ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Republic Day 2021 Live Updates : ದೆಹಲಿ ಗಡಿ ಉದ್ವಿಗ್ನ, ರಾಜಧಾನಿಯತ್ತ ರೈತರು

|
Google Oneindia Kannada News

ಭಾರತಕ್ಕಿಂದು 72ನೇ ಗಣರಾಜ್ಯೋತ್ಸವದ ಸಂಭ್ರಮ. ಕೊರೊನಾ ಸೋಂಕಿನ ಆತಂಕದಿಂದಾಗಿ ಪ್ರತಿ ವರ್ಷಕ್ಕಿಂತ ಈ ಬಾರಿ ಗಣರಾಜ್ಯೋತ್ಸವ ಆಚರಣೆ ಭಿನ್ನವಾಗಿರಲಿದೆ. ಕೆಲವೊಂದು ಮಾರ್ಪಾಡುಗಳೊಂದಿಗೆ ರಾಷ್ಟ್ರೀಯ ಹಬ್ಬ ನಡೆಯುತ್ತಿದ್ದು, ದೇಶಕ್ಕೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ.

ರಾಜಧಾನಿ ದೆಹಲಿಯಲ್ಲಿ ಧ್ವಜಾರೋಹಣ, ಸೇನಾ ತುಕಡಿಗಳ ಪಥಸಂಚಲನ, ಸ್ತಬ್ಧಚಿತ್ರಗಳು ಗಣರಾಜ್ಯೋತ್ಸವದ ಪರೇಡ್ ಗೆ ಬಣ್ಣ ತುಂಬಲಿವೆ. ಆದರೆ ಐವತ್ತು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮುಖ್ಯ ಅತಿಥಿಗಳಿಲ್ಲದೇ ಗಣರಾಜ್ಯೋತ್ಸವ ನಡೆಯುತ್ತಿದೆ. ಜೊತೆಗೆ ಲಕ್ಷಾಂತರ ಮಂದಿಯ ಬದಲು ಕೇವಲ 25 ಸಾವಿರ ಜನರಿಗೆ ಪರೇಡ್ ನೋಡಲು ಅವಕಾಶ ಕಲ್ಪಿಸಲಾಗಿದೆ.

Republic Day 2021 Live updates, News and Highlights in Kannada

ಸರಳವಾಗಿ ನಡೆಯುತ್ತಿರುವ ಕಾರ್ಯಕ್ರಮಗಳ ನಡುವೆ ಕೆಲವು ವಿಶೇಷತೆಗಳೂ ಈ ಬಾರಿ ಗಣರಾಜ್ಯೋತ್ಸವದಲ್ಲಿರಲಿವೆ. ಈಚೆಗೆ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ರಫೇಲ್ ಫೈಟರ್ ಜೆಟ್ ಮೊದಲ ಬಾರಿ ಪರೇಡ್ ನಲ್ಲಿ ಭಾಗವಹಿಸಲಿದೆ. ಮೊದಲ ಮಹಿಳಾ ಫೈಟರ್ ಪೈಲಟ್ ಭಾವನಾ ಕಾಂತ್ ಪರೇಡ್ ನಲ್ಲಿ ಭಾಗವಹಿಸುತ್ತಿರುವುದು ಮತ್ತೊಂದು ವಿಶೇಷವೆನಿಸಿದೆ.

Newest FirstOldest First
2:07 PM, 26 Jan

ದೆಹಲಿಯ ಕೆಂಪು ಕೋಟೆಯಲ್ಲಿ ಪ್ರತಿಭಟನಾನಿರತ ರೈತರು ಧ್ವಜಾರೋಹಣ ನೆರವೇರಿಸಿದರು.
1:53 PM, 26 Jan

ದೆಹಲಿಯ ಕೆಂಪುಕೋಟೆಗೆ ರೈತರ ಟ್ರ್ಯಾಕ್ಟರ್ ಜಾಥಾ ತಲುಪಿದೆ.
1:43 PM, 26 Jan

72ನೇ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ನಡೆದ ಪೆರೇಡ್‌ನಲ್ಲಿ ಕರ್ನಾಟಕದ ವಾರ್ತಾ ಇಲಾಖೆ ಸಿದ್ಧಪಡಿಸಿರುವ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಸ್ತಬ್ಧಚಿತ್ರ ಜನರ ಗಮನ ಸೆಳೆಯಿತು.
1:42 PM, 26 Jan

ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಜಾಥಾ ವೇಳೆ ಗಲಭೆ ಉಂಟಾಗಿದ್ದು, ಕೆಲವು ರೈತರು ಹಾಗೂ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
1:24 PM, 26 Jan

ದೆಹಲಿಯಲ್ಲಿ ಗಲಾಟೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿಯೂ ರೈತರ ಟ್ರ್ಯಾಕ್ಟರ್ ಜಾಥಾಗೆ ಬಿಗಿ ಭದ್ರತೆ ಮಾಡಲಾಗಿದೆ. ಮಾದವರ ಬಳಿ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚೆನ್ನಣ್ಣನವರ್ ಮೊಕ್ಕಾಂ ಹೂಡಿದ್ದಾರೆ. ಎಸ್ಪಿ ,ಡಿಸಿಪಿ ನೇತೃತ್ವದ ಭದ್ರತೆಯಲ್ಲಿ ಜಾಥಾ ಫ್ರೀಡಂ ಪಾರ್ಕ್ ಗೆ ತೆರಳಲಿದೆ.
1:11 PM, 26 Jan

ನಂಗ್ಲಾಯ್ ನಲ್ಲಿ ರೈತರ ಟ್ರ್ಯಾಕ್ಟರ್ ಮರವಣಿಗೆ ಬರುತ್ತಿದ್ದಂತೆ ಪೊಲೀಸರು ರಸ್ತೆಯ ಮೇಲೆ ಕುಳಿತು ಮೆರವಣಿಗೆ ತಡೆ ಒಡ್ಡಿದರು.
1:07 PM, 26 Jan

ಸಮಯಪುರ ಬದ್ಲಿ, ರೋಹಿಣಿ ಸೆಕ್ಟರ್, ಹೈದರ್ ಪುರ ಬದ್ಲಿ ಮಾರ್, ಜಹಂಗೀರ್ ಪುರಿ, ಆದರ್ಶ ನಗರ, ಆಜಾದ್ ಪುರ, ಮಾಡೆಲ್ ಟೌನ್, ಜಿಟಿಬಿ ನಗರ, ವಿಶ್ವವಿದ್ಯಾಲಯ, ವಿಧಾನಸಭಾದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಬಂದ್ ಮಾಡಿರುವುದಾಗಿ ದೆಹಲಿ ಮೆಟ್ರೊ ರೈಲು ಕಾರ್ಪೊರೇಷನ್ ತಿಳಿಸಿದೆ.
Advertisement
1:05 PM, 26 Jan

ಟಿಯರ್ ಗ್ಯಾಸ್ ಶೆಲ್ ಬಳಸಿ ದೆಹಲಿಯ ಐಟಿಒ ಪ್ರದೇಶದಲ್ಲಿ ಪೊಲೀಸರು ಪ್ರತಿಭಟನಾನಿರತ ರೈತರನ್ನು ಚದುರಿಸಿದರು.
12:46 PM, 26 Jan

ಪ್ರತಿಭಟನಾನಿರತ ರೈತರು ಐಟಿಒ ಪ್ರದೇಶದ ಬಳಿ ಡಿಟಿಸಿ ಬಸ್ ಮೇಲೆ ದಾಳಿ ನಡೆಸಿದರು.
12:37 PM, 26 Jan

ಪ್ರತಿಭಟನಾಕಾರರು ಘಾಜಿಪುರ ಗಡಿಯಿಂದ ಪ್ರಗತಿ ಮೈದಾನ ಪ್ರದೇಶಕ್ಕೆ ಆಗಮಿಸಿದರು.
12:24 PM, 26 Jan

ಉತ್ತರ ಪ್ರದೇಶದ ಘಾಜಿಪುರ ಗಡಿಯಲ್ಲಿ ದೆಹಲಿಯ ಕಡೆಗೆ ಸಾಗುತ್ತಿರುವ ಪ್ರತಿಭಟನಾಕಾರರು
12:16 PM, 26 Jan

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ರಾಷ್ಟ್ರದ್ವಜ ಹಾರಿಸಿದರು.
Advertisement
11:54 AM, 26 Jan

ಕರ್ನಾಲ್ ಬೈಪಾಸ್ ಬಳಿ ಪ್ರತಿಭಟನಾಕಾರರು ಬ್ಯಾರಿಕೇಡ್ ಉರುಳಿಸಿದರು.
11:51 AM, 26 Jan

ಕೃಷಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ಕೈಗೊಂಡಿರುವ ರೈತರ ಹೋರಾಟದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ರೈತರು‌
11:50 AM, 26 Jan

