ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ 10 ಆಸಿಯಾನ್ ನಾಯಕರು

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜನವರಿ 26: ಈ ಬಾರಿಯ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಸಿಯನ