ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್​ಇ ಟಾಪರ್ ಮೇಲೆ ಅತ್ಯಾಚಾರ: ಯೋಧ ಸೇರಿ ಎಲ್ಲಾ ಆರೋಪಿಗಳ ಬಂಧನ

|
Google Oneindia Kannada News

ಚಂಡೀಗಢ, ಸೆಪ್ಟೆಂಬರ್ 24: ಸಿಬಿಎಸ್​ಇ ಟಾಪರ್ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧ ಸೇರಿದಂತೆ ಎಲ್ಲಾ ಪ್ರಮುಖ ಆರೋಪಿಗಳನ್ನು ಬಂಧಿಸಿರುವುದಾಗಿ ಹರ್ಯಾಣ ಪೊಲೀಸರು ಪ್ರಕಟಿಸಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಪಂಕಜ್ ಹಾಗೂ ಮನೀಶ್ ಎಂಬುವವರನ್ನು ಮಹೇಂದ್ರಘರ್‌ ಜಿಲ್ಲೆಯ ಸತ್ನಾಲಿ ಎಂಬಲ್ಲಿ ಬಂಧಿಸಲಾಗಿದೆ, ಇವರಿಬ್ಬರು ಕಳೆದ 12 ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಕಳೆದ ವಾರ ಪ್ರಮುಖ ಆರೋಪಿ ನಿಶು ಫೋಗಟ್ ಅವರನ್ನು ವಶಕ್ಕೆ ಪಡೆದು, ವಿಚಾರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ರಿವಾರಿ: ಅತ್ಯಾಚಾರದ ನಂತರ ತಾನೇ ವೈದ್ಯರಿಗೆ ಫೋನಾಯಿಸಿದ್ದ ಆರೋಪಿ! ರಿವಾರಿ: ಅತ್ಯಾಚಾರದ ನಂತರ ತಾನೇ ವೈದ್ಯರಿಗೆ ಫೋನಾಯಿಸಿದ್ದ ಆರೋಪಿ!

ಸೆಪ್ಟೆಂಬರ್‌ 12ರಂದು 19 ವರ್ಷ ವಯಸ್ಸಿನ ಯುವತಿ, ಮಹೇಂದ್ರಘರ್ ಜಿಲ್ಲೆಯ ಕಾನಿನ ಎಂಬಲ್ಲಿ ಕೋಚಿಂಗ್‌ ಕ್ಲಾಸ್‌ ಗೆ ತೆರಳುವಾಗ ಈ ಮೂವರು ಆರೋಪಿಗಳು ಆಕೆಯನು ಕಿಡ್ನಾಪ್‌ ಮಾಡಿದ್ದಾರೆ. ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆಗಳನ್ನು ಬೆರೆಸಿ, ಬಲವಂತವಾಗಿ ಕುಡಿಯುವಂತೆ ಮಾಡಿದ್ದಾರೆ. ನಂತರ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು

Rewari gangrape case: All three accused Arrested including Army Jawan

ಈ ಕುರಿತು ಹರಿಯಾಣ ಪೊಲೀಸ್‌ ಮುಖ್ಯಸ್ಥ ಬಿ ಎಸ್‌ ಸಂಧು ಮಾತನಾಡಿ, ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಭಾರತೀಯ ಸೇನೆ ಯೋಧ ಪಂಕಜ್ (ರಾಜಸ್ಥಾನದ ಕೋಟಾದಲ್ಲಿ ನಿಯೋಜನೆಗೊಂಡಿದ್ದರು) ಹಾಗೂ ಆತನ ಸ್ನೇಹಿತ ಮನಿಷ್‌ನನ್ನು ಬಂಧಿಸಲಾಗಿದೆ. ಮೂವರು ಆರೋಪಿಗಳಲ್ಲದೆ, ಅತ್ಯಾಚಾರ ನಡೆದ ಮನೆಯ ಮಾಲೀಕ ದೀನ್ ದಯಾಳ್ ಹಾಗೂ ಆರ್ ಎಂ ಪಿ ವೈದ್ಯ ಸಂಜೀವ್ ಅವರನ್ನು ಬಂಧಿಸಲಾಗಿದೆ.

ರೇವಾರಿ ಅತ್ಯಾಚಾರ: ಆರೋಪಿಗಳ ಮಾಹಿತಿಗೆ ಲಕ್ಷ ರೂ. ಇನಾಮುರೇವಾರಿ ಅತ್ಯಾಚಾರ: ಆರೋಪಿಗಳ ಮಾಹಿತಿಗೆ ಲಕ್ಷ ರೂ. ಇನಾಮು

ಬಿಜೆಪಿ ಆಡಳಿತವಿರುವ ಹರ್ಯಾಣದಲ್ಲಿ ನಡೆದ ಈ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಸಿಎಂ ಮನೋಹರ್ ಖಟ್ಟರ್ ಅವರ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Pankaj and Manish, the two prime accused in Rewari gangrape case have been arrested on Sunday. The two were on the run for 12 days. The two have been arrested from Satnali in Mahendragarh, said sources. Earlier this week the police had arrested another prime accused- Nishu Phogat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X