ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

17 ರಾಜ್ಯಗಳಿಗೆ 9,871 ಕೋಟಿ ರೂ. ಆದಾಯ ಕೊರತೆ ಅನುದಾನ ಬಿಡುಗಡೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 9: ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ಗುರುವಾರ ಕೋವಿಡ್ ನಂತರದ 9,871.00 ಕೋಟಿ ರೂ 6 ನೇ ಮಾಸಿಕ ಕಂತಿನ ಆದಾಯ ಕೊರತೆ ಅನುದಾನ[ಪಿ.ಡಿ.ಆರ್.ಡಿ]ವನ್ನು ಬಿಡುಗಡೆ ಮಾಡಿದೆ. ಈ ಬಿಡುಗಡೆ ಮೂಲಕ ರಾಜ್ಯಗಳಿಗೆ ಈ ತನಕ ಒಟ್ಟಾರೆ 59,226.00 ಕೋಟಿ ರೂಪಾಯಿ ಕೋವಿಡ್ ನಂತರ ಆದಾಯ ಕೊರತೆ ಅನುದಾನ [ಪಿ.ಡಿ.ಆರ್.ಡಿ]ವನ್ನು ಬಿಡುಗಡೆ ಮಾಡಿದಂತಾಗಿದೆ.

2021 - 22 ನೇ ಸಾಲಿನಲ್ಲಿ ರಾಜ್ಯವಾರು ಈ ತಿಂಗಳು ಮತ್ತು ಒಟ್ಟಾರೆ ಬಿಡುಗಡೆಯಾಗಿರುವ ಆದಾಯ ಕೊರತೆ ಅನುದಾನದ ಮಾಹಿತಿ ಅನುಬಂಧದಲ್ಲಿದೆ. ಸಂವಿಧಾನದ 275 ನೇ ವಿಧಿ ಅಡಿಯಲ್ಲಿ ಕೋವಿಡ್ ನಂತರದ ಆದಾಯ ಕೊರತೆ ಅನುದಾನವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಕೋವಿಡ್ ನಂತರದಲ್ಲಿ ರಾಜ್ಯಗಳಿಗೆ ಆದಾಯ ಲೆಕ್ಕದಲ್ಲಿ ಉಂಟಾಗಿರುವ ಕೊರತೆಯನ್ನು ನೀಗಿಸಲು ಹದಿನೈದನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ಮಾಸಿಕ ಕಂತುಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. 2021 - 22 ರ ಸಾಲಿನಲ್ಲಿ ಆಯೋಗ 17 ರಾಜ್ಯಗಳಿಗೆ ಅನುದಾನ ಬಿಡುಗಡೆಗೆ ಶಿಫಾರಸ್ಸು ಮಾಡಿದೆ.

ಅನುದಾನ ಪಡೆಯಲು ರಾಜ್ಯಗಳ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು ಆಯೋಗ ನಿರ್ಧರಿಸುತ್ತದೆ ಮತ್ತು 2021 - 22 ನೇ ಸಾಲಿನಲ್ಲಿ ಆದಾಯ ಮತ್ತು ವೆಚ್ಚದ ಮೌಲ್ಯಮಾಪನ ಮಾಡಿ ಇದರ ಅಂತರದ ಆಧಾರದ ಮೇಲೆ ನೆರವು ಬಿಡುಗಡೆ ಮಾಡಲಾಗಿದೆ.

ಹದಿನೈದನೇ ಹಣಕಾಸು ಆಯೋಗ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ಕೋವಿಡ್ ನಂತರದ ಆದಾಯ ಕೊರತೆ ಅನುದಾನವನ್ನು 2021-22 ಸಾಲಿಗೆ ಬಿಡುಗಡೆ ಮಾಡುವಂತೆ ಶಿಫಾರಸ್ಸು ಮಾಡಿದೆ. ಈ ಪೈಕಿ ಈವರೆಗೆ 59,226.00 ಕೋಟಿ ರೂ (50%) ಬಿಡುಗಡೆಯಾಗಿದೆ.

Revenue Deficit Grant of Rs. 9,871 crore released to 17 States

ಹದಿನೈದನೇ ಹಣಕಾಸು ಆಯೋಗ ಆದಾಯ ಕೊರತೆ ಅನುದಾನ [ಪಿ.ಡಿ.ಆರ್.ಡಿ] ಬಿಡುಗಡೆಗೆ ಶಿಫಾರಸ್ಸು ಮಾಡಿರುವ ರಾಜ್ಯಗಳೆಂದರೆ: ಆಂಧ್ರಪ್ರದೇಶ, ಅಸ್ಸಾಂ, ಹರ್ಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ್, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.

