ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ ಪರೇಡ್; ವಾಯುಪಡೆಯಿಂದ ಈ ಬಾರಿ ಎರಡು ವಿಶೇಷಗಳು

|
Google Oneindia Kannada News

ನವದೆಹಲಿ, ಜನವರಿ 19: ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ವಾಯುಪಡೆಯಿಂದ ಈ ಬಾರಿ ಎರಡು ವಿಶೇಷಗಳು ಇರುವುದಾಗಿ ಭಾರತೀಯ ವಾಯುಪಡೆ ತಿಳಿಸಿದೆ. ಈಚೆಗೆ ವಾಯುಪಡೆಗೆ ಸೇರ್ಪಡೆಯಾಗಿರುವ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ ಗಣರಾಜ್ಯೋತ್ಸವದಲ್ಲಿ ಭಾಗವಹಿಸುತ್ತಿರುವುದು ಒಂದು ವಿಶೇಷವಾದರೆ, ಮೊದಲ "ಮಹಿಳಾ ಫೈಟರ್ ಪೈಲಟ್" ಭಾಗವಹಿಸುತ್ತಿರುವುದು ಎರಡನೇ ವಿಶೇಷವಾಗಿದೆ.

ಕೊರೊನಾ ನಡುವೆ ಈ ಬಾರಿ ಗಣರಾಜ್ಯೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿದ್ದು, ಸೇನಾ ಪಡೆಗಳು ತಾಲೀಮಿನಲ್ಲಿ ತೊಡಗಿಕೊಂಡಿವೆ. ವಾಯುಪಡೆಯಿಂದಲೂ ಪರೇಡ್ ನಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಗಣರಾಜ್ಯೋತ್ಸವ: ಯಾವುದೇ ವಿದೇಶಿ ಅತಿಥಿಗಳಿಗೆ ಆಹ್ವಾನವಿಲ್ಲಗಣರಾಜ್ಯೋತ್ಸವ: ಯಾವುದೇ ವಿದೇಶಿ ಅತಿಥಿಗಳಿಗೆ ಆಹ್ವಾನವಿಲ್ಲ

"ಗಣರಾಜ್ಯೋತ್ಸವದಲ್ಲಿ ರಫೇಲ್ ಯುದ್ಧ ವಿಮಾನ ಭಾಗವಹಿಸಲಿದೆ. ಭಾರತೀಯ ವಾಯುಸೇನೆಯ ಶಕ್ತಿ ಪ್ರದರ್ಶನಕ್ಕೆ ಗಣರಾಜ್ಯೋತ್ಸವ ವೇದಿಕೆಯಾಗಲಿದೆ. ಈ ರಫೇಲ್ ಯುದ್ಧ ವಿಮಾನ "ವರ್ಟಿಕಲ್ ಚಾರ್ಲಿ" ರಚನೆ ಮಾಡಲಿದೆ" ಎಂದು ಐಎಎಫ್ ವಕ್ತಾರ, ವಿಂಗ್ ಕಮಾಂಡ್ ಇಂದ್ರಾನಿಲ್ ನಂದಿ ತಿಳಿಸಿದ್ದಾರೆ.

Republic Day First Woman Fighter Pilot And Rafale Aircraft To Make Debut

ಲೆಫ್ಟಿನೆಂಟ್ ಭಾವನಾ ಕಾಂತ್ ಅವರು ಗಣರಾಜ್ಯೋತ್ಸವದ ಭಾಗವಾಗಿದ್ದು, ಪರೇಡ್ ನಲ್ಲಿ ಭಾಗವಹಿಸುತ್ತಿರುವ ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2016ರಲ್ಲಿ ವಾಯುಪಡೆ ಸೇರ್ಪಡೆಯಾಗಿದ್ದ ಮೂವರು ಮಹಿಳಾ ಫೈಟರ್ ಪೈಲಟ್ ಗಳಲ್ಲಿ ಭಾವನಾ ಕಾಂತ್ ಒಬ್ಬರಾಗಿದ್ದರು. ಈ ಬಾರಿ ಗಣರಾಜ್ಯೋತ್ಸವದಲ್ಲಿ ಇವರು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಎಲ್ ಸಿಎ ತೇಜಸ್, ಲೈಟ್ ಕಾಂಬಾಟ್ ಹೆಲಿಕಾಪ್ಟರ್, ರೋಹಿಣಿ ರಾಡರ್, ಆಕಾಶ್ ಮಿಸೆಲಿ, ಸುಖಿಯೋ 30ಎಂಕೆಐನ ಭಾಗವಾಗಲಿದ್ದಾರೆ.

