ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

71st Republic Day Live Updates: ಕರ್ನಾಟಕದಿಂದ ಅನುಭವ ಮಂಟಪ ಸ್ತಬ್ಧಚಿತ್ರ ಪ್ರದರ್ಶನ

|
Google Oneindia Kannada News

ನವದೆಹಲಿ, ಜನವರಿ 26: ದೇಶದೆಲ್ಲೆಡೆ ಇಂದು ಗಣತಂತ್ರದಿನದ ಸಂಭ್ರಮ ಮನೆ ಮಾಡಿದೆ. ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆಯುವ ಪಥ ಸಂಚಲನ, ಸೇನೆಗಳ ಶಕ್ತಿ ಪ್ರದರ್ಶನದ ಝಲಕ್ ನಿಮಗಾಗಿ ಇಲ್ಲಿದೆ..

ದೆಹಲಿಯಲ್ಲಿ ತೆರೆದುಕೊಳ್ಳಲಿದೆ ಬಸವಣ್ಣನ ಅನುಭವ ಮಂಟಪದೆಹಲಿಯಲ್ಲಿ ತೆರೆದುಕೊಳ್ಳಲಿದೆ ಬಸವಣ್ಣನ ಅನುಭವ ಮಂಟಪ

ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳು ವಿಜಯ ಚೌಕ್ ನಿಂದ ರಾಜಪಥದ ಮೂಲಕ ಸಾಗಿ ತಿಲಕ್ ಮಾರ್ಗ್, ಭದೂರ್ ಶಾ ಜಾಫರ್ ಮಾರ್ಗ, ನೇತಾಜಿ ಮಾರ್ಗದ ತನಕ ಮೆರವಣಿಗೆ ಸಾಗಲಿದೆ. ಭಾರತೀಯ ನೌಕಾಸೇನೆ, ವಾಯುಸೇನೆ ಮತ್ತು ಭೂ ಸೇನೆಯ ಪ್ರಾಮುಖ್ಯ ತೋರುವ ಪ್ರಾತ್ಯಕ್ಷಿಕೆಗಳ ಅನಾವರಣವಾಗಲಿದೆ.

Republic Day Live Updates in Kannada

ಗಣರಾಜ್ಯೋತ್ಸವಕ್ಕೆ ಹಾಸನದ ಬುಡಕಟ್ಟು ದಂಪತಿಗಳು ಗಣರಾಜ್ಯೋತ್ಸವಕ್ಕೆ ಹಾಸನದ ಬುಡಕಟ್ಟು ದಂಪತಿಗಳು

ಭಾರತವು ಪ್ರಜಾಪ್ರಭುತ್ವದ ದೇಶವಾಗಿದ್ದು, ಇಲ್ಲಿನ ಸಂವಿಧಾನವು ಪ್ರಜೆಗಳಿಗೆ ಸಾಕಷ್ಟು ಮೂಲಭೂತ ಹಕ್ಕುಗಳನ್ನು ನೀಡಿದೆ. ಇದರ ಜೊತೆಗೆ ಸಂವಿಧಾನದ ವ್ಯಾಪ್ತಿಯಲ್ಲಿ ಪ್ರಜೆಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಿದೆ. ಸ್ವಾತಂತ್ರ್ಯ, ಸಮಾನತೆ, ಪ್ರಜಾಸತ್ತಾತ್ಮಕ ನ್ಯಾಯ ಹಾಗೂ ಸಹೋದರತ್ವದ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಭಾಷಣದಲ್ಲಿ ಹೇಳಿದರು. ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭ ಹಾರೈಸಿದರು.

