ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂದೆಯನ್ನು ಅಲ್ಲಾಗೆ ಹೋಲಿಸಿದ್ದಕ್ಕೆ ಸ್ವಧರ್ಮೀಯರಿಂದಲೇ ವಿರೋಧ

ಕೋಲ್ಕತಾದ ರೇಡಿಯೋ ಜಾಕಿ ಅಫ್ಸರ್ ಅಲಿಗೆ ಫೇಸ್ ಬುಕ್ ನಲ್ಲಿ ಟೀಕೆ. ತಂದೆಯನ್ನು ಅಲ್ಲಾಗೆ ಹೋಲಿಸಿದ್ದಕ್ಕೆ ಆಕ್ಷೇಪ. ರಂಜಾನ್ ದಿನ ತಂದೆಯೊಂದಿಗೆ ಇದ್ದ ಫೋಟೋ ಹಾಕಿ ಕಮೆಂಟ್ ಹಾಕಿದ್ದಕ್ಕೆ ಟೀಕೆ ಎದುರಿಸಿದ ಜಾಕಿ ಅಲಿ.

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ಕೋಲ್ಕತಾ, ಜೂನ್ 27: ಇಲ್ಲಿನ ಖಾಸಗಿ ರೇಡಿಯೋ ಕಂಪನಿಯಲ್ಲಿ ಜಾಕಿ (ಕಾರ್ಯಕ್ರಮ ನಿರೂಪಕ) ಆಗಿ ಕೆಲಸ ಮಾಡುತ್ತಿರುವ ಅಫ್ಸರ್ ಅಲಿ ಎಂಬುವರು ತನ್ನ ತಂದೆಯನ್ನು 'ಅಲ್ಲಾ'ಗೆ ಹೋಲಿಸಿದ್ದಕ್ಕೆ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಪ್ರವಾಹವೇ ಹರಿದುಬಂದಿದೆ.

ಅಲಿ ಅವರು, ಇಸ್ಲಾಂ ಧರ್ಮಕ್ಕೆ ಸೇರಿದ ಬೆಂಗಾಲಿ ಟೆಲಿವಿಷನ್ ಹಾಗೂ ರೇಡಿಯೋ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಫೇಸ್ ಬುಕ್ ನಲ್ಲಿ ಅವರಿಗೆ ಸಾವಿರಾರು ಫಾಲೋವರ್ ಗಳಿದ್ದಾರೆ.

RJ Mir Afsar Ali trolled for comparing his father with 'Allah'

ಸೋಮವಾರ ರಂಜಾನ್ ಇದ್ದ ಕಾರಣ, ಮಸೀದಿಯೊಂದರ ಮುಂದೆ ತಮ್ಮ ತಂದೆಯ ಜತೆ ನಮಾಜ್ ಗೆ ಸಿದ್ಧವಾಗಿರುವ ಫೋಟೋವನ್ನು ತೆಗೆದು ಫೇಸ್ ಬುಕ್ ಗೆ ಹಾಕಿದ್ದರು. ಫೋಟೋ ಕೆಳಗೆ, 'ಆಮರ್ ಅಬ್ಬ (ಅಪ್ಪ), ಆಮರ್ ಅಲ್ಲಾ, ಈದ್ ಮುಬಾರಕ್' ಎಂಬ ಸಂದೇಶ ಹಾಕಿದ್ದರು.

ಇದಕ್ಕೆ ಸ್ವಧರ್ಮೀಯರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಅಪ್ಪನನ್ನು ಅಲ್ಲಾಗೆ ಹೋಲಿಸುವುದು ಸರಿಯೇ ಎಂದು ಬಹಳಷ್ಟು ಜನರು ಆತನಿಗೆ ಬೈದಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಅಫ್ಸರ್ ಅಲಿ ಅವರಿಗೆ ಇಂಥ ಟೀಕೆಗಳು ಹೊಸತೇನಲ್ಲ. ಈ ಹಿಂದೆ, ಕ್ರಿಸ್ಮಸ್ ಹಬ್ಬ ಆಚರಣೆ ಮಾಡಿದ್ದಕ್ಕೆ ಅವರ ವಿರುದ್ಧ ಟೀಕೆಗಳು ಬಂದಿದ್ದವು. ಇದೀಗ, ಮತ್ತೆ ಅವರ ಮೇಲೆ ಟೀಕೆ ಬಂದಿವೆ. ಈ ಬಾರಿ ಅವರಿಗೆ ಬಂಗಾಲಿ ಚಿತ್ರರಂಗದ ಸ್ಟಾರ್ ಗಳು ನೈತಿಕ ಬೆಂಬಲ ನೀಡಿದ್ದಾರೆಂದು ವರದಿಗಳಲ್ಲಿ ಹೇಳಲಾಗಿದೆ.

English summary
Mir Afsar Ali, a Muslim by religion, was trolled by some fanatics for nothing but comparing his father with Allah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X