಯಾಗಿದೆ ಎಂದು ವಿಜಯ್ ಸಿಂಗ್ ಹೇಳಿದ್ದಾರೆ.

ಮಹಾರಾಜ ಬಹದ್ದೂರ್‌ ಕಮಲ್‌ ಸಿಂಗ್‌ ಅವರ ಹಿರಿಯ ಪುತ್ರ ಚಂದ್ರ ವಿಜಯ್‌ ಸಿಂಗ್‌ ಅವರ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. [ಚೇತನ್ ಭಗತ್ 'ಅರ್ಧ ಪ್ರೇಯಸಿ'ಯ ಕತೆಯಿದು]

Half Girlfriend' in trouble

ಅರ್ಜಿ ಸ್ವೀಕರಿಸಿದ ದೆಹಲಿ ಹೈಕೋರ್ಟ್ ಲೇಖಕ ಚೇತನ್ ಭಗತ್, ಹಾಫ್ ಗರ್ಲ್ ಫ್ರೆಂಡ್‌ ಕಾದಂಬರಿ ಪ್ರಕಟಿಸಿದ ರೂಪಾ ಪಬ್ಲಿಕೇಷನ್ ಸಂಸ್ಥೆಗೆ ಸಮನ್ಸ್ ಜಾರಿಗೊಳಿಸಿ ಮೇ.1ರೊಳಗೆ ಉತ್ತರಿಸುವಂತೆ ಸೂಚಿಸಿದೆ.

ನವೆಂಬರ್ 2014ರಿಂದ ಈ ಕಾದಂಬರಿ ಕುರಿತಂತೆ ರಾಜ ಮನೆತನದ ಜೊತೆ ಚೇತನ್ ಭಗತ್ ಕಿತ್ತಾಟ ನಡೆಸಿದ್ದಾರೆ.ಆದರೆ, ರಾಜ ಪರಿವಾರದ ಮನವಿಗೆ ಚೇತನ್ ಪುರಸ್ಕರಿಸದ ಕಾರಣ ಮಾನನಷ್ಟ ಮೊಕದ್ದಮೆ ಹೂಡಬೇಕಾಯಿತು ಎಂದು ದುಮ್ರಾವೋ ಅರಸರ ಪರ ವಕೀಲರು ಹೇಳಿದ್ದಾರೆ.

English summary
The bestselling author Chetan Bhagat has landed himself in trouble over his "half girlfriend" novel that was published last year in October.Delhi HC summons Chetan Bhagat for defaming 'Royal family of Dumraon'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X