ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಸಾಧಕರ ಪರಿಚಯಿಸಲು ಮುಂದಾದ ರೊಪೊಸೊ

|
Google Oneindia Kannada News

ಬೆಂಗಳೂರು, ಜುಲೈ 24: ವಿವಿಧ ಕೇತ್ರಗಳಲ್ಲಿ ಸಾಧನೆಗೈದ ಬಬಿತಾ ಫೋಗಟ್‌, ನೀಲ್ ಘೋಸ್, ಚಂದ್ರೊ ತೋಮರ್ ಮತ್ತು ಸಂಗ್ರಾಮ್‌ ಸಿಂಗ್‌ ಸಹಭಾಗಿತ್ವದಲ್ಲಿ ಪ್ರೈಡ್ ಆಫ್ ಇಂಡಿಯಾ ಪ್ರೋಗ್ರಾಮ್ ಅನ್ನು ರೊಪೊಸೊ ಪರಿಚಯಿಸಿದೆ.

ಭಾರತದಲ್ಲಿ ವಿವಿಧ ಕೇತ್ರಗಳಲ್ಲಿ ಸಾಧನೆಗೈದ ಬಬಿತಾ ಫೋಗಟ್‌, ಚಂದ್ರೋ ತೋಮರ್, ನೀಲ್‌ ಘೋಸ್ ಮತ್ತು ಸಂಗ್ರಾಮ್ ಸಿಂಗ್‌ ಹಾಗೂ ಇತರರ ಜೊತೆ ಸಹಭಾಗಿತ್ವದಲ್ಲಿ 'ಪ್ರೈಡ್ ಆಫ್ ಇಂಡಿಯಾ' ಪ್ರೋಗ್ರಾಮ್ ಅನ್ನು ರೊಪೊಸೊ ಪರಿಚಯಿಸಿದೆ. ಈ ಬಹುವಿಧದ ಪ್ರೋಗ್ರಾಮ್‌, ಜನರನ್ನು ಪ್ರೋತ್ಸಾಹಿಸಲು ಮತ್ತು ಸ್ಫೂರ್ತಿ ನೀಡಲು ಸಾಧಕರಿಗೆ ಅನುವು ಮಾಡುತ್ತದೆ.

ಭಾರತದಲ್ಲಿ ಹಲವು ಪ್ರತಿಭೆಗಳಿವೆ. ಹಲವು ಭಾರತೀಯರು ತಮ್ಮ ಆಯ್ಕೆಯ ಕೇತ್ರದಲ್ಲಿ ಸಾಧನೆ ಮಾಡಿದ್ದರೆ ಮತ್ತು ಹಲವರನ್ನು ನಾವು ಇನ್ನೂ ಗುರುತಿಸಿಯೇ ಇಲ್ಲ. ನಮ್ಮ ಪ್ರತಿಯೊಬ್ಬರಲೂ ಒಂದಲ್ಲ ಒಂದು ಪ್ರತಿಭೆ ಇದೆ. ಇದಕ್ಕೆ ಸ್ಫೂರ್ತಿ ಮತ್ತು ಗುರುತಿಸಿಕೊಳ್ಳಲು ವೇದಿಕೆ ಅಗತ್ಯವಿದೆ.

Roposo Launches ‘Pride Of India Program, A Collaboration With Indian Achievers

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳೆಯರ ಕುಸ್ತಿಯಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ವಿಜೇತೆ ಬಬಿತಾ ಫೋಗಟ್‌ರಿಂದ ಈ ಪ್ರೊಗ್ರಾಮ್‌ ಆರಂಭವಾಗಲಿದೆ. ಅಲ್ಲದೆ, ವಿಶ್ವದಲ್ಲೇ ಅತಿ ಹಿರಿಯ ಶಾರ್ಪ್‌ ಶೂಟರ್‌ ಆಗಿರುವ ಶೂಟರ್‌ ದಾದಿ ಎಂದೇ ಹೆಸರಾಗಿರುವ ಚಂದ್ರೋ ತೋಮರ್‌ ಹಾಗೂ ವಿಶ್ವದ ಕುಸ್ತಿಪಟುಗಳ ಪ್ರಕಾರ ವಿಶ್ವದ ಅತಿ ಉತ್ತಮ ಕುಸ್ತಿಪಟು ಎಂದು ಹೆಸರಾಗಿರುವ ಮತ್ತು 30 ಮಿಲಿಯನ್‌ ಜನರಿಗೆ ಆಹರ ಒದಗಿಸುತ್ತಿರುವ ರಾಬಿನ್ ಹುಡ್‌ ಆರ್ಮಿಯ ಚಾಲಕಶಕ್ತಿ ಸಂಗ್ರಾಮ್‌ ಸಿಂಗ್‌ ಕೂಡ ಇರಲಿದ್ದಾರೆ.