ಮೂರು ಸುಖೋಯ್ 30 ಎಂಕೆಐಗಳನ್ನು ಒಳಗೊಂಡ ತ್ರಿನೇತ್ರ ರಚನೆಯ ಮೂಲಕ ಮೂರು ವಿಮಾನಗಳು ಮೇಲೆಕೆಳಗೆ ಚಲಿಸಿ ಆಕಾಶಗದಲ್ಲಿ ತ್ರಿಶೂಲ ರಚಿಸಿದವು.
11:48 AM, 26 Jan

ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಪೊಲೀಸರ ಬ್ಯಾರಿಕೇಡ್ ಉರುಳಿಸಿ ನುಗ್ಗಿದ ರೈತರು.
11:37 AM, 26 Jan

ಕಣ್ಮರೆಯಾದ ಗಾನಗಂಧರ್ವಗೆ ಪದ್ಮವಿಭೂಷಣದ ಗೌರವ: ಎಸ್‌ಪಿಬಿ ಜೀವನ-ಸಾಧನೆ

ಕಳೆದ ವರ್ಷ ತಮ್ಮ ಅಸಂಖ್ಯಾತ ಅಭಿಮಾನಿಗಳನ್ನು ದುಃಖದ ಮಡುವಿನಲ್ಲಿ ಅಗಲಿದ ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಮಣ್ಯಂ ಅವರಿಗೆ ಕೊನೆಗೂ ಕೇಂದ್ರ ಸರ್ಕಾರದಿಂದ ಸೂಕ್ತ ಗೌರವ ಸಂದಿದೆ. ಎಸ್‌ಪಿಬಿ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪುರಸ್ಕಾರ ನೀಡಲಾಗಿದೆ.
11:34 AM, 26 Jan

ನಮ್ಮ ಎರಡು ದೇಶಗಳು ಈ ಪಿಡುಗಿನಿಂದ ಮನುಕುಲವನ್ನು ಮುಕ್ತಗೊಳಿಸಲು ಲಸಿಕೆಯ ಅಭಿವೃದ್ಧಿ, ಉತ್ಪಾದನೆ ಮತ್ತು ಹಂಚಿಕೆಗಳ ವಿಚಾರದಲ್ಲಿ ಜತೆಜತೆಯಾಗಿ ಕೆಲಸ ಮಾಡುತ್ತಿದ್ದೇವೆ. ಬ್ರಿಟನ್, ಭಾರತ ಮತ್ತು ಇತರೆ ದೇಶಗಳ ಸಂಯೋಜಿತ ಪ್ರಯತ್ನದ ಫಲವಾಗಿ ನಾವು ಕೋವಿಡ್ ವಿರುದ್ಧ ಯಶಸ್ಸಿನ ಹಾದಿಯಲ್ಲಿದ್ದೇವೆ ಎಂದಿದ್ದಾರೆ.
11:32 AM, 26 Jan

ಈ ವರ್ಷ ಮುಂದಿನ ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಲು ಕಾತರನಾಗಿದ್ದೇನೆ. ನಾನು ಮತ್ತು ಪ್ರಧಾನಿ ನರೇಂದ್ರ ಮೋದಿ ಒಬ್ಬರೂ ಪ್ರತಿಜ್ಞೆಗೈದಿರುವಂತೆ ನಮ್ಮ ಸ್ನೇಹ ಮತ್ತು ಸಂಬಂಧವನ್ನು ಬಲಪಡಿಸುವ, ವೃದ್ಧಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.
11:30 AM, 26 Jan

ಗಣರಾಜ್ಯೋತ್ಸವ ದಿನದಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಶುಭ ಹಾರೈಸಿದ್ದಾರೆ. ನಿಗದಿಯಂತೆ ನಡೆದಿದ್ದರೆ ಈ ಬಾರಿ ವಿಶೇಷ ಅತಿಥಿಯಾಗಿ ಅವರು ಭಾರತಕ್ಕೆ ಆಗಮಿಸಬೇಕಿತ್ತು. 'ಭಾರತ ಇಂದು ಗಣರಾಜ್ಯೋತ್ಸವ ಆಚರಿಸುತ್ತಿದೆ. ಜಗತ್ತಿನ ಅತಿ ದೊಡ್ಡ ಸಾರ್ವಭೌಮ ಪ್ರಜಾಪ್ರಭುತ್ವದ ದೇಶವಾಗಿ ಅಮೋಘ ಸಂವಿಧಾನ ಜನ್ಮತಾಳಿತು. ನನಗೆ ಬಹಳ ಆಪ್ತವಾಗಿರುವ ದೇಶಕ್ಕೆ ನನ್ನ ಪ್ರಾಮಾಣಿಕ ಶುಭಾಶಯಗಳು ಎಂದು ಅವರು ಹೇಳಿದ್ದಾರೆ.
11:25 AM, 26 Jan

