• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಂಡ ಹೆಚ್ಚಿಸಿದ್ದೇ ಹೆಚ್ಚಿಸಿದ್ದು ರಸ್ತೆ ಅಪಘಾತ ಗಣನೀಯ ಕಮ್ಮಿ

|

ನವದೆಹಲಿ, ಮಾರ್ಚ್ 19: "ಮೋಟಾರು ವಾಹನ ಕಾಯ್ಡೆಯಲ್ಲಿ ತಿದ್ದುಪಡಿ ಮಾಡಿದ ನಂತರ, ರಸ್ತೆ ಅಪಘಾತ ಪ್ರಮಾಣ ಗಣನೀಯವಾಗಿ ಕಮ್ಮಿಯಾಗಿದೆ" ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಗಡ್ಕರಿ, "ದಂಡದ ಮೊತ್ತ ಭಾರೀ ಹೆಚ್ಚಾದ ನಂತರ, ಅಪಘಾತದ ಪ್ರಮಾಣ ಶೇ.10ರಷ್ಟು ಕಮ್ಮಿಯಾಗಿದೆ" ಎಂದು ಗಡ್ಕರಿ, ಪ್ರಶ್ನೋತ್ತರದ ವೇಳೆ ಹೇಳಿದ್ದಾರೆ.

ಫಾಸ್ಟ್‌ಟ್ಯಾಗ್ ಹಾಕಿಸಿಕೊಳ್ಳದ ವಾಹನ ಸವಾರರ ಪರದಾಟ ದೇವರಿಗೇ ಪ್ರೀತಿ

"ಕೇರಳ ಮತ್ತು ಅಸ್ಸಾಂನಲ್ಲಿ ಅಪಘಾತ ಹೆಚ್ಚಾದರೆ, ದೆಹಲಿ, ಉತ್ತರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ ಮತ್ತು ಮಣಿಪುರ ರಾಜ್ಯದಲ್ಲಿ ಅಪಘಾತದ ಪ್ರಮಾಣ ಕಮ್ಮಿಯಾಗಿದೆ" ಎಂದು ಗಡ್ಕರಿ, ಲೋಕಸಭೆಗೆ ತಿಳಿಸಿದ್ದಾರೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರದ ಪ್ರಕಾರ, ಸುಮಾರು ಐದು ಲಕ್ಷ ಅಪಘಾತಗಳು ದೇಶದಲ್ಲಿ ಸಂಭವಿಸುತ್ತಿದೆ. ಇದರಲ್ಲಿ ಸುಮಾರು ಶೇ.30ರಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಅಸುರಕ್ಷಿತ ಮತ್ತು ಅಜಾಗಕರೂತೆ ಚಾಲನೆಯೂ ಒಂದು.

ಈ ಕಾರಣಕ್ಕಾಗಿ ಕಟ್ಟುನಿಟ್ಟಿನ ಕಾನೂನು ತರಲು ಕೇಂದ್ರ ಸರಕಾರ ಮೋಟಾರು ವಾಹನ ಕಾಯ್ದೆಯಲ್ಲಿ ತಿದ್ದುಪಡಿಯನ್ನು ತಂದಿತ್ತು. ಮೂರು ದಶಕಗಳ ನಂತರ ತೆಗೆದುಕೊಂಡ ಈ ನಿರ್ಧಾರಕ್ಕೆ ಮೊದಮೊದಲು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಪರವಾನಿಗೆ ಇಲ್ಲದೆ ವಾಹನ ಚಾಲನೆ, ಡ್ರಿಂಕ್ ಎಂಡ್ ಡ್ರೈವ್, ವೇಗದ ಚಾಲನೆ, ಸೀಟು ಬೆಲ್ಟ್ ಧರಿಸದೇ ಇರುವುದು, ಹೀಗೆ.. ಎಲ್ಲಾ ಸಂಚಾರಿ ನಿಯಮ ಉಲ್ಲಂಘನೆಗೆ, ದಂಡದ ಪ್ರಮಾಣ ಸುಮಾರು ಹತ್ತು ಪಟ್ಟು ಏರಿಕೆಯಾಗಿತ್ತು.

English summary
Road accidents down by 10 per cent after increase in fines: Union Minister Nitin Gadkari in Lok Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X