"ಸಾಧನೆಗೆ ವಯಸ್ಸು ಯಾವುದೇ ಅಡ್ಡಿಯಾಗುವುದಿಲ್ಲ. ವ್ಯಕ್ತಿಯನ್ನು ಯಾವುದೇ ರೀತಿಯಲ್ಲೂ ತಾರತಮ್ಯ ಮಾಡದ ಏಕರೂಪದ ಪ್ಲಾಟ್‌ಫಾರಂ ರೊಪೊಸೊ ಆಗಿದೆ. ವ್ಯಕ್ತಿಯ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸುವ ಈ ಪ್ಲಾಟ್‌ಫಾರಂಗೆ ಕೊಡುಗೆ ಸಲ್ಲಿಸಲು ನನಗೆ ಸಂತೋವಾಗುತ್ತಿದೆ" ಎಂದು ಚಂದ್ರೋ ತೋಮರ್‌ ಹೇಳಿದ್ದಾರೆ.
ಪ್ರತಿ ಪ್ರೈಡ್ ಆಫ್‌ ಇಂಡಿಯಾ ಮೆಂಟರ್‌ಗೆ ಪ್ರತ್ಯೇಕ ರೊಪೊಸೊ ಪ್ರೊಫೈಲ್ ಇರಲಿದೆ. ಇದರಲ್ಲಿ ಅವರು, ನವೀನವಾದ ರೊಪೊಸೊ ಶೈಲಿಯ ಸಣ್ಣ ವೀಡಿಯೋಗಳ ಮೂಲಕ ಇತರ ಭಾರತೀಯರ ಜೊತೆಗೆ ತಮ್ಮ ಅನುಭವಗಳು ಮತ್ತು ಜೀವನದ ಪಾಠಗಳನ್ನು ಹೇಳಿಕೊಳ್ಳಲಿದ್ದಾರೆ.
ಈ ಸರಣಿಯಲ್ಲಿ ಈ ಅಂಶಗಳು ಇರಲಿವೆ:

Roposo Launches ‘Pride Of India Program, A Collaboration With Indian Achievers

• ಚಂದ್ರೋ ತೋಮರ್‌ರ ಜೀವನದ ಪಾಠಗಳು ಮತ್ತು ಅವರ ಬದ್ಧತೆ ಮತ್ತು ಶಿಸ್ತು [ಇಲ್ಲಿ ಕ್ಲಿಕ್ ಮಾಡಿ]
• ದೈಹಿಕ ಆರೋಗ್ಯದ ಬಗ್ಗೆ ಸಂಗ್ರಾಮ್ ಸಿಂಗ್ ಅವರ ಸಲಹೆಗಳು [ಇಲ್ಲಿ ಕ್ಲಿಕ್‌ ಮಾಡಿ ]
• ಬಡವರಿಗೆ ಆಹಾರ ಒದಗಿಸುವ ಬಗ್ಗೆ ನೀಲ್ ಘೋಶ್‌ಅವರ ಮಾಹಿತಿಗಳು [ಇಲ್ಲಿ ಕ್ಲಿಕ್‌ ಮಾಡಿ ]
• ಸ್ವಯಂ ರಕ್ಷಣೆ ತಂತ್ರಗಳ ಬಗ್ಗೆ ಬಬಿತಾ ಫೋಗಟ್‌ರ ಮತು [ಶೀಘ್ರದಲ್ಲೇ ಬಿಡುಗಡೆಯಾಗಲಿದೆ]
"ದೇಶದಲ್ಲಿ ಅತಿದೊಡ್ಡ #ಮೇಡ್‌ಇನ್‌ಇಂಡಿಯಾ ಸಾಮಾಜಿಕ ವೀಡಿಯೋ ಪ್ಲಾಟ್‌ಫಾರಂ ಅಗಿರುವ ನಮಗೆ, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ" ಎಂದು ರೊಪೊಸೊ ಮಾಲೀಕತ್ವ ಹೊಂದಿರುವ ಗ್ಲಾನ್ಸ್‌ನ ಸಿಎಂಒ ಬಿಕಾಶ್ ಚೌಧರಿ ಹೇಳಿದ್ದಾರೆ. "ರೊಪೊಸೊ ಪ್ರೈಡ್ ಆಫ್‌ ಇಂಡಿಯಾ ಪ್ರೋಗ್ರಾಮ್‌ ಮೂಲಕ, ದೇಶಕ್ಕೆ ಹೆಮ್ಮೆ ತಂದ ಸಾಧಕರನ್ನು ಗುರುತಿಸುವ ಮತ್ತು ಕೋಟ್ಯಂತರ ಭಾರತೀಯರನ್ನು ಪ್ರೋತ್ಸಾಹಿಸುವ ಮೂಲಕ ದೇಶ ನಿರ್ಮಾಣಕ್ಕೆ ಕೊಡುಗೆ ನೀಡಲು ಬಯಸಿದ್ದೇವೆ."

