ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಟಿಂಗ್ ರಿಟ್ರೀಟ್: ಮಹಾತ್ಮಾ ಗಾಂಧಿ ನೆಚ್ಚಿನ ಹಾಡು ಕೈಬಿಟ್ಟ ಸರ್ಕಾರ

|
Google Oneindia Kannada News

ಅಠಾರಿ ಜನವರಿ 26: ಗಣರಾಜ್ಯೋತ್ಸವದ ಪ್ರಯುಕ್ತ ಪಂಜಾಬ್‌ನ ಅಮೃತಸರ ಬಳಿಯ ಅಟ್ಟಾರಿ-ವಾಘಾ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು ಆಯೋಜಿಸಲಾಗಿತ್ತು. 73ನೇ ಗಣರಾಜ್ಯೋತ್ಸವದ ನಿಮಿತ್ತ ಭಾರತ-ಪಾಕಿಸ್ತಾನದ ಅಟ್ಟಾರಿ-ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ ಮತ್ತು ಪಾಕಿಸ್ತಾನ ಸೇನಾ ಸಿಬ್ಬಂದಿಗಳು ಐತಿಹಾಸಿಕ ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಬಾರಿ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ನೆಚ್ಚಿನ ಸ್ತುತಿಗೀತೆ 'ಅಬೈಡ್ ವಿತ್ ಮಿ' ನುಡಿಸುವುದನ್ನು ಕೈಬಿಡಲಾಗಿದೆ. ಗಾಂಧೀಜಿ ಅವರಿಗೆ ಬಹಳ ಇಷ್ಟವಾಗಿದ್ದ 'ಅಬೈಡ್ ವಿತ್ ಮಿ' ಗೀತೆಯನ್ನು 2020ರಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಕೈಬಿಡಲಾಗಿತ್ತು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. 2021ರಲ್ಲಿ ಅದನ್ನು ಮತ್ತೆ ಸೇರ್ಪಡೆ ಮಾಡಲಾಗಿತ್ತು.

ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಮೊಳಗಿಸುವ 26 ಅಧಿಕೃತ ಸ್ವರಗಳ ಪಟ್ಟಿಯಲ್ಲಿ ಈ ಬಾರಿ 'ಅಬೈಡ್ ವಿತ್ ಮಿ' ಉಲ್ಲೇಖ ಇಲ್ಲ. 1950ರಿಂದ ಈ ಗೀತೆಯನ್ನು ಪ್ರತಿ ವರ್ಷ ನುಡಿಸಲಾಗುತ್ತಿತ್ತು. ಆದರೆ 2020ರಲ್ಲಿ ಮೊದಲ ಬಾರಿಗೆ ಕೈಬಿಡಲಾಗಿತ್ತು. ವ್ಯಾಪಕ ಆಕ್ರೋಶದ ಬಳಿಕ ಕಳೆದ ವರ್ಷ ಅದು ಮರಳಿ ಸೇರ್ಪಡೆಯಾಗಿತ್ತು. ಈ ಬಾರಿಯೂ 'ಅಬೈಡ್ ವಿತ್ ಮಿ' ಗೀತೆಯನ್ನು ಸಮಾರಂಭದಲ್ಲಿ ಕೈಬಿಡಲಾಗಿದೆ. ಇದರ ಬದಲಿಗೆ "ಏ ಮೇರೆ ವತನ್ ಕೆ ಲೋಗೋ" ಗೀತೆಯನ್ನು ಸಮಾರಂಭದಲ್ಲಿ ಹಾಕಲಾಗಿತ್ತು.

"ಏ ಮೇರೆ ವತನ್ ಕೆ ಲೋಗೋ" ಸ್ಪರ್ಶಿಸುವ ಭಾವಗೀತೆಯಾಗಿದೆ ಎಂದು ಸರ್ಕಾರಿ ಮೂಲಗಳು ಭಾನುವಾರ ಸ್ಪಷ್ಟಪಡಿಸಿವೆ. ವೈವಿಧ್ಯತೆಯಲ್ಲಿ ಏಕತೆ, ಭಾರತೀಯ ಸೈನಿಕರ ಅಂಶ ಮತ್ತು ಬಹಳ ಸಮ್ಮೋಹನಗೊಳಿಸುವ ಮತ್ತು ಗಂಭೀರವಾದ ಪ್ರಭಾವವನ್ನು ಹೊಂದಿದೆ. "ಅಬೈಡ್ ವಿತ್ ಮಿ" ಒಂದು ಜನಪ್ರಿಯ ಮಿಲಿಟರಿ ಟ್ಯೂನ್ ಆಗಿದೆ, ಆದರೆ ಇದರ ಸಾಹಿತ್ಯವನ್ನು ಸೀಮಿತ ಜನ ಅರ್ಥಮಾಡಿಕೊಳ್ಳುತ್ತಾರೆ. "ಏ ಮೇರೆ ವತನ್ ಕೆ ಲೋಗೋ" ಗಾಗಿ ಸಾಂಪ್ರದಾಯಿಕ ರಾಗ ಮತ್ತು ಸಾಹಿತ್ಯವು ಭಾರತದ ಜನರೊಂದಿಗೆ ಹೆಚ್ಚು ವ್ಯಾಪಕವಾದ ಸಂಪರ್ಕವನ್ನು ಹೊಂದಿದೆ. "ಅಬೈಡ್ ವಿತ್ ಮಿ" ಗೆ ಹೋಲಿಸಿದರೆ ಭಾರತದ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಶೌರ್ಯವನ್ನು ಆಚರಿಸಲು ಸಂದರ್ಭೋಚಿತವಾಗಿ ಹೆಚ್ಚು ಸೂಕ್ತವಾಗಿದೆ ಮತ್ತು ಹಾಡು ಎಲ್ಲಾ ಭಾರತೀಯರಲ್ಲಿ ದೇಶಭಕ್ತಿಯ ಬಲವಾದ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ. ಈ ಕಾರಣಕ್ಕಾಗಿಯೇ ಸ್ವಾತಂತ್ರ್ಯದ 73ನೇ ವರ್ಷದಲ್ಲಿ, ಬೀಟಿಂಗ್ ರಿಟ್ರೀಟ್ 2022 ರ ಮುಕ್ತಾಯದ ಪ್ರದರ್ಶನದಲ್ಲಿ ಈ ಬದಲಾವಣೆಯನ್ನು ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Republic Day 2022: Beating Retreat ceremony livens up Attari-Wagah border