Newest FirstOldest First
11:24 AM, 26 Jan

5 ಅಪಾಚೆ ವಿಮಾನಗಳ ಹಾರಾಟ

ಗ್ರೂಪ್ ಕ್ಯಾಪ್ಟನ್ ಮನ್ನಾರಥ್ ಶೈಲು ಅವರ ನೇತೃತ್ವದಲ್ಲಿ 5 ಅಪಾಚೆ ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದೆ.
11:16 AM, 26 Jan

49 ಮಂದಿ ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ: ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿರುವ 18 ಬಾಲಕಿಯರು, 31 ಬಾಲಕರು ಸೇರಿ ಒಟ್ಟು 49 ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಕ್ರೀಡೆ, ಸಾಮಾಜಿಕ ಸೇವೆ, ಸಾಂಸ್ಕೃತಿಕ, ಸಂಗೀತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.
11:11 AM, 26 Jan

ಮಾರಾ ರಂಗೀಲೋ ರಾಜಸ್ಥಾನ್ ನೃತ್ಯ

ದೆಹಲಿಯ ಸರ್ವೋದಯ ಶಾಲಾ ವಿದ್ಯಾರ್ಥಿಗಳಿಂದ ಮಾರಾ ರಂಗೀಲೋ ರಾಜಸ್ಥಾನ್ ನೃತ್ಯ
11:05 AM, 26 Jan

ಮರಳಿ ಹಳ್ಳಿಗೆ

ಜಮ್ಮು ಕಾಶ್ಮೀರದಿಂದ 'ಮರಳಿ ಹಳ್ಳಿಗೆ' ಎನ್ನುವ ಸಂದೇಶವನ್ನು ಸಾರುವ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಯಿತು.
11:04 AM, 26 Jan

ಸಿಪಿಡಬ್ಲ್ಯೂಡಿ ಇಲಾಖೆ

ಸಿಪಿಡಬ್ಲ್ಯೂಡಿ ಇಲಾಖೆಯು ಸ್ವಾಮಿ ವಿವೇಕಾನಂದ ಸ್ಮರಣಾರ್ಥ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಶಿಖರ, ಸಾಂಚಿ ಸ್ತೂಪವನ್ನು ಪ್ರದರ್ಶಿಸಲಾಯಿತು.
10:56 AM, 26 Jan

ಎನ್‌ಡಿಆರ್‌ಎಫ್ ಸ್ತಬ್ಧಚಿತ್ರಗಳು

ಎನ್‌ಡಿಆರ್‌ಎಫ್ ಮಾನವೀಯ ಸಹಾಯತೆ, ಸೇವೆಯಲ್ಲಿ ಯಾವಾಗಲು ಮುಂದಿರುವ ಎನ್‌ಡಿಆರ್‌ಎಫ್ ತಂಡದ ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳುತ್ತಿದೆ.
10:53 AM, 26 Jan

ಗುರುನಾನಕ್ 550ನೇ ಜಯಂತಿ

ಪಂಜಾಬ್‌ನಿಂದ 550 ಶ್ರೀ ಗುರುನಾನಕ್ ಅವರ ಜಯಂತಿಗೆ ಸಂಬಂಧಿಸಿದ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
Advertisement
10:51 AM, 26 Jan

ಕರ್ನಾಟಕದಿಂದ ಅನುಭವ ಮಂಟಪ ಸ್ತಬ್ಧಚಿತ್ರ ಪ್ರದರ್ಶನ

ಕರ್ನಾಟಕದಿಂದ ಕಾಯಕವೇ ಕೈಲಾಸ ಬಸವಣ್ಣನವರ ಅನುಭವ ಮಂಟಪವನ್ನು ಸ್ತಪ್ಬಧಚಿತ್ರವನ್ನಾಗಿ ಪ್ರದರ್ಶಿಸಲಾಯಿತು. ಅನುಭವ ಮಂಟಪ ಪ್ರದರ್ಶನ.
10:50 AM, 26 Jan

ಉತ್ತರ ಪ್ರದೇಶ ಧಾರ್ಮಿಕ ಪರ್ಯಟನ

ಉತ್ತರ ಪ್ರದೇಶ ಧಾರ್ಮಿಕ ಪರ್ಯಟನವನ್ನು ಕಥಕ್ ನೃತ್ಯವನ್ನು ಮಾಡುತ್ತಾ ಸ್ತಬ್ಧಚಿತ್ರ ಮುಂದೆ ಸಾಗುತ್ತಿದೆ.
10:49 AM, 26 Jan