"ಈ ಪ್ಲಾಟ್‌ಫಾರಂ ಅನ್ನು ಒದಗಿಸಿದ್ದಕ್ಕೆ ರೊಪೊಸೊಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ರಾಬಿನ್ ಹುಡ್ ಆರ್ಮಿಯಲ್ಲಿನ ಪ್ರತಿ ರಾಬಿನ್‌ಗೂ ಹೆಮ್ಮೆ ಎಂಬುದು ಅನ್ವಯವಾಗುತ್ತದೆ ಎಂದು ನೀಲ್‌ ಘೋಶ್ ಹೇಳಿದ್ದಾರೆ. ಹಲವು ವರ್ಷಗಳಿಂದಲೂ ನಾವು ರೊಪೊಸೊ ಜೊತೆಗೆ ಇಂಪ್ಯಾಕ್ಟ್‌ ಕ್ಯಾಂಪೇನ್‌ಗಳನ್ನು ನಡೆಸಿದ್ದೇವೆ. ಹೆಚ್ಚು ಸುರಕ್ಷಿತ ಮತ್ತು ಉತ್ತಮವಾದ ಸಮುದಾಯ ಮತ್ತು ಭವಿಷ್ಯದ ರೂಪಣೆಯಲ್ಲಿ ಕಾಳಜಿ ಹೊಂದಿರುವ ತಂಡ ಇದನ್ನು ಮಾಡುತ್ತಿರುವುದು ಇನ್ನೂ ವಿಶೇಷವಾಗಿದೆ" ಎಂದು ಅವರು ಹೇಳಿದ್ದಾರೆ.

Roposo Launches ‘Pride Of India Program, A Collaboration With Indian Achievers

ಚಂದ್ರೋ ತೋಮರ್‌, ನೀಲ್ ಘೋಸ್ ಮತ್ತು ಸಂಗ್ರಾಮ್‌ ಸಿಂಗ್‌ ಈಗಾಗಲೇ ರೊಪೊಸೊದಲ್ಲಿ ಸಕ್ರಿಯವಾಗಿದ್ದಾರೆ. ಒಂದೇ ದಿನದಲ್ಲಿ 25 ಸಾವಿರಕ್ಕೂ ಹೆಚ್ಚು ಫಾಲೋವರ್‌ಗಳನ್ನು ಗಳಿಸಿದ್ದರೆ. ಮುಂದಿನ ದಿನಗಳಲ್ಲಿ ಬಬಿತಾ ಫೋಗಟ್‌ ಮೊದಲ ಸಂದೇಶವನ್ನು ಹಂಚಿಕೊಳ್ಳಲಿದ್ದಾರೆ.

