• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯಾನ್ಸರ್ ಗುಣಪಡಿಸಲು ಫಾರ್ಮ್ಯುಲಾ ಕಂಡುಹಿಡಿದ ಸಂಶೋಧಕಿ?

By Prasad
|

ರಾಯಪುರ, ಜುಲೈ 14 : ಛತ್ತೀಸ್ ಘಡ ರಾಜ್ಯದ ರಾಯಪುರದ ಸಂಶೋಧಕಿ ಮಮತಾ ತ್ರಿಪಾಠಿ ಎಂಬುವವರು ಕ್ಯಾನ್ಸರ್ ಗುಣಪಡಿಸಲು ಯಶಸ್ವಿ ಫಾರ್ಮ್ಯುಲಾ ಕಂಡುಹಿಡಿದಿರುವುದಾಗಿ ಹೇಳಿದ್ದಾರೆ.

"ಈ ಫಾರ್ಮ್ಯೂಲಾ ಬಳಸಿ ಶೇ.70ರಿಂದ ಶೇ.80ರಷ್ಟು ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಬಹುದು. ನಾವು ಇದನ್ನು ಸಾಬೀತುಪಡಿಸಲು ಸಾಕಷ್ಟು ಪರೀಕ್ಷೆ ನಡೆಸಿದ್ದು ಯಶಸ್ವಿಯಾಗಿದ್ದೇವೆ. ನಮ್ಮ ಸಂಶೋಧನೆ ನಾಲ್ಕೂವರೆಯಿಂದ 5 ವರ್ಷಗಳವರೆಗೆ ತೆಗೆದುಕೊಂಡಿದೆ" ಎಂದು ಅವರು ಹೇಳಿದ್ದಾರೆ.

ಇದು ಇನ್ನೂ ಆರಂಭಿಕ ಹಂತದಲ್ಲಿ ಇರುವುದರಿಂದ ಕೆಮೊಥೆರಪಿಗೆ ಪರ್ಯಾಯವೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ, ನಮ್ಮ ಸಂಶೋಧನೆ ಸರಿಯಾದ ದಾರಿಯಲ್ಲಿ ಸಾಗಿದರೆ ಕ್ಯಾನ್ಸರ್ ರೋಗಿಗಳಿಗೆ ವರದಾನವಾಗಲಿದೆ. ಅಲ್ಲದೆ, ಕೆಮೊಥೆರಪಿಯಷ್ಟು ನೋವು ಈ ಚಿಕಿತ್ಸೆಯಲ್ಲಿ ಇರುವುದಿಲ್ಲ ಎಂದು ಮಮತಾ ತ್ರಿಪಾಠಿ ತಿಳಿಸಿದ್ದಾರೆ.

Researcher from Raipur claims to have found formula to cure cancer

ನಮ್ಮ ಮುಂದಿನ ಹಂತ, ಇಲಿಯಂಥ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಿದ್ದೇವೆ ಎಂದು ಹೇಳಿರುವ ಅವರ ಸಂಶೋಧನೆಗೆ ಸಾಕಷ್ಟು ಪ್ರಶಂಸೆಗಳು ಕೇಳಿಬರುತ್ತಿವೆ. ಆದರೆ, ನೀವು ಡ್ರಗ್ ಮಾಫಿಯಾದಿಂದ ದೂರವಿರಿ, ಫಾರ್ಮಾ ಕಂಪನಿಗಳ ಬಗ್ಗೆ ಎಚ್ಚರದಿಂದಿರಿ, ನಿಮ್ಮ ಪ್ರಾಣಕ್ಕೆ ಅಪಾಯವಾದರೂ ಆಗಬಹುದು ಎಂದು ಟ್ವಿಟ್ಟರಲ್ಲಿ ಜನರು ಅವರು ಉಪದೇಶ ನೀಡುತ್ತಿದ್ದಾರೆ.

ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೆ ಭಾರಿ ದಂಡ!

