ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥ್ರೆಡ್ ಇಲ್ಲದೇ ಪ್ರಿಂಟ್: 1000 ರೂಪಾಯಿ ನೋಟಿನಲ್ಲಿ ಭಾರೀ ಎಡವಟ್ಟು!

|
Google Oneindia Kannada News

ನವದೆಹಲಿ, ಜ 22: ಕೆಲವು ದಿನಗಳ ಹಿಂದೆ ಸಾವಿರ ರೂಪಾಯಿ ಮುಖಬೆಲೆಯ ಕೋಟ್ಯಾಂತರ ರೂಪಾಯಿ ಮೌಲ್ಯದ ಖೋಟಾ ನೋಟುಗಳು ಭಾರತಕ್ಕೆ ಬಂದಿರುವುದರ ಬಗ್ಗೆ ಸುದ್ದಿಯಾಗಿತ್ತು. ಬ್ಯಾಂಕುಗಳು ಎಚ್ಚರಿಕೆಯನ್ನೂ ನೀಡಿದ್ದವು.

ಈಗ, ನೋಟ್ ಪ್ರಿಂಟಿಗೆ ಪೇಪರ್ ಒದಗಿಸುವ ಸರಕಾರೀ ಸ್ವಾಮ್ಯದ ಸಂಸ್ಥೆಯೇ ಎಡವಟ್ಟು ಮಾಡಿ, ಬ್ಯಾಂಕುಗಳಿಗೆ ಮತ್ತು ಸಾರ್ವಜನಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. (ಎರಡು ಕ್ರಮ ಸಂಖ್ಯೆಯ ಸಾವಿರ ರೂಪಾಯಿ ನೋಟನ್ನು ಸ್ವೀಕರಿಸದಿರಿ)

ಮಧ್ಯಪ್ರದೇಶದ ಹೊಶಿಂಗಾಬಾದ್ ನಲ್ಲಿರುವ 'ಸೆಕ್ಯೂರಿಟಿ ಪೇಪರ್ ಮಿಲ್' (SPMCIL, Security Printing and Minting Corporation of India Limited) ಮಾಡಿರುವ ಅಚಾತುರ್ಯದಿಂದಾಗಿ, ಸಾವಿರ ರೂಪಾಯಿ ನೋಟು ತೆಗೆದುಕೊಳ್ಳುವ ಮುನ್ನ ಸಾವಿರ ಬಾರಿ ಆಲೋಚಿಸುವಂತಾಗಿದೆ.[ಖೋಟಾ ನೋಟು ಪತ್ತೆ ಮಾಡುವುದು ಹೇಗೆ?]

RBI Asks Banks To Stop Rs 1,000 Notes Without Security Thread

ನೋಟ್ ಪ್ರಿಂಟಿಗಾಗಿ ಸೆಕ್ಯೂರಿಟಿ ಥ್ರೆಡ್ ಇಲ್ಲದ ಅಂದರೆ ನೋಟಿನಲ್ಲಿ ಬರುವ ಸಿಲ್ವರ್ ಥ್ರೆಡ್ ಇಲ್ಲದ ಪೇಪರನ್ನು ನಾಸಿಕ್ ನಲ್ಲಿರುವ ಠಂಕಶಾಲೆಗೆ ಸೆಕ್ಯೂರಿಟಿ ಪೇಪರ್ ಮಿಲ್ ಒದಗಿಸಿತ್ತು.

ಸಿಲ್ವರ್ ಥ್ರೆಡ್ ಇಲ್ಲದ ಕಾಗದದಲ್ಲೇ ನಾಸಿಕ್ ನಲ್ಲಿ ಸಾವಿರ ರೂಪಾಯಿ ನೋಟು ಅಚ್ಚಾಗಿ ಮತ್ತು ಆ ನೋಟುಗಳನ್ನು ಚಲಾವಣೆಗಾಗಿ ಆರ್ಬಿಐಗೆ ಕಳುಹಿಸಿ ಕೊಟ್ಟಿತ್ತು.[ಹೊಸ 1000, 500 ರು. ನೋಟು ಗುರುತು ಮಾಡೋದು ಹೇಗೆ?]

5ಎಜಿ ಮತ್ತು 3ಎಪಿ ಸಿರೀಸ್ ನಲ್ಲಿರುವ ನೋಟುಗಳು ರಿಸರ್ವ ಬ್ಯಾಂಕ್ ಮೂಲಕ ಇತರ ಬ್ಯಾಂಕುಗಳಿಗೆ ಅಲ್ಲಿಂದ ಗ್ರಾಹಕರ ಜೇಬಿಗೆ ಹೋಗಿದ್ದೂ ಆಗಿತ್ತು. ಇಷ್ಟಾದರೂ ತಪ್ಪನ್ನು ಗುರುತಿಸದ ರಿಸರ್ವ ಬ್ಯಾಂಕಿಗೆ ಗ್ರಾಹಕರೊಬ್ಬರು ನೀಡಿದ ದೂರಿನಿಂದ ಆಗಿರುವ ಲೋಪದೋಷದ ಅರಿವಾಗಿದೆ.

ತಕ್ಷಣ ಕಾರ್ಯಪ್ರವೃತ್ತರಾದ ರಿಸರ್ವ ಬ್ಯಾಂಕ್, ಈ ಸಂಬಂಧ ಎಲ್ಲಾ ಬ್ಯಾಂಕುಗಳಿಗೆ ಸುತ್ತೋಲೆ ಕಳುಹಿಸಿದೆ. ಸೆಕ್ಯೂರಿಟಿ ಥ್ರೆಡ್ ಇಲ್ಲದ ನೋಟುಗಳನ್ನು ಸ್ವೀಕರಿಸಬಾರದು ಮತ್ತು ಗ್ರಾಹಕರು ಒಂದು ವೇಳೆ ಇಂತಹ ನೋಟುಗಳನ್ನು ಹಿಂದಿರುಗುಸಿದರೆ ವಾಪಸ್ ತೆಗೆದುಕೊಂಡು, ಬದಲಾಯಿಸಿ ಕೊಡಬೇಕೆಂದು ತನ್ನ ಸುತ್ತೋಲೆಯಲ್ಲಿ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದೆ.

English summary
The RBI said it has received complaints about notes of Rs 1,000 denomination without the security thread being in circulation and has asked banks not to issue them in case these are found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X