ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಣಮುಖರಾದ ಮೇಲೂ ಮತ್ತೆ ಸೋಂಕು ತಗುಲುತ್ತದಾ; ಲ್ಯಾನ್ಸೆಟ್ ಅಧ್ಯಯನ ಏನು ಹೇಳಿದೆ?

|
Google Oneindia Kannada News

ಬ್ರಿಟನ್, ಜೂನ್ 04: ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಮತ್ತೆ ಕೆಲ ದಿನಗಳಲ್ಲೇ ಸೋಂಕು ತಗುಲುವ ಸಾಧ್ಯತೆ ಕಡಿಮೆ ಎಂದು ಕೆಲವು ತಜ್ಞರು ಈಚೆಗೆ ಹೇಳಿದ್ದರು. ಮೊದಲ ಬಾರಿಗೆ ಸೋಂಕು ತಗುಲಿದ ವ್ಯಕ್ತಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚಿಕಿತ್ಸೆಗಳನ್ನು ನೀಡಿರುವುದರಿಂದ 6 ತಿಂಗಳೊಳಗೆ ಮರು ಸೋಂಕು ತಗುಲುವುದು ವಿರಳವಾಗಿರುತ್ತದೆ ಎಂದು ಬ್ರಿಟನ್‌ನಲ್ಲಿ ನಡೆದಿದ್ದ ಅಧ್ಯಯನ ತಿಳಿಸಿತ್ತು. ಇದೀಗ ಆ ಅವಧಿಯನ್ನು ಹತ್ತು ತಿಂಗಳಿಗೆ ಏರಿಸಿದೆ ಮತ್ತೊಂದು ಅಧ್ಯಯನ.

ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಹತ್ತು ತಿಂಗಳವರೆಗೂ ಸೋಂಕು ತಗುಲುವುದಿಲ್ಲ ಎಂದು ಲ್ಯಾನ್ಸೆಟ್ ಹೆಲ್ದಿ ಲಾಂಗೆವಿಟಿ ನಿಯತಕಾಲಿಕೆಯಲ್ಲಿನ ಅಧ್ಯಯನ ಹೇಳಿದೆ. ಮುಂದೆ ಓದಿ...

ಎರಡನೇ ಬಾರಿಗೆ ಕೊರೊನಾ ಸೋಂಕು ತಗುಲಿದರೆ ಮತ್ತಷ್ಟು ಅಪಾಯಎರಡನೇ ಬಾರಿಗೆ ಕೊರೊನಾ ಸೋಂಕು ತಗುಲಿದರೆ ಮತ್ತಷ್ಟು ಅಪಾಯ

"ಮತ್ತೆ ಸೋಂಕಿಗೆ ತುತ್ತಾಗುವ ಸಾಧ್ಯತೆ ತೀರಾ ಕಡಿಮೆ"

ಲ್ಯಾನ್ಸೆಟ್ ಹೆಲ್ದಿ ಲಾಂಗೆವಿಟಿ ಎಂಬ ನಿಯತಕಾಲಿಕೆ ಈ ಕುರಿತು ಸಂಶೋಧನಾ ಲೇಖನ ಪ್ರಕಟಿಸಿದೆ. ಕಳೆದ ಅಕ್ಟೋಬರ್‌ ಹಾಗೂ ಈ ಫೆಬ್ರವರಿ ನಡುವೆ ದಾಖಲಾದ ಕೊರೊನಾ ಸೋಂಕಿನ ಪ್ರಮಾಣದ ವಿಶ್ಲೇಷಣೆ ನಡೆಸಿ ಈ ಫಲಿತಾಂಶ ನೀಡಿರುವುದಾಗಿ ತಿಳಿಸಿದೆ. ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ಸಂಶೋಧಕರು ಲಂಡನ್‌ನಲ್ಲಿ ಈ ಕುರಿತು ಸಂಶೋಧನೆ ನಡೆಸಿದ್ದಾರೆ.
ಹತ್ತು ತಿಂಗಳ ಹಿಂದೆ ಸೋಂಕಿತರಾಗಿದ್ದವರು ಹಾಗೂ ಸೋಂಕಿಗೆ ಒಳಗಾಗದವರನ್ನು ಹೋಲಿಕೆ ಮಾಡಲಾಗಿದೆ. ಈ ಹಿಂದೆ ಸೋಂಕಿಗೆ ತುತ್ತಾದವರು ಈ ನಾಲ್ಕು ತಿಂಗಳ ಅವಧಿ ಮತ್ತೆ ಸೋಂಕಿಗೆ ತುತ್ತಾಗಿರುವ ಸಾಧ್ಯತೆ 85% ಕಡಿಮೆ ಇರುವುದಾಗಿ ತಿಳಿಸಿದ್ದಾರೆ.

