ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಮಾಂಸ ನಿಷೇಧಕ್ಕೆ ತಡೆ ಹಾಕಿದ ಸುಪ್ರಿಂ ಕೋರ್ಟಿನ ಐತಿಹಾಸಿಕ ತೀರ್ಪು

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 25: ಖಾಸಗಿತನ ಮೂಲಭೂತ ಹಕ್ಕು ಎಂಬುದನ್ನು ಸುಪ್ರಿಂ ಕೋರ್ಟ್ ಸಾಂವಿಧಾನಿಕ ಪೀಠ ಹೇಳುತ್ತಿದ್ದಂತೆ ಇದರ ಪರಿಣಾಮಗಳು ಹಲವು ವಲಯಗಳ ಮೇಲೆ ಆವರಿಸಲಿದೆ.

ಏನಿದು ಖಾಸಗಿತನದ ಹಕ್ಕು?: ತಿಳಿಯಬೇಕಾದ 6 ಸಂಗತಿಏನಿದು ಖಾಸಗಿತನದ ಹಕ್ಕು?: ತಿಳಿಯಬೇಕಾದ 6 ಸಂಗತಿ

ಸುಪ್ರಿಂ ತೀರ್ಪಿನಿಂದ ಈಗಾಗಲೇ ಆಧಾರ್ ಕಾರ್ಡ್ ಕಡ್ಡಾಯದ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಜತೆಗೆ ಬೀಫ್ ಬ್ಯಾನ್ ಮೇಲೆಯೂ ಇದರ ಪರಿಣಾಮ ಬೀರಲಿದೆ.

ಈಗಾಗಲೇ ಸರಕಾರ ಬೀಫ್ ಬ್ಯಾನ್ ಮಾಡಿರುವುದನ್ನು ಪ್ರಶ್ನಿಸಿ ಹಲವರು ಕೋರ್ಟ್ ಮೊರೆ ಹೋಗಿದ್ದಾರೆ. ಗೋ ಮಾಂಸ ಸೇವನೆಗೆ ತಡೆ ನೀಡಿರುವುದರಿಂದ ನಮ್ಮ ವೈಯಕ್ತಿಕ ಹಕ್ಕುಗಳು ಮತ್ತು ಆಹಾರದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ತಗಾದೆ ತೆಗೆದಿದ್ದರು. ಇದೀಗ ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರಿಂ ಕೋರ್ಟ್ ಹೇಳಿರುವುದರಿಂದ ರಾಜ್ಯಗಳು ಹೇರಿರುವ ಗೋ ಮಾಂಸ ನಿಷೇಧ ಮತ್ತೊಮ್ಮೆ ಪರಿಶೀಲನೆಗೆ ಒಳಗೊಳ್ಳಬೇಕಾಗಿದೆ.

ನಿನ್ನೆಯ ತೀರ್ಪು ನೀಡಿದ ವೇಳೆ ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ವೈಯಕ್ತಿಕವಾಗಿ, "ಯಾವುದೇ ರಾಜ್ಯಗಳು ವ್ಯಕ್ತಿ ಇದೇ ಆಹಾರ ತಿನ್ನಬೇಕು. ಇದೇ ರೀತಿ ಬಟ್ಟೆ ತೊಡಬೇಕು, ವೈಯಕ್ತಿಕವಾಗಿ, ಸಮಾಜಿಕವಾಗಿ ಮತ್ತು ರಾಜಕೀಯ ಬದುಕಿನಲ್ಲಿ ಇದೇ ರೀತಿಯ ಸಂಬಂಧಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳುವಂತಿಲ್ಲ," ಎಂದು ಹೇಳಿದ್ದರು.

'ಖಾಸಗಿತನ ಮೂಲಭೂತ ಹಕ್ಕು' ಸಾಂವಿಧಾನಿಕ ಪೀಠದಿಂದ ಮಹತ್ವದ ತೀರ್ಪು'ಖಾಸಗಿತನ ಮೂಲಭೂತ ಹಕ್ಕು' ಸಾಂವಿಧಾನಿಕ ಪೀಠದಿಂದ ಮಹತ್ವದ ತೀರ್ಪು

ಹೀಗಾಗಿ ಗೋ ಮಾಂಸ ನಿಷೇಧ ಇದೀಗ ರದ್ದಾಗುವ ಸಾಧ್ಯತೆ ಇದೆ. ಅತ್ತ ಆಧಾರ್ ಕಾರ್ಡ್ ಕಡ್ಡಾಯ ಪ್ರಕರಣವನ್ನು ಪಂಚ ಸದಸ್ಯರ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ತಜ್ಞರು ಹೇಳುವ ಪ್ರಕಾರ ಆಧಾರ್ ಕಾರ್ಡ್ ಇರಲಿದೆ, ಆದರೆ ಮಾರ್ಗಸೂಚಿಗಳನ್ನು ಬಿಗಿಗೊಳಿಸಬಹುದು ಎನ್ನಲಾಗಿದೆ.

English summary
The Right to Privacy verdict is expected to have a bearing on a lot of cases. It would not just have a bearing on Aadhaar, but also on beef ban as well. The Supreme Court on Thursday delivered a historic judgment in which it declared Right to Privacy as a fundamental right.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X