ಕೋವಿಡ್ ನಂತರದ ಆದಾಯ ಕೊರತೆ ಅನುದಾನದ ರಾಜ್ಯವಾರು ಮಾಹಿತಿ

ಕೋವಿಡ್ ನಂತರದ ಆದಾಯ ಕೊರತೆ ಅನುದಾನದ ರಾಜ್ಯವಾರು ಮಾಹಿತಿ
ಕ್ರಮ ಸಂಖ್ಯೆ ರಾಜ್ಯಗಳ ಹೆಸರು 2021ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಮೊತ್ತ (6ನೇ ಕಂತು)(ಕೋಟಿಗಳಲ್ಲಿ) 2021-22 ರಲ್ಲಿ ಬಿಡುಗಡೆಯಾದ ಒಟ್ಟು ಮೊತ್ತ (ಕೋಟಿಗಳಲ್ಲಿ)
1 ಆಂಧ್ರಪ್ರದೇಶ 2015 1438.08
2 ಅಸ್ಸಾಂ 531.33 3188.00
3 ಹರ್ಯಾಣ 11.00 66.00
4 ಹಿಮಾಚಲ ಪ್ರದೇಶ 854.08 5124.50
5 ಕರ್ನಾಟಕ 135.92 815.50
6 ಕೇರಳ 1657.58 9945.50
7 ಮಣಿಪುರ 210.33 1262.00
8 ಮೇಘಾಲಯ 106.58 639.50
9 ಮಿಜೋರಾಂ 149.17 895.00
10 ನಾಗಾಲ್ಯಾಂಡ್ 379.75 2278.50
11 ಪಂಜಾಬ್ 840.08 5040.50
12 ರಾಜಸ್ಥಾನ 823.17 4939.00
13 ಸಿಕ್ಕಿಂ 56.50 339.00
14 ತಮಿಳು ನಾಡು 183.67 1102.00
15 ತ್ರಿಪುರ 378.83 2273.00
16 ಉತ್ತರಾಖಂಡ 647.67 3886.00
17 ಪಶ್ಚಿಮ ಬಂಗಾಳ 1467.25 8803.50
--- ಒಟ್ಟು 9,871.00 59,226.00

ರಾಜ್ಯಗಳ ಆದಾಯ ಖಾತೆಗಳಲ್ಲಿನ ಅಂತರವನ್ನು ಪೂರೈಸಲು ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಮಾಸಿಕ ಕಂತುಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. 2021-22ರ ಅವಧಿಯಲ್ಲಿ 17 ರಾಜ್ಯಗಳಿಗೆ, ಅನುದಾನವನ್ನು ಪೋಸ್ಟ್ ಡಿವಲ್ಯೂಷನ್ ಕಂದಾಯ ಕೊರತೆ (ಪಿಡಿಆರ್‌ಡಿ) 6 ನೇ ಮಾಸಿಕ ಕಂತು ಖರ್ಚು ಮಾಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

15ನೇ ಹಣಕಾಸು ಆಯೋಗವು ರಾಜ್ಯದ ಆದಾಯದ ಮೌಲ್ಯಮಾಪನ ಮತ್ತು ಖರ್ಚಿನ ನಡುವಿನ ಅಂತರವನ್ನು ಆಧರಿಸಿ 17 ರಾಜ್ಯಗಳಿಗೆ ಪೋಸ್ಟ್ ಡಿವಲ್ಯೂಷನ್ ಬಿಡುಗಡೆ ಕೊರತೆ ಅನುದಾನವನ್ನು ಶಿಫಾರಸು ಮಾಡಿದೆ.

15 ನೇ ಹಣಕಾಸು ಆಯೋಗವು 2021-22ರ ಆರ್ಥಿಕ ವರ್ಷದಲ್ಲಿ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ನಂತರದ ವಿತರಣಾ ಆದಾಯ ಕೊರತೆ ಅನುದಾನವನ್ನು ಶಿಫಾರಸು ಮಾಡಿದೆ. ಅನುದಾನವನ್ನು 12 ಮಾಸಿಕ ಕಂತುಗಳಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತದೆ. (ಮಾಹಿತಿ ಕೃಪೆ:ಹಣಕಾಸು ಸಚಿವಾಲಯ)

English summary
The Department of Expenditure, Ministry of Finance on Thursday released the 6th monthly installment of Post Devolution Revenue Deficit (PDRD) Grant of Rs. 9,871.00 crore to the States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X