ರೊಪೊಸೊ ಬಗ್ಗೆ
ಭಾರತ ನಂ.1 ವೀಡಿಯೋ ಶೇರಿಂಗ್ ಸಾಮಾಜಿಕ ನೆಟ್‌ವರ್ಕ್‌ ಪ್ಲಾಟ್‌ಫಾರಂ ಆಗಿರುವ ರೊಪೊಸೊ ಭಾರತದಲ್ಲೇ ತಯಾರಿಸಲ್ಪಟ್ಟಿದ್ದಾಗಿದೆ ಮತ್ತು ಗ್ಲಾನ್ಸ್‌ ಇದರ ಮಾಲೀಕತ್ವ ಹೊಂದಿದೆ. ಇಂಗ್ಲಿಷ್ ಮತ್ತು 10 ಭಾರತೀಯ ಭಾಷೆಗಳಲ್ಲಿರುವ ಆಪ್‌, ಸಣ್ಣ ವೀಡಿಯೋ ಕಂಟೆಂಟ್‌ ಬಳಸಿ ಇತರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಮ್ಮನ್ನು ಅಭಿವ್ಯಕ್ತಗೊಳಿಸಲು ಅನುವು ಮಡುತ್ತದೆ. ರೊಪೊಸೊದ ಶಕ್ತಿಯುತ ವೀಡಿಯೋ ರಚನೆ ಮತ್ತು ಎಡಿಟಿಂಗ್ ಟೂಲ್‌ಗಳ ಮೂಲಕ ತಮ್ಮ ಜೀವನದ ಘಟನೆಗಳನ್ನು ಹಂಚಿಕೊಳ್ಳಲು, ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಮತ್ತು ಸಂಬಂಧಿಸಿದ ವಿಷಯಗಳ ಬಗ್ಗೆ ತಮ್ಮ ಭಾಷೆಯಲ್ಲೇ ಧ್ವನಿಯೆತ್ತಲು ಅನುವಾಗಲಿದೆ. ರೊಪೊಸೊ 80 ಮಿಲಿಯನ್‌ಗೂ ಹೆಚ್ಚು ಬಳಕೆದಾರರಿದ್ದಾರೆ ಮತ್ತು ದಿನಕ್ಕೆ 2 ಬಿಲಿಯನ್‌ಗೂ ಹೆಚ್ಚು ವೀಡಿಯೋ ಗಳಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ

ಗ್ಲಾನ್ಸ್‌ ಬಗ್ಗೆ
ಗ್ಲಾನ್ಸ್‌ ವಿಶ್ವದಲ್ಲೇ ಮೊದಲ ಸ್ಕ್ರೀನ್ ಜೀರೋ ಪ್ಲಾಟ್‌ಫಾರಂ ಅಗಿದ್ದು, ತಮ್ಮ ಸ್ಮಾರ್ಟ್‌ಫೊನ್‌ಗಳು ಮತ್ತು ಇತರ ಸಂಪರ್ಕಿತ ಸಾಧನಗಳ ಸ್ಕ್ರೀನ್ ಝೀರೋ ಇಂಟರ್ನೆಟ್‌ ಪಡೆಯುವ ಅನುಭವವನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಗ್ಲಾನ್ಸ್‌ನ ಎಐ ಅಳವಡಿಸಿದ ಪರ್ಸನಲೈಸೇಶನ್‌ನಿಂದಾಗಿ ಗ್ರಾಹಕರು ಕಂಟೆಂಟ್, ಉತ್ಪನ್ನಗಳು ಮತ್ತು ಸೇವೆಗಳನ್ನು ತಮ್ಮ ಆಯ್ಕೆಗೆ ಅನುಗುಣವಾಗಿ ಪಡೆಯಬಹುದು. ಇವೆಲ್ಲವನ್ನೂ ಅದ್ಭುತವಾದ ರೀತಿಯಲ್ಲಿ ಒದಗಿಸಲಾಗುತ್ತದೆ. 100 ಮಿಲಿಯನ್‌ಗೂ ಹೆಚ್ಚು ನಿತ್ಯದ ಸಕ್ರಿಯ ಬಳಕೆದಾರರನ್ನು ಹೊಂದಿರುವ ಗ್ಲಾನ್ಸ್‌, ಅತಿದೊಡ್ಡ #ಮೇಡ್ಇನ್ಇಂಡಿಯಾ ಕಂಟೆಂಟ್ ಪ್ಲಾಟ್‌ಫಾರಂ ಆಗಿದೆ. ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ

English summary
Roposo launches the 'Pride of India' program, a collaboration with Indian achievers like Babita Phogat, Chandro Tomar, Neel Ghose and Sangram Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X