ಆಂಧ್ರಪ್ರದೇಶ ಸ್ತಬ್ಧಚಿತ್ರಗಳ ಪ್ರದರ್ಶನ

ಆಂಧ್ರಪ್ರದೇಶ ಸ್ತಬ್ಧಚಿತ್ರಗಳ ಪ್ರದರ್ಶನ: ಭ್ರಹ್ಮೋತ್ಸವ ಫನಿಹಾರಿ ನೃತ್ಯ ಪ್ರದರ್ಶಿಸಲಾಗುತ್ತಿದೆ.
10:47 AM, 26 Jan

ಮೇಘಾಲಯ ಸ್ತಬ್ಧಚಿತ್ರಗಳ ಪ್ರದರ್ಶನ

ಪ್ರಾಕೃತಿಕ ಸೌಂಧರ್ಯದಿಂದ ಭಾರತದ ಸ್ಕಾಟ್‌ಲೆಂಡ್‌ ಎಂದೇ ಪ್ರಸಿದ್ಧವಾಗಿರುವ ಮೇಘಾಲಯದ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಪ್ರಕೃತಿ ಸೌಂದರ್ಯವನ್ನು ಬಿಂಬಿಸಲಾಗುತ್ತಿದೆ.
10:45 AM, 26 Jan

ಗೋವಾ ಸ್ತಬ್ಧಚಿತ್ರಗಳ ಪ್ರದರ್ಶನ

ಮೆಜೆಸ್ಟಿಕ್ ಚರ್ಚ್ ಬಾರೂಕ್ ಆರ್ಕಿಟೆಕ್ಷರ್‌ನ್ನು ಈ ಸ್ತಬ್ದಚಿತ್ರದಲ್ಲಿ ಕಾಣಬಹುದು
Advertisement
10:44 AM, 26 Jan

ಮಧ್ಯಪ್ರದೇಶ

ಮಧ್ಯಪ್ರದೇಶದ ಭೋಪಾಲದಿಂದ ಟ್ರೈಬಲ್ ಮ್ಯೂಸಿಯಂನ್ನು ಪ್ರದರ್ಶಿಸಲಾಗುತ್ತಿದೆ. ಅಲ್ಲಿನ ಉದ್ಯೋಗ, ಬರಿಯಾ ಟ್ರೈಬಲ್‌ಗಳ ನೃತ್ಯವನ್ನು ಪ್ರದರ್ಶಿಸಲಾಗುತ್ತಿದೆ.
10:43 AM, 26 Jan

ಅಸ್ಸಾಂ ಸ್ತಬ್ಧಚಿತ್ರಗಳ ಪ್ರದರ್ಶನ

ಅಸ್ಸಾಂ ನ ಪ್ರಸಿದ್ಧಿ ಪಡೆದಿರುವ ಬಿದುರಿನ ಬುಟ್ಟಿ ಹೆಣಿಕೆ ಇನ್ನಿತರೆ ವಸ್ತುಗಳನ್ನು ಸ್ತಬ್ಧಚಿತ್ರದಲ್ಲಿ ಪ್ರದರ್ಶಿಸಲಾಯಿತು.
10:41 AM, 26 Jan

ರಾಜಸ್ಥಾನ ನೃತ್ಯ

ಗುಲಾಬಿ ನಗರ ರಾಜಸ್ಥಾನದ ಸಂಪ್ರದಾಯವನ್ನು ಸಾರುವ ನೃತ್ಯವನ್ನು ಮಾಡುತ್ತಾ ಸ್ತಬ್ಧಚಿತ್ರ ಸಾಗುತ್ತಿದೆ
10:40 AM, 26 Jan

ತಮಿಳುನಾಡಿನ ಸ್ತಬ್ಧಚಿತ್ರಗಳ ಪ್ರದರ್ಶನ

ತಮಿಳುನಾಡಿನ ಪ್ರಸಿದ್ಧ ಗ್ರಾಮ್ಯ ಕಲಾಯ್ ಸ್ತಬ್ಧಚಿತ್ರಹಳ ಪ್ರದರ್ಶನ ನಡೆಯುತ್ತಿದೆ. ಜಾನಪದ ನೃತ್ಯಗಳನ್ನು ಮಾಡುತ್ತಾ ಸ್ತಬ್ಧ ಚಿತ್ರ ಸಾಗುತ್ತಿದೆ.
10:39 AM, 26 Jan