ಒಬ್ಬ ಟ್ವಿಟ್ಟಿಗರು, ಕ್ಯಾನ್ಸರ್ ಮಾತ್ರವಲ್ಲ ಇನ್ನೂ ಹಲವಾರು ರೋಗಗಳು ಗುಣವಾಗಲು ಚಿಕಿತ್ಸೆ ಇದ್ದೇ ಇದೆ ಮತ್ತು ಹಿಂದೆಯೇ ಕಂಡುಹಿಡಿಯಲಾಗಿದೆ. ಆದರೆ, ಇದನ್ನು ಪ್ರಕಟಿಸಿದರೆ ವೈದ್ಯರು ಮತ್ತು ಫಾರ್ಮಾ ಕಂಪನಿಗಳ ಆದಾಯವೇ ನಿಂತು ಹೋಗುತ್ತದೆ. ಅಲ್ಲದೆ, ಹಂದಿ ಜ್ವರ, ಡೆಂಗ್ಯೂ ಮುಂತಾದವನ್ನೆಲ್ಲ ಸೃಷ್ಟಿಸಲಾಗಿದೆ. ರೋಗಿಗಳಿಗೆ ಈ ಬಗ್ಗೆ ಜ್ಞಾನ ಕಡಿಮೆ ಇರುವುದರಿಂದ ಫಾರ್ಮಾ ಕಂಪನಿಗಳು ಮತ್ತು ವೈದ್ಯರು ಹಣದ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ನಟಿ ಸೊನಾಲಿ ಬೇಂದ್ರೆಗೆ ಕ್ಯಾನ್ಸರ್: ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ

ಈ ಬಗ್ಗೆ ಕೂಡಲೆ ಗಮನ ಹರಿಸಿ. ಈ ಸಂಶೋಧನೆ ನಿಜವೇ ಆದರೆ, ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಇದು ಅತ್ಯಂತ ಮಹತ್ತರ ಸಂಶೋಧನೆಯಾಗಲಿದೆ. ಸಂಶೋಧಕರಿಗೆ ಅವರ ಅಧ್ಯಯನಕ್ಕಾಗಿ ಕೂಡಲೆ ಸರಕಾರ ಸಹಾಯಹಸ್ತ ಚಾಚಬೇಕು ಎಂದು ಸತೀಶ್ ಖಟಕ್ ಎಂಬುವವರು ಕೇಂದ್ರ ಆರೋಗ್ಯ ಮತ್ತು ಕೌಟುಂಬಿಕ ಕಲ್ಯಾಣ ಸಚಿವ ಜೆಪಿ ನಡ್ಡಾ ಮತ್ತು ಛತ್ತೀಸಘಡದ ಮುಖ್ಯಮಂತ್ರಿ ಡಾ. ರಮಣ ಸಿಂಗ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಆದರೆ, ಇನ್ನೂ ಇಲಿಯ ಮೇಲೂ ಪರೀಕ್ಷೆ ಮಾಡಿರದಿದ್ದರೆ ಇದು ಯಶಸ್ವಿ ಸಂಶೋಧನೆ ಹೇಗಾಗುತ್ತದೆ ಎಂದು ಕೆಲವೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬರೀ ಶೇ.70ರಷ್ಟು ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಿದರೆ ಅದನ್ನು ಕ್ಯಾನ್ಸರ್ ಗುಣಪಡಿಸಿದಂತೆ ಆಗುವುದಿಲ್ಲ. ಶೇ.100ರಷ್ಟು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವಂತಾಗಬೇಕು. ಇಲ್ಲದಿದ್ದರೆ ಇಡೀ ಸಂಶೋಧನೆಯೇ ನಿಷ್ಪ್ರಯೋಜಕವಾಗುತ್ತದೆ. ಉಳಿದುಕೊಂಡ ಶೇ.30ರಷ್ಟು ಕೋಶಗಳು ಮತ್ತೆ ಬೆಳೆಯುತ್ತವೆ ಎಂದು ವಿಜಯ್ ಬಂಗ ಎಂಬುವವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
Mamata Tripathi, a researcher from Raipur claims to have found a formula to cure cancer, says, 'this can kill 70-80% of cancer cells. She says it is still not an alternative to chemotherapy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X