ಬೀಟಿಂಗ್ ರಿಟ್ರೀಟ್

ಬೀಟಿಂಗ್ ರಿಟ್ರೀಟ್ ಎನ್ನುವುದು ಸೂರ್ಯಾಸ್ತದ ವೇಳೆ ಯುದ್ಧರಂಗದಿಂದ ಸೇನಾ ಪಡೆಗಳು ಹಿಂದಕ್ಕೆ ಮರಳುವ ಶತಮಾನಗಳಷ್ಟು ಹಳೆಯದಾದ ಸೇನಾ ಸಂಪ್ರದಾಯವಾಗಿದೆ. 17ನೇ ಶತಮಾನದಲ್ಲಿ ರಾಜ ಜೇಮ್ಸ್ 2, ದಿನದ ಯುದ್ಧ ಅಂತ್ಯಗೊಂಡಿದೆ ಎಂದು ಪ್ರಕಟಿಸಲು ಡೋಲುಗಳನ್ನು ಬಡಿಯುವಂತೆ, ಧ್ವಜಗಳನ್ನು ಕೆಳಕ್ಕಿಳಿಸುವಂತೆ ಹಾಗೂ ಪಥಸಂಚಲನ ನಡೆಸುವಂತೆ ತನ್ನ ಪಡೆಗಳಿಗೆ ಆದೇಶಿಸಿದ್ದ. ಈ ಸಂಪ್ರದಾಯ ಅಂದಿನಿಂದಲೂ ಬಳಕೆಯಲ್ಲಿದ್ದು, ಈಗ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಯುದ್ಧ ಆರಂಭಿಸಲು ಕಹಳೆ ಮೊಳಗಿಸುವಂತೆ ಆ ದಿನದ ಯುದ್ಧ ಸ್ಥಗಿತಗೊಳಿಸಲು ಕೂಡ ಕಹಳೆ ಮೊಳಗಿಸಲಾಗುತ್ತದೆ. ಕೂಡಲೇ ಸೇನಾ ಪಡೆಗಳು ಕದನಕ್ಕೆ ವಿರಾಮ ನೀಡುತ್ತವೆ. ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಕ್ಕಿಳಿಸಿ ಯುದ್ಧರಂಗದಿಂದ ಹಿಂದೆ ಸರಿಯುತ್ತವೆ. ಹೀಗಾಗಿ ರಿಟ್ರೀಟ್ ಅಥವಾ ಹಿಂದೆ ಸರಿ ಎಂಬ ಪದವನ್ನು ಬಳಸಲಾಗುತ್ತಿದೆ.

Republic Day 2022: Beating Retreat ceremony livens up Attari-Wagah border

Recommended Video

Virat Kohli ಈಗಲೂ ಎಷ್ಟು ವರ್ಷ ಕ್ರಿಕೆಟ್ ಆಡಬಹುದು | Oneindia Kannada
ಭಾರತದ 73ನೇ ಗಣರಾಜ್ಯೋತ್ಸವದಂದು ಬೆಳಗ್ಗೆ ಅಟ್ಟಾರಿ-ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ ಮತ್ತು ಪಾಕಿಸ್ತಾನ ಸೇನೆಯು ಸಿಹಿತಿಂಡಿ ಮತ್ತು ಶುಭಾಶಯ ವಿನಿಮಯ ಮಾಡಿಕೊಂಡರು. ಪಂಜಾಬ್‌ನ ಅಮೃತಸರ ಬಳಿಯ ಅಟ್ಟಾರಿ-ವಾಘಾ ಗಡಿಯಲ್ಲಿ ಸಂಜೆ ಬೀಟಿಂಗ್ ರಿಟ್ರೀಟ್ ಸಮಾರಂಭ ನಡೆಯಿತು. ಉಭಯ ದೇಶಗಳ ಸೇನಾ ಸಿಬ್ಬಂದಿಗಳು ಧ್ವಜ ನಮನ ಸಲ್ಲಿಸಿ ಧ್ವಜ ಇಳಿಸುವ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು. ಈ ಸಂದರ್ಭದಲ್ಲಿ ಬಿಎಸ್ಎಫ್ 176 ಬೆಟಾಲಿಯನ್‌ನ AT ಪಡೆಗಳು 18 BGB ಯ ಪಡೆಗಳೊಂದಿಗೆ ಸಿಹಿತಿಂಡಿ ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡವು. ಇದಲ್ಲದೆ, BSF ಮತ್ತು ಪಾಕಿಸ್ತಾನ ಸೇನೆಯ ನಡುವೆ ಸಿಹಿತಿಂಡಿಗಳು ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

English summary
This time at a Beating Retreat event playing Mahatma Gandhi's favorite hymn 'Abide With Me' has been dropped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X