ಛತ್ತೀಸ್‌ಗಢದ ಸ್ತಬ್ಧಚಿತ್ರಗಳ ಪ್ರದರ್ಶನ

ಛತ್ತೀಸ್‌ಗಢದ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಅವರ ಸಾಂಪ್ರದಾಯಿಕ ಉಡುಗೆಯೊಂದಿಗೆ ಕಂಗೊಳಿಸುತ್ತಿದೆ.
10:37 AM, 26 Jan

ಅಖಿಲ ಭಾರತ ಎನ್‌ಸಿಸಿ ಮಹಿಳೆಯರ ತಂಡ

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಅಖಿಲ ಭಾರತ ಎನ್‌ಸಿಸಿ ಮಹಿಳೆಯರ ತಂಡವನ್ನು ದಾವಣಗೆರೆ ಜಿಲ್ಲೆ ಹರಿಹರದ ವಿದ್ಯಾರ್ಥಿನಿ, ಸೀನಿಯರ್ ಅಂಡರ್ ಆಫೀಸರ್ ಶ್ರೀಷ್ಮಾ ಹೆಗಡೆ ಮುನ್ನಡೆಸಿದರು.
10:35 AM, 26 Jan

ಭಾರತ ಸೇನೆಯ ಕ್ಷಿಪಣಿಗಳು, ಕ್ಷಿಪಣಿ ವಾಹನಗಳು, ವೀರಯೋಧರ ಸಾಹಸ ಪ್ರದರ್ಶನ ನಡೆಯಿತುದೆ. ಜೊತೆಗೆ ಭಾರತ ಸೇನೆಗೆ ಇತ್ತೀಚೆಗೆ ಸೇರ್ಪಡೆಯಾದ ಚಿನೂಕ್​ ಮತ್ತು ಅಪಾಚೆ ಹೆಲಿಕಾಪ್ಟರ್​​​​​​ ಆಗಸದಲ್ಲಿ ಕಸರತ್ತು ನಡೆಸಲಿವೆ. ಮಿಷನ್​ ಶಕ್ತಿ’.. ಭೀಷ್ಮ ಟ್ಯಾಂಕರ್ ರಾಜಪಥ್​​ನಲ್ಲಿ ಘರ್ಜಿಸಲಿದೆ.
10:34 AM, 26 Jan

22 ಸ್ತಬ್ಧ ಚಿತ್ರಗಳು

ಈ ಬಾರಿ ಪಥಸಂಚಲನದಲ್ಲಿ ಒಟ್ಟು 22 ಸ್ತಬ್ಧ ಚಿತ್ರಗಳು ಸಾಗಲಿವೆ. 16 ರಾಜ್ಯಗಳ ಸ್ತಬ್ಧಚಿತ್ರ ಹಾಗೂ 6 ಕೇಂದ್ರ ಸರ್ಕಾರದ ವಿವಿಧ ಸ್ತಬ್ಧಚಿತ್ರ ರಾಜ್​ಪಥ್​​ನಲ್ಲಿ ಸಾಗಲಿವೆ..
10:32 AM, 26 Jan

ಸಬ್ ಇನ್‌ಸ್ಪೆಕ್ಟರ್ ರಾಜೇಂದ್ರ ಸಿಂಗ್ ಅವರ ನೇತ್ರತ್ವದಲ್ಲಿ ದೆಹಲಿ ಪೊಲೀಸ್ರ ಬ್ಯಾಂಡ್ ಆಗಮಿಸುತ್ತಿದೆ.
10:31 AM, 26 Jan

ಇಂಡೋ-ಟಿಬೆಟಿಯನ್ ಗಡಿ ಪೊಲೀಸರು ಸಾರೇ ಜಹಾಂಸೆ ಅಚ್ಚಾ ಹಿಂದೂಸ್ತಾನ್ ಹಮಾರಾ ದೇಶಭಕ್ತಿ ಗೀತೆಯೊಂದಿಗೆ ಪಥಸಂಚಲನ ನಡೆಸಿದರು.
10:28 AM, 26 Jan

