ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಿಕ್ಷೆ ಎತ್ತುತ್ತಿದ್ದ ಶಿಕ್ಷಕಿಯನ್ನು ವಿದ್ಯಾರ್ಥಿಗಳಿಗೆ ಒಪ್ಪಿಸಿದ ಫೇಸ್ ಬುಕ್!

|
Google Oneindia Kannada News

ತಂಪನೂರ್, ನವೆಂಬರ್ 14: ಅದು ಕೇರಳದ ತಂಪನೂರ್ ರೈಲ್ವೇ ನಿಲ್ದಾಣ. ಪ್ರತಿದಿನವೂ ಭಿಕ್ಷೆ ಬೇಡುತ್ತ ಕೂತಿರುತ್ತಿದ್ದ ಕೃಶಕಾಯದ ಮಹಿಳೆಯೊಬ್ಬರನ್ನು ಕಂಡು ಅದ್ಯಾಕೋ ಅನುಕಂಪ ಹುಟ್ಟಿ ಬಳಿಗೆ ಹೋದ ವಿದ್ಯಾ ಎಂಬ ಸರ್ಕಾರಿ ನೌಕರಳಿಗೆ ಅಚ್ಚರಿ ಕಾದಿತ್ತು. ಆ ವೃದ್ಧೆಯನ್ನು ಮಾತನಾಡಿಸಿದರೆ ಸುಶಿಕ್ಷಿತೆ ಎಂಬುದು ತಿಳಿಯಿತು.

ತಾಯಿಯನ್ನೇ ಭಿಕ್ಷಾಟನೆಗೆ ಬಿಟ್ಟ ಸುಪುತ್ರತಾಯಿಯನ್ನೇ ಭಿಕ್ಷಾಟನೆಗೆ ಬಿಟ್ಟ ಸುಪುತ್ರ

ಮತ್ತಷ್ಟು ಪ್ರಶ್ನೆ ಕೇಳಿದಾಗ ಆಕೆ ಗಣಿತದ ನಿವೃತ್ತ ಶಿಕ್ಷಕಿ ಎಂಬುದು ತಿಳಿದು ದಿಗ್ಭ್ರಮೆಯಾಯ್ತು. ವಿದ್ಯಾ ಕೊಟ್ಟ ಇಡ್ಲಿಯನ್ನು ಗಬಗಬನೆ ತಿನ್ನುತ್ತಿದ್ದ ಆಕೆಯನ್ನು ಕಂಡು ಕರುಳು ಕಿವುಚಿದಂತಾಯ್ತು. ಆಕೆಯ ಫೋಟೋ ಕ್ಲಿಕ್ಕಿಸಿ, ಅದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿ, ಆಕೆಯಿಂದ ಪಾಠ ಕಲಿತ ವಿದ್ಯಾರ್ಥಿಗಳ್ಯಾರಿಗಾದರೂ ಆಕೆಯ ಗುರುತುಹತ್ತಿ ಸಹಾಯ ಮಾಡಬಹುದು ಎಂದು ನಿರೀಕ್ಷಿಸುತ್ತ ಕುಳಿತರು.

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಜಗದಲ್ಲಿ ಇಂಥವ್ರೂ ಇರ್ತಾರೆ? ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಜಗದಲ್ಲಿ ಇಂಥವ್ರೂ ಇರ್ತಾರೆ?


ನಿರೀಕ್ಷೆ ಸುಳ್ಳಾಗಲಿಲ್ಲ. ಆಕೆಯ ಹಲವು ವಿದ್ಯಾರ್ಥಿಗಳಿಗೆ 'ಇವರು ತಮ್ಮ ವಸ್ಲಾ ಟೀಚರ್' ಎಂಬುದು ತಿಳಿಯಿತು. ತಮ್ಮ ಬದುಕಿಗೊಂದು ಹಾದಿ ತೋರಿದ ಗುರು ಈಗ ಇಂಥ ದಯನೀಯ ಸ್ಥಿತಿಯಲ್ಲಿರುವುದನ್ನು ಕಂಡು ಮರುಗಿದರು. ಅವರಿದ್ದ ಜಾಗಕ್ಕೆ ಬಂದು ತಮ್ಮ ಜೊತೆ ಬರುವಂತೆ ಕೇಳಿಕೊಂಡರು. ಆದರೆ ಶಿಕ್ಷಕಿಗೆ ಯಾರೊಂದಿಗೆ ಬರುವುದಕ್ಕೂ ಇಷ್ಟವಿಲ್ಲ. "ತನ್ನ ಪತಿ-ಮಗ ಅಲ್ಲದೆ ಬೇರೆ ಯಾರೊಂದಿಗೂ ನಾನು ಬರುವುದಿಲ್ಲ" ಎಂಬುದೊಂದೇ ವಸ್ಲಾ ಅವರ ಹಟ.

Retired Kerala Maths Teacher Found Begging At A Railway Station!

ಪತಿ ಮತ್ತು ಮಗ ಆಕೆಯನ್ನು ಮನೆಯಿಂದ ಹೊರಹಾಕಿದ್ದಾರೆಂಬ ಅನುಮಾನದ ಮೇರೆಗೆ ಪೊಲೀಸರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ. ವಸ್ಲಾ ಅವರ ತಂಗಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪತಿ ಮತ್ತು ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

English summary
Retired Kerala Maths Teacher Found Begging At A Railway Station. How She Was Identified By Her Students From A Facebook Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X