ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್ News : ಎಟಿಎಂನಲ್ಲಿ ಇನ್ಮುಂದೆ 'ನೋ ಕ್ಯಾಶ್' ಬೋರ್ಡ್ ಹಾಕುವ ಹಾಗಿಲ್ಲ

|
Google Oneindia Kannada News

ಮುಂಬೈ, ಜೂನ್ 15: ವಿವಿಧ ಬ್ಯಾಂಕುಗಳ ಎಟಿಎಂಗಳು ಅಲ್ಲಲ್ಲಿ ಇದ್ದರೂ, ಅದರಲ್ಲೂ ಹಣ ಇರುವುದು ಖಾತ್ರಿ ಇರುವುದಿಲ್ಲ, ಅದರಲ್ಲೂ ವಾರಾಂತ್ಯ, ಸಾಲುಸಾಲು ರಜೆಯ ವೇಳೆ, ಇಂತಹ ಸಮಸ್ಯೆಗಳು ಕಾಮನ್. ಈಗ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಇದಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.

ಈಗಾಗಲೇ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ರಿಸರ್ವ್ ಬ್ಯಾಂಕ್, ಈ ಸಂಬಂಧ ಕಾನೂನು ರೂಪಿಸುವ ಚಿಂತನೆ ನಡೆಸುತ್ತಿದೆ. ಮೂರು ಗಂಟೆಗೂ ಹೆಚ್ಚು ಕಾಲ ಎಟಿಎಂನಲ್ಲಿ ದುಡ್ಡು ಖಾಲಿಯಾಗಿ, ಹಣ ತುಂಬದೇ ಇದ್ದರೆ, ಸಂಬಂಧ ಪಟ್ಟ ಬ್ಯಾಂಕುಗಳಿಗೆ ದಂಡ ವಿಧಿಸಲು ಆರ್ಬಿಐ ಮುಂದಾಗಿದೆ.

ಬ್ಯಾಂಕ್ ಎಟಿಎಂಗಳ ಬಳಿಯ ಭದ್ರತಾ ಸಿಬ್ಬಂದಿಯೇ ನಾಪತ್ತೆ; ಬ್ಯಾಂಕ್ ಗಳ ಕಾಸ್ಟ್ ಕಟ್ಟಿಂಗ್ಬ್ಯಾಂಕ್ ಎಟಿಎಂಗಳ ಬಳಿಯ ಭದ್ರತಾ ಸಿಬ್ಬಂದಿಯೇ ನಾಪತ್ತೆ; ಬ್ಯಾಂಕ್ ಗಳ ಕಾಸ್ಟ್ ಕಟ್ಟಿಂಗ್

ಎಟಿಎಂಗಳಿಗೆ ಲೋಡ್ ಮಾಡಿರುವ ಹಣವೆಷ್ಟು, ಬಳಕೆಯಾದ ಹಣ, ಉಳಿದಿರುವ ಹಣವೆಷ್ಟು ಎನ್ನುವುದು ಬ್ಯಾಂಕುಗಳಿಗೆ ಆನ್ಲೈನ್ ನಲ್ಲೇ ಮಾಹಿತಿ ಲಭ್ಯವಾಗಿರುವುದರಿಂದ, ಹಣ ಖಾಲಿಯಾದ ಮಾಹಿತಿ ಕೂಡಲೇ ಲಭ್ಯವಾಗಿರುತ್ತದೆ.

Reserve bank of India directed all banks to ensure sufficient money in their ATMs

ಆದರೂ, ಬ್ಯಾಂಕುಗಳು ಕೂಡಲೇ ಎಟಿಎಂನಲ್ಲಿ ಹಣ ತುಂಬಿಸುವ ಗೋಜಿಗೆ ಹೋಗುವುದಿಲ್ಲ. ಗ್ರಾಮೀಣ ಭಾಗದ ಜನತೆ ಇದರಿಂದ ತುಂಬಾ ತೊಂದರೆ ಎದುರಿಸಬೇಕಾಗುತ್ತದೆ. ಹಾಗಾಗಿ, ಮೂರು ಗಂಟೆಗೂ ಹೆಚ್ಚುಕಾಲ ಹಣ ತುಂಬದೇ ಖಾಲಿ ಬಿಡಬಾರದು ಎನ್ನುವ ಸೂಚನೆಯನ್ನು ರಿಸರ್ವ್ ಬ್ಯಾಂಕ್ ಹೊರಡಿಸಿದೆ.

ಗ್ರಾಹಕರು ತಮ್ಮತಮ್ಮ ಬ್ಯಾಂಕಿನ ಎಟಿಎಂಗಳಲ್ಲೇ ವ್ಯವಹರಿಸಲು ಬಯಸುತ್ತಾರೆ, ಆದರೆ ಎಟಿಎಂನಲ್ಲಿ ಹಣವಿಲ್ಲದಿದ್ದಾಗ, ಇನ್ನೊಂದು ಬ್ಯಾಂಕಿನ ಎಟಿಎಂಗೆ ಹೋಗುತ್ತಾರೆ. ವಿತ್ ಡ್ರಾ ಮಿತಿ ಮೀರಿದರೆ, ಅದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ.

RTGS ಹಾಗೂ NEFT ಶುಲ್ಕ ತೆಗೆಯಲು ರಿಸರ್ವ್ ಬ್ಯಾಂಕ್ ತೀರ್ಮಾನ RTGS ಹಾಗೂ NEFT ಶುಲ್ಕ ತೆಗೆಯಲು ರಿಸರ್ವ್ ಬ್ಯಾಂಕ್ ತೀರ್ಮಾನ

ಈ ರೀತಿಯ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದರೆ ಎಟಿಎಂನಲ್ಲಿ ಹಣದ ಕೊರತೆ ಬರದಂತೇ ನೋಡಿಕೊಳ್ಳುವುದು. ಹಾಗಾಗಿ, ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ, ಎಲ್ಲಾ ಬ್ಯಾಂಕುಗಳಿಗೆ ರಿಸರ್ವ ಬ್ಯಾಂಕ್, ಸುತ್ತೋಲೆ ಹೊರಡಿಸಿದೆ.

English summary
The Reserve Bank of India (RBI) directed all banks to ensure sufficient money in their ATMs, failing which warned to impose fine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X