ಲಡಾಖ್‌ನ ಪ್ಯಾಂಗಾಂಗ್ ತ್ಸೋ ಸರೋವರದಲ್ಲಿ ಐಟಿಬಿಪಿ ಪಡೆ ಸಿಬ್ಬಂದಿ ಗಣರಾಜ್ಯೋತ್ಸವ ಆಚರಿಸಿದರು.
11:24 AM, 26 Jan

ಗಣರಾಜ್ಯ ದಿನದ ನೇರಪ್ರಸಾರ
11:18 AM, 26 Jan

ದೆಹಲಿಯ ಸಂಜಯ್ ಗಾಂಧಿ ಟ್ರಾನ್ಸ್‌ಪೋರ್ಟ್ ನಗರದಲ್ಲಿ ಪೊಲೀಸರ ಜಲಫಿರಂಗಿ ವಾಹನದ ಮೇಲೆ ರೈತರು ಹತ್ತಿ ಪ್ರತಿಭಟನೆ ನಡೆಸಿದರು.
11:10 AM, 26 Jan

ವಿಜಯನಗರದ ಸಾಮ್ರಾಜ್ಯದ ಭವ್ಯ ಇತಿಹಾಸ ಪ್ರದರ್ಶಿಸುವ ಸ್ತಬ್ಧಚಿತ್ರ ಪ್ರದರ್ಶನ ನಡೆಯಿತು
11:05 AM, 26 Jan

ಉತ್ತರ ಪ್ರದೇಶದಿಂದ ಅಯೋಧ್ಯಾ ಥೀಮ್ ಉಳ್ಳ ಸ್ತಬ್ಧ ಚಿತ್ರ ಪ್ರದರ್ಶನದೊಂದಿಗೆ. ರಾಮಮಂದಿರದ ವಿನ್ಯಾಸ ಕೂಡ ಇದೆ.
11:04 AM, 26 Jan

ಪಥಸಂಚಲನದಲ್ಲಿ ಗುಜರಾತ್‌ನ ಮೊಧೆರಾದ ಸೂರ್ಯ ದೇವಸ್ಥಾನದ ಪ್ರತಿಕೃತಿ ಪ್ರದರ್ಶನಗೊಂಡಿದೆ
11:02 AM, 26 Jan

ಒಂಬತ್ತನೇ ಸಿಖ್ ಗುರು ಶ್ರೀ ಗುರು ತೇಜ್ ಬಹದ್ದೂರ್ ಅವರ ಮಹತ್ವ ಸಾರುವ ಸ್ತಬ್ಧಚಿತ್ರ ಪಂಜಾಬ್‌ನಿಂದ ಪ್ರದರ್ಶನಗೊಂಡವು.
11:00 AM, 26 Jan

72ನೇ ಗಣರಾಜ್ಯೋತ್ಸವ ಅಂಗವಾಗಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಜಾರಕಿಹೊಳಿ‌ ಧ್ವಜಾರೋಹಣ ನೆರವೇರಿಸಿದರು
10:59 AM, 26 Jan

ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ ಬೆಂಗಳೂರಿನತ್ತ ಹೊರಟಿದ್ದ ಟ್ರಾಕ್ಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದರು.ಟ್ರಾಕ್ಟರ್ ಪರೇಡ್‌ಗೆ ಅನುಮತಿ ಇಲ್ಲದ ಕಾರಣ ಪೊಲೀಸರ ವಶಕ್ಕೆ.ಬೆಂಗಳೂರಿನತ್ತ20 ಟ್ರಾಕ್ಟರ್ ಸಂಚಾರ ನಡೆಸಿವೆ.ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ‌ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು
10:59 AM, 26 Jan

ಇದೇ ಮೊದಲ ಬಾರಿಗೆ ಲಡಾಖ್ ಕೇಂದ್ರಾಡಳಿತ ಪ್ರದೇಶದ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದೆ.
READ MORE

English summary
Republic Day 2021 Live updates in Kannada: Check out all the live updates, breaking news, images, videos on Republic Day celebrations across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X