ಸಿಆರ್‌ಪಿಎಫ್ ಸಿಬ್ಬಂದಿ ಪಥಸಂಚಲನ

ಇಂಡಿಯಾ ಗೇಟಿನಿಂದ ಲಾಲ್‌ಖಿಲಾ ಕಡೆಗೆ ಮುಂದಿನ ಸ್ತಬ್ಧಚಿತ್ರ ಆಗಮಿಸುತ್ತಿದೆ. ಸಿಆರ್‌ಪಿಎಫ್ ಸಿಬ್ಬಂದಿ ಪಥಸಂಚಲನ ನಡೆಸುತ್ತಿದ್ದಾರೆ.
10:22 AM, 26 Jan

ಸಿಖ್ ಲೈಟ್ ಇನ್‌ಫಾಂಟ್ರಿ ರೆಜಿಮೆಂಟ್

ದೆಹಲಿ: ಮೇಜರ್ ಅಂಜುಂ ಗೋರ್ಖಾ ಅವರ ಬೆಟಾಲಿಯನ್ ಸಿಖ್ ಲೈಟ್ ಇನ್‌ಫಾಂಟ್ರಿ ರೆಜಿಮೆಂಟ್ ಪಥ ಸಂಚಲನ ನಡೆಸಿದರು.
10:16 AM, 26 Jan

ಪ್ಯಾರಾಚೂರ್ ರೆಜಿಮೆಂಟ್ ಮಾರ್ಚ್ ಫಾಸ್ಟ್‌ ಆರಂಭಗೊಂಡಿದೆ.
10:15 AM, 26 Jan

ಕ್ಯಾಪ್ಟನ್ ಅಂಕಿತ್, ಕ್ಯಾಪ್ಟನ್ ಸತ್ಯನಾರಾಯಣ ಅವರ ಅಡ್ವಾನ್ಸ್ ಲೈಟ್ ಹೆಲಿಕಾಪ್ಟರ್ ಫ್ಲೈಪಾಸ್ಟ್‌ ಪ್ರದರ್ಶನ
10:13 AM, 26 Jan

15 ಮೀಟರ್ ಉದ್ದದ ಶಾರ್ಟ್‌ ಸ್ಪ್ಯಾನ್ ಬ್ರಿಡ್ಜಿಂಗ್ ಸಿಸ್ಟಂ ಪ್ರದರ್ಶನ
10:09 AM, 26 Jan

ಗಣರಾಜ್ಯೋತ್ಸವ ದಿನದ ಪಥ ಸಂಚಲನ

ಗಣರಾಜ್ಯೋತ್ಸವ ದಿನದ ಪಥ ಸಂಚಲನವನ್ನು ಲೆಫ್ಟಿನೆಂಟ್ ಜನರಲ್ ಅಸಿತ್ ಮಿಸ್ತ್ರಿ ಮುನ್ನಡೆಸುತ್ತಿದ್ದಾರೆ. ಅತಿ ವಿಶಿಷ್ಟ್ ಸೇವಾ ಮೆಡಲ್ , ಸೇನಾ ಮೆಡಲ್, ವಿಶಿಷ್ಟ ಸೇವಾ ಮೆಡಲ್ , ಜನಲರ್ ಅಧಿಕಾರಿ ಕಮ್ಯಾಂಡಿಂಗ್.
10:04 AM, 26 Jan

ದೆಹಲಿಯ ರಾಜಪಥದಲ್ಲಿ ಧ್ವಜಾರೋಹಣ

ದೆಹಲಿಯ ರಾಜಪಥದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಧ್ವಜಾರೋಹಣ , ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಉಪಸ್ಥಿತರಿದ್ದಾರೆ.
10:00 AM, 26 Jan

ರಾಜಪಥದಲ್ಲಿ ಗಣರಾಜ್ಯೋತ್ಸವ ಪಥಸಂಚಲನ ಇನ್ನು ಕೆಲವೇ ನಿಮಿಷಗಳಲ್ಲಿ ಆರಂಭವಾಗಲಿದೆ.
READ MORE

English summary
71st Republic Day Live Updates: Check out the latest updates, news, videos, photos and much more on Kannada Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X