ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಪ್ರಸಾರದಲ್ಲೇ ಲಾಲೂ ವಿರುದ್ದ ಅರ್ನಬ್ ಸರ್ಜಿಕಲ್ ಸ್ಟ್ರೈಕ್

ತನ್ನ ಮೊದಲ TV ಶೋನಲ್ಲೇ ಲಾಲೂ ಮತ್ತು ಕ್ರಿಮಿನಲ್ ಹಿನ್ನಲೆಯ ರಾಜಕಾರಣಿ ಮೊಹಮ್ಮದ್ ಶಹಾಬುದ್ದೀನ್ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಟೇಪ್ ಅನ್ನು ರಿಪಬ್ಲಿಕ್ ಟಿವಿ ಪ್ರಸಾರ ಮಾಡಿದೆ.

|
Google Oneindia Kannada News

'ನೇಷನ್ ವಾಂಟ್ಸ್ ಟು ನೋ' ಎನ್ನುವ ಮೂಲಕ ಮನೆಮಾತಾಗಿದ್ದ ಅರ್ನಬ್ ಗೋಸ್ವಾಮಿ ನೇತೃತ್ವದ, ಬಹುನಿರೀಕ್ಷಿತ ರಿಪಬ್ಲಿಕ್ ಟಿವಿ ಶನಿವಾರ (ಮೇ 6) ಲೋಕಾರ್ಪಣೆಗೊಂಡಿದೆ.

ತನ್ನ ಮೊದಲ ದಿನದ ಶೋನಲ್ಲೇ ಆರ್ಜೆಡಿ ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಮತ್ತು ಕ್ರಿಮಿನಲ್ ಹಿನ್ನಲೆಯ ರಾಜಕಾರಣಿ ಮೊಹಮ್ಮದ್ ಶಹಾಬುದ್ದೀನ್ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಟೇಪ್ ಅನ್ನು ರಿಪಬ್ಲಿಕ್ ಟಿವಿ ಪ್ರಸಾರ ಮಾಡಿದೆ. (ಅರ್ನಬ್ ಈಸ್ ಬ್ಯಾಕ್, ಶನಿವಾರ ರಿಪಬ್ಲಿಕ್ ಟಿವಿಗೆ ಚಾಲನೆ)

ಟೇಪ್ ನಲ್ಲಿ ಶಹಾಬುದ್ದೀನ್, ಲಾಲೂ ಪ್ರಸಾದ್ ಯಾದವ್ ಅವರಿಗೆ ನೀಡುತ್ತಿರುವ ಆದೇಶಗಳು ಪ್ರಸಾರವಾಗಿವೆ. ತನಗೆ ಬೇಕಾದ ಅಧಿಕಾರಿಗಳನ್ನೇ ಜಿಲ್ಲಾ ಪೊಲೀಸ್ ಮುಖ್ಯಸ್ಥರನ್ನಾಗಿ ನೇಮಿಸಬೇಕೆಂದು ಮತ್ತು ಗಲಭೆಗೆ ಸಂಬಂಧಿಸಿದಂತೆ ಶಹಾಬುದ್ದೀನ್, ಲಾಲೂಗೆ ಆದೇಶ ನೀಡುತ್ತಿರುವುದು ಟೇಪ್ ನಲ್ಲಿದೆ ಎನ್ನಲಾಗುತ್ತಿದೆ.

ಟೇಪ್ ನ ಸತ್ಯಾಸತ್ಯತೆಯ ಬಗ್ಗೆ ಲಾಲೂ ಪ್ರಸಾದ್ ಯಾದವ್ ಆಗಲಿ ಅಥವಾ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಇನ್ನೂ ಪ್ರತಿಕ್ರಿಯೆ ನೀಡಬೇಕಷ್ಟೇ. ಆದರೆ, ಈ ಟಿವಿ ಪ್ರಸಾರವನ್ನು ತಕ್ಷಣವೇ ನಿಲ್ಲಿಸಬೇಕೆಂದು ಬಿಹಾರ ಸಿಎಂ ಕಚೇರಿಯಿಂದ ದೂರವಾಣಿ ಕರೆಗಳು ಬರುತ್ತಲೇ ಇವೆ ಎಂದು ರಿಪಬ್ಲಿಕ್ ಟಿವಿ ಹೇಳಿಕೊಂಡಿದೆ.

ಈ ಟೇಪ್ ಬಗ್ಗೆ ಬಿಜೆಪಿ, ಲೋಕ ಜನಶಕ್ತಿ ಪಕ್ಷ, ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಅರ್ನಬ್ ಗೋಸ್ವಾಮಿಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಮುಂದೆ ಓದಿ..

 ರಿಪಬ್ಲಿಕ್ ಟಿವಿ ಲೋಕಾರ್ಪಣೆ

ರಿಪಬ್ಲಿಕ್ ಟಿವಿ ಲೋಕಾರ್ಪಣೆ

ಮುಂಬೈ ಮತ್ತು ಬೆಂಗಳೂರಿನಲ್ಲಿ ಕಚೇರಿಯನ್ನು ಹೊಂದಿರುವ, ಎಆರ್ಜಿ ಔಟ್ಲೈರ್ ಒಡೆತನದ ರಿಪಬ್ಲಿಕ್ ಟಿವಿ ಶನಿವಾರ ಲೋಕಾರ್ಪಣೆಗೊಂಡಿದೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೂಡಾ ಈ ವಾಹಿನಿಯ ಪಾಲುದಾರರಲ್ಲೊಬ್ಬರು. ಅರ್ನಬ್ ಗೋಸ್ವಾಮಿ ವಾಹಿನಿಯ ಎಡಿಟರ್ - ಇನ್ -ಚೀಫ್.

 ಕ್ರಿಮಿನಲ್ ಹಿನ್ನಲೆಯ ಮೊಹಮ್ಮದ್ ಶಹಾಬುದ್ದೀನ್

ಕ್ರಿಮಿನಲ್ ಹಿನ್ನಲೆಯ ಮೊಹಮ್ಮದ್ ಶಹಾಬುದ್ದೀನ್

ದೆಹಲಿಯ ತಿಹಾರ್ ಜೈಲಿನಲ್ಲಿರುವ ಕ್ರಿಮಿನಲ್ ಹಿನ್ನಲೆಯ ರಾಜಕಾರಣಿ ಮೊಹಮ್ಮದ್ ಶಹಾಬುದ್ದೀನ್ ಮೇಲೆ 45 ಕ್ರಿಮಿನಲ್ ಕೇಸುಗಳು ದಾಖಲಾಗಿವೆ. ಇದರಲ್ಲಿ 1989ರಲ್ಲಿ ಜಮಶೆಡ್ಪುರದಲ್ಲಿ ನಡೆದ ತ್ರಿವಳಿ ಕೊಲೆ ಕೇಸೂ ಒಂದು ಈತ ಜೈಲಿನಿಂದ ಲಾಲೂಗೆ ಆದೇಶ ನೀಡುತ್ತಿರುವ ಟೇಪ್ ಅನ್ನು ರಿಪಬ್ಲಿಕ್ ಟಿವಿ ಇಂದು ಬಿಡುಗಡೆಗೊಳಿಸಿದೆ.

ಅರ್ನಬ್, ಲಾಲೂ ಜಾತಕ ಬಹಿರಂಗಗೊಳಿಸಿದ್ದಾರೆ

ಅರ್ನಬ್ ಗೋಸ್ವಾಮಿ ಲಾಲೂ ಜಾತಕ ಬಹಿರಂಗಗೊಳಿಸಿದ್ದಾರೆ. ನಿತೀಶ್ ಕಾನೂನು ಕ್ರಮ ತೆಗೆದುಕೊಳ್ಳುವರೇ? ಬಿಹಾರದ ಬಿಜೆಪಿ ಮುಖಂಡ ಸುಶೀಲ್ ಕುಮಾರ್

ಲಾಲೂ ಪರವಾಗಿ ಮಾತನಾಡಲು ಬಂದವರು ಓಡಿಹೋದರು

ಅರ್ಜೆಡಿ ಶಾಸಕ ಲಾಲೂ ಪರವಾಗಿ ಮಾತನಾಡಲು ಬಂದರು, ಅರ್ನಬ್ ಕೇಳಿದ ಮೊದಲ ಪ್ರಶ್ನೆಗೇ ಓಡಿ ಹೋದರು.

ಲಾಲೂ ಟೇಪ್ ಮೂಲಕ್ ಅರ್ನಬ್ ಭರ್ಜರಿ ಎಂಟ್ರಿ

ಲಾಲೂ ಟೇಪ್ ಮೂಲಕ ಪತ್ರಿಕೋದ್ಯಮಕ್ಕೆ ಅರ್ನಬ್ ಎಂಟ್ರಿ ಕೊಟ್ಟಿದ್ದಾರೆ.

ನಿತೀಶ್ ಕುಮಾರ್ ಆರ್ಜೆಡಿ ಬೆಂಬಲದಿಂದ ಹೊರಬರಲಿ

ನೇಷನ್ ಈಸ್ ಹ್ಯಾಪ್ಪಿ ನೌ, ನಿತೀಶ್ ಕುಮಾರ್ ಆರ್ಜೆಡಿ ಬೆಂಬಲದಿಂದ ಹೊರಗೆ ಬರಬೇಕು.

ಬಲಪಂಥೀಯ ಸಂಘಟನೆಗಳು

ಲಾಲೂ ಟೇಪ್ ನಂತರ ಬಲಪಂಥೀಯ ಸಂಘಟನೆಗಳು ಅರ್ನಬ್ ಅವರನ್ನು ಬೆಂಬಲಿಸಲಿದೆ.

English summary
On the very first day of going on air, the Republic TV allegedly showed a conversation between RJD chief Lalu Prasad and criminal turned politician Mohammed Shahabuddin on a tape.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X