 ಲಾಲ್‌ಬಾಗ್‌ನಲ್ಲಿ ನಡೆಯಬೇಕಿದ್ದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದು ಲಾಲ್‌ಬಾಗ್‌ನಲ್ಲಿ ನಡೆಯಬೇಕಿದ್ದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದು

ಒಟ್ಟು 38 ಭಾರತೀಯ ವಿಮಾನಗಳು ಈ ಪರೇಡ್ ನಲ್ಲಿ ಭಾಗವಹಿಸಲಿವೆ. ಹಂತಹಂತಗಳಲ್ಲಿ ವಿಮಾನಗಳ ಪರೇಡ್ ನಿಗದಿಪಡಿಸಲಾಗಿದ್ದು, ಮೊದಲ ಹಂತದಲ್ಲಿ ಮೂರು ರಚನೆಗಳು ಇರಲಿವೆ. ಮೊದಲು "ನಿಶಾನ್" ರಚನೆಯಿದ್ದು, ಅದರಲ್ಲಿ Mi17V5 ವಿಮಾನಗಳು ಇರಲಿವೆ. ನಂತರ "ಧ್ರುವ" ರಚನೆಯಿದ್ದು, ಆರ್ಮಿ ಏವಿಯೇಷನ್ ಕಾರ್ಪ್ಸ್ ನ ನಾಲ್ಕು ಹೆಲಿಕಾಪ್ಟರ್ ಗಳು ಭಾಗವಹಿಸಲಿವೆ. ಅಂತಿಮವಾಗಿ "ರುದ್ರ" ರಚನೆಯಲ್ಲಿ ಒಂದು ಡಾಕೋಟಾ ವಿಮಾನವಿದ್ದು, ಎರಡು Mi17V5 ಹೆಲಿಕಾಪ್ಟರ್ ಗಳು ಇದಕ್ಕೆ ಜೊತೆಯಾಗಲಿವೆ.

ಎರಡನೇ ಹಂತ ಒಂಬತ್ತು ರಚನೆಗಳನ್ನು ಒಳಗೊಂಡಿದ್ದು, ಸುದರ್ಶನ, ರಕ್ಷಕ್, ಭೀಮ್, ನೇತ್ರಾ, ಗರುಡಾ, ಏಕಲವ್ಯ, ತ್ರಿನೇತ್ರ, ವಿಜಯ್ ಹಾಗೂ ಬ್ರಹ್ಮಾಸ್ತ ರಚನೆಗಳನ್ನು ಒಳಗೊಂಡಿದೆ. ಒಂದು ರಫೇಲ್ ಜೊತೆ ಎರಡು ಜಾಗ್ವಾರ್ ಹಾಗೂ ಮಿಗ್ 29 ವಿಮಾನಗಳು ಏಕಲವ್ಯ ರಚನೆ ಮಾಡಲಿವೆ ಎಂದು ವಿಂಗ್ ಕಮಾಂಡರ್ ತೇಜ್ ಪ್ರತಾಪ್ ಪಾಂಡೆ ತಿಳಿಸಿದ್ದಾರೆ. ಭಾರತೀಯ ವಾಯುಸೇನೆಯಿಂದ ಪರೇಡ್ ಇದ್ದು, ಅದರಲ್ಲಿ ನಾಲ್ಕು ಅಧಿಕಾರಿಗಳನ್ನೊಳಗೊಂಡ 96 ಯೋಧರು ಭಾಗವಹಿಸಲಿದ್ದಾರೆ ಎಂದು ವಿಂಗ್ ಕಮಾಂಡರ್ ವಾಸುದೇವ್ ಅಹುಜಾ ತಿಳಿಸಿದ್ದಾರೆ.

English summary
Rafale fighter aircraft will feature in parade and flight lieutenant Bhawana Kanth be part of the R-Day celebrations, making her the first woman fighter pilot to be part of the parade on January 26,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X