ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಹೊಸ ಕೋವಿಡ್ ಪ್ರಕರಣ ಹೆಚ್ಚಳ; ಇದು 4ನೇ ಅಲೆ ಅಲ್ಲ

|
Google Oneindia Kannada News

ನವದೆಹಲಿ, ಏಪ್ರಿಲ್ 20; ನವದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಇದರಿಂದಾಗಿ 4ನೇ ಅಲೆ ಬಂದಿದೆಯೇ? ಎಂಬ ಅನುಮಾನ ಜನರನ್ನು ಕಾಡುತ್ತಿದೆ.

ಬುಧವಾರ ಐಸಿಎಂಆರ್‌ನ ನಿವೃತ್ತ ಸಂಶೋಧಕ ಡಾ. ಗಂಗೇಡ್ಕರ್ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. "ಇದು 4ನೇ ಅಲೆ ಎಂದು ಅನ್ನಿಸುತ್ತಿಲ್ಲ. ಯಾವುದೇ ಹೊಸ ರೂಪಾಂತರಿ ಪತ್ತೆಯಾಗಿಲ್ಲ" ಎಂದು ಹೇಳಿದ್ದಾರೆ.

ಕೋವಿಡ್ ಸೋಂಕು ತಗುಲಿದರೆ ವಿಶೇಷ ಸಿಎಲ್ ರಜೆ ಕೋವಿಡ್ ಸೋಂಕು ತಗುಲಿದರೆ ವಿಶೇಷ ಸಿಎಲ್ ರಜೆ

"ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಈಗ ಪತ್ತೆಯಾಗುತ್ತಿರುವುದು ಒಮಿಕ್ರಾನ್‌ನ ಬಿಎ.2 ತಳಿಯಾಗಿದೆ. ನಮ್ಮಲ್ಲಿ ಕೆಲವು ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸುವ ನಿಯಮವನ್ನು ತಪ್ಪಾಗಿ ತಿಳಿದಿದ್ದೇವೆ. ಕಡ್ಡಾಯವಾಗಿ ಮಾಸ್ಕ್ ಧರಿಸುವ ನಿಯಮ ಸಡಿಲಿಸಲಾಗಿದೆ ಎಂದರೆ ಕೋವಿಡ್‌ ಹರಡುವಿಕೆ ಕಡಿಮೆಯಾಗಿದೆ ಎಂದು ಅರ್ಥವಲ್ಲ" ಎಂದರು.

ದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ, ಇಲ್ಲವೇ ದಂಡ ದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ, ಇಲ್ಲವೇ ದಂಡ

Rise In Covid Case This Is Not 4th Wave Says Dr Gangakhedkar

"ಇದುವರೆಗೂ ಕೋವಿಡ್‌ನ ಹೊಸ ರೂಪಾಂತರಿ ಎಲ್ಲೂ ಪತ್ತೆಯಾಗಿಲ್ಲ. ವೃದ್ಧರು, ಲಸಿಕೆ ಪಡೆದವರಿಗೆ ಈಗ ಸೋಂಕು ತಗುಲಿಲ್ಲ. ನಾವು ಮಾಸ್ಕ್ ಬಳಕೆ ಮಾಡುವುದನ್ನು ಎಂದಿಗೂ ಮರೆಯಬಾರದು" ಎಂದು ಡಾ. ಗಂಗೇಡ್ಕರ್ ಹೇಳಿದ್ದಾರೆ.

ದೆಹಲಿ, ಹರಿಯಾಣ ಯುಪಿಯಲ್ಲಿ ಕೋವಿಡ್ ಸೋಂಕು ಅಬ್ಬರ ದೆಹಲಿ, ಹರಿಯಾಣ ಯುಪಿಯಲ್ಲಿ ಕೋವಿಡ್ ಸೋಂಕು ಅಬ್ಬರ

Recommended Video

ಫ್ರಾಂಚೈಸಿ ಮಾಡಿಕೊಂಡ ದೊಡ್ಡ ತಪ್ಪು | Oneindia Kannada

ಹರ್ಯಾಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ದೆಹಲಿ ಸರ್ಕಾರ ಬುಧವಾರ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘನೆ ಮಾಡಿದರೆ 500 ರೂ. ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದೆ.

English summary
Ex-head scientist at ICMR Dr. Gangakhedkar said that no new variant has emerged so far. I don't think this is the 4th wave of Covid. The entire world continues to witness BA.2 variant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X