 ನಾಲ್ಕು ತಿಂಗಳ ಅವಧಿಯ ವಿಶ್ಲೇಷಣೆ

ನಾಲ್ಕು ತಿಂಗಳ ಅವಧಿಯ ವಿಶ್ಲೇಷಣೆ

ಹತ್ತು ತಿಂಗಳ ಹಿಂದೆ ಸೋಂಕಿಗೆ ಒಳಗಾಗಿದ್ದವರು ಈ ನಾಲ್ಕು ತಿಂಗಳ ಅವಧಿಯಲ್ಲಿ ಮತ್ತೆ ಸೋಂಕಿಗೆ ತುತ್ತಾಗಿಲ್ಲ. ತುತ್ತಾಗಿದ್ದರೂ ಪ್ರಮಾಣ ತೀರಾ ಕಡಿಮೆ ಇದೆ ಎಂದು ಅಧ್ಯಯನ ಹೇಳಿದೆ. ಒಮ್ಮೆ ಸೋಂಕಿನಿಂದ ಗುಣಮುಖರಾದ ನಂತರ ಮತ್ತೆ ಸೋಂಕಿಗೆ ತಗುಲುವ ಸಾಧ್ಯತೆ ಕಡಿಮೆ ಇರುವುದು ಸಂತೋಷದ ವಿಚಾರ. ಒಬ್ಬರಿಗೇ ಎರಡು ಬಾರಿ ಸೋಂಕು ತಗುಲುವ ಸಾಧ್ಯತೆಯು ತೀರಾ ಕಡಿಮೆ ಇರುವುದು ಅಧ್ಯಯನದಿಂದ ಕಂಡುಬಂದಿದೆ ಎಂದು ಯುಸಿಎಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಇನ್ಫಾರ್ಮಾಟಿಕ್ಸ್‌ ಲೇಖಕ ಮರಿಯಾ ಕ್ರುಟಿಕೋವ್ ಹೇಳಿದ್ದಾರೆ.

 ಸೋಂಕಿಗೆ ನೀಡುವ ಚಿಕಿತ್ಸೆ ಕೊಡಲಿದೆ ಶಕ್ತಿ

ಸೋಂಕಿಗೆ ನೀಡುವ ಚಿಕಿತ್ಸೆ ಕೊಡಲಿದೆ ಶಕ್ತಿ

ಈ ಹಿಂದೆ ಸೋಂಕು ತಗುಲಿದ್ದ ಸಂದರ್ಭ ನೀಡಲಾದ ಚಿಕಿತ್ಸೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಈ ಶಕ್ತಿಯೇ ಮತ್ತೆ ಸೋಂಕು ತಗುಲುವ ಸಾಧ್ಯತೆಯನ್ನೂ ಕಡಿಮೆಯಾಗಿಸುತ್ತದೆ ಎಂದಿದ್ದಾರೆ. ಸರಾಸರಿ 86 ವಯಸ್ಸಿನ 682 ಜನರು ಹಾಗೂ 1429 ಜನರ ಮೇಲೆ ಅಧ್ಯಯನ ನಡೆಸಲಾಗಿದೆ. ಈ ಮುನ್ನವೇ ಸೋಂಕು ತಗುಲಿದ್ದ 634 ಮಂದಿಯಲ್ಲಿ 14 ಜನರಿಗೆ ಮಾತ್ರ ಮರು ಸೋಂಕು ತಗುಲಿರುವುದು ಕಂಡುಬಂದಿತ್ತು.

 ಚಿಕಿತ್ಸೆ ಅಸಮರ್ಪಕವಾಗಿದ್ದರೆ ಮತ್ತೆ ಸೋಂಕು

ಚಿಕಿತ್ಸೆ ಅಸಮರ್ಪಕವಾಗಿದ್ದರೆ ಮತ್ತೆ ಸೋಂಕು

ಇತ್ತೀಚೆಗಷ್ಟೇ ನಡೆದ ಬ್ರಿಟೀಷ್ ಅಧ್ಯಯನದ ಪ್ರಕಾರ, ಮೊದಲ ಬಾರಿಗೆ ಸೋಂಕು ತಗುಲಿದ ವ್ಯಕ್ತಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಿಕಿತ್ಸೆಗಳನ್ನು ನೀಡಿರುವುದರಿಂದ 6 ತಿಂಗಳೊಳಗೆ ಮರು ಸೋಂಕು ತಗುಲುವುದು ವಿರಳವಾಗಿರುತ್ತದೆ. ಚಿಕಿತ್ಸೆಯು ಅಸಮರ್ಪಕವಾಗಿದ್ದಾಗ ಮಾತ್ರ ಮರು ಸೋಂಕು ತಗುಲುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗಿತ್ತು.

English summary
Risk of catching Covid again falls 'sharply' for up to 10 months after first infection saying Lancet study,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X