ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿತನ ಕುರಿತ ಸುಪ್ರೀಂ ತೀರ್ಪು, ಆಧಾರ್ ಕತೆ ಏನು?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 24: 'ಖಾಸಗಿತನದ ಹಕ್ಕು ಮೂಲಭೂತ ಹಕ್ಕು' ಎಂದು ಸುಪ್ರೀಂಕೋರ್ಟ್‌ ಗುರುವಾರದಂದು ಮಹತ್ವದ ತೀರ್ಪು ನೀಡಿದೆ. ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯ ಎಂಬುದನ್ನು ಪ್ರಶ್ನಿಸಿ ಅರ್ಜಿ ಹಾಕಲಾಗಿತ್ತು. 9 ನ್ಯಾಯಮೂರ್ತಿಗಳ ಸಾಂವಿಧಾನಿಕ ನ್ಯಾಯಪೀಠದಿಂದ ಒಮ್ಮತ ತೀರ್ಪು ನೀಡಿದ್ದಾರೆ. ಹೀಗಾಗಿ, ಆಧಾರ್ ಕಾರ್ಡ್ ಕತೆ ಏನಾಗುತ್ತದೆ? ಎಂಬ ಪ್ರಶ್ನೆ ಎದ್ದಿದೆ.

ಕೇಂದ್ರ ಸರ್ಕಾರದ ಬಹುತೇಕ ಎಲ್ಲಾ ಯೋಜನೆಗಳ ಜತೆ, ಬ್ಯಾಂಕ್, ಪ್ಯಾನ್ ಕಾರ್ಡ್ ಸೇರಿದಂತೆ ಎಲ್ಲಾ ಹಣಕಾಸು ವ್ಯವಹಾರಕ್ಕೂ
ಆಧಾರ್ ಕಾರ್ಡ್ ಕಡ್ಡಾಯ ಎಂಬುದನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿತ್ತು.

Right to Privacy: How it affects the common man


ಇದು ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಮುಖ್ಯವಾಗಿ ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ಮಾಡುವ ಮೂಲಕ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ನಡೆದಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಈ ಹಿಂದೆ 1954ರಲ್ಲಿ 8 ನ್ಯಾಯಮೂರ್ತಿಗಳ ಪೀಠ ಹಾಗೂ 1962ರಲ್ಲಿ 6 ನ್ಯಾಯಮೂರ್ತಿಗಳ ಪೀಠ ಖಾಸಗಿತನದ ಹಕ್ಕು ಎಂಬುದೇ ಇಲ್ಲ ಎಂದು ಹೇಳಿತ್ತು. ಇದು ಸರಿಯೋ ತಪ್ಪೋ ಎಂಬುದನ್ನು 9 ನ್ಯಾಯಮೂರ್ತಿಗಳ ಪೀಠ ತೀರ್ಮಾನಿಸಿದೆ.

ಕಣ್ಣಿನ ಸ್ಕ್ಯಾನ್ ಮತ್ತು ಬೆರಳಚ್ಚುಗಳನ್ನು ಸರಕಾರವೊಂದು ಪಡೆದುಕೊಳ್ಳುವುದು ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ಸಂಬಂಧ 2015ರಲ್ಲಿ ವಾದ ಮಂಡಿಸಿದ್ದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಭಾರತೀಯರಿಗೆ ಖಾಸಗಿತನ ಎಂಬ ಮೂಲಭೂತ ಹಕ್ಕೇ ಇಲ್ಲ ಎಂದು ವಾದಿಸಿದ್ದರು.

ಫೋನ್ ಮಾಹಿತಿ ಹಂಚಿಕೆ: ಗ್ರಾಹಕರ ಖಾಸಗಿ ಮಾಹಿತಿಯನ್ನು ಸೇವಾದಾರರು ಇತರೆ ಸೇವಾ ಸಂಸ್ಥೆಗಳಿಗೆ ಹಂಚಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಆರ್ಟಿಕಲ್ 21ರಡಿ ಸಂವಿಧಾನದಲ್ಲಿ ಖಾಸಗಿತನಕ್ಕೆ ರಕ್ಷಣೆ ಇದೆ, ಮೂಲಭೂತ ಹಕ್ಕು ಎಂದಾದರೆ, ಆಧಾರ್ ಕಾರ್ಡ್ ಕಡ್ಡಾಯದ ಬಗ್ಗೆ ಕುತೂಹಲ ಮೂಡಿದ್ದು, ಪಂಚ ಸದಸ್ಯರ ನ್ಯಾಯಪೀಠದಲ್ಲಿ ಈ ಬಗ್ಗೆ ತೀರ್ಮಾನವಾಗಲಿದೆ.

English summary
The Supreme Court has prounced historic verdict in the Right to Privacy case. The court's Constitution Bench comprising nine judges will examine whether Right to Privacy is a fundamental right.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X