ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ ಪರೇಡ್ 2021, ಪ್ರಮುಖ ಬದಲಾವಣೆಗಳೇನು?

|
Google Oneindia Kannada News

ನವದೆಹಲಿ, ಜನವರಿ 21:ಈ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾರಿ ಬದಲಾವಣೆಗಳಿವೆ.

ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಹಲವು ಬದಲಾವಣೆಗಳನ್ನನು ತರಲಾಗಿದ್ದು, ಈ ಕುರಿತು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್ ಕೆಂಪುಕೋಟೆಯ ಆವರಣದಲ್ಲಿ ನಡೆಯುತ್ತಿಲ್ಲ. ಪರೇಡ್ ವಿಜಯ್ ಚೌಕದಿಂದ ಆರಂಭಗೊಂಡು ನ್ಯಾಷನಲ್‌ ಸ್ಟೇಡಿಯಂನಲ್ಲಿ ಅಂತ್ಯಗೊಳ್ಳಳಿದೆ.

Republic Day Parade 2021 To See Major Changes Over COVID

ಈ ಮೊದಲು ಪೆರೇಡ್ 8.2 ಕಿ.ಮೀ ನಡೆಯುತ್ತಿತ್ತು, ಈಗ ಅದನ್ನು 3.3 ಕಿ.ಮೀಗೆ ಇಳಿಕೆ ಮಾಡಲಾಗಿದೆ.ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತದೆ. ಪ್ರತಿ ಕಾಂಟಿಂಜೆಂಟ್‌ನಲ್ಲಿ 104 ಮಂದಿ ಸದಸ್ಯರು ಇರುತ್ತಿದ್ದರು, ಅದನ್ನು 96ಕ್ಕೆ ಇಳಿಸಲಾಗಿದೆ.

ಸಾಮಾನ್ಯವಾಗಿ 12/12 ಸಾಲುಗಳು ಇರುತ್ತಿತ್ತು ಅದನ್ನು 8ಕ್ಕೆ ಇಳಿಸಲಾಗಿದೆ. ಪೆರೇಡ್‌ನಲ್ಲಿ ಭಾಗವಹಿಸುವವರೆಲ್ಲರೂ ಮಾಸ್ಕ್ ಧರಿಸಲಿದ್ದಾರೆ.15 ವರ್ಷದೊಳಗಿನ ಮಕ್ಕಳಿಗೆ ಅನುಮತಿ ಇಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಕಡಿತಗೊಳಿಸಲಾಗಿದೆ.

ಅತಿಥಿಗಳು ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕುಳಿತುಕೊಳ್ಳಬೇಕಿದೆ. ದೆಹಲಿಗೆ ಗಣರಾಜ್ಯೋತ್ಸವ ಪರೇಡ್‌ಗೆಂದು ತೆರಳಿದ್ದ 150 ಮಂದಿ ಸೈನಿಕರಿಗೆ ಕೊರೊನಾ ಪಾಸಿಟಿವ್ ಬಂದಿತ್ತು.ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

English summary
The Republic Day Parade 2021 will witness major changes due to curb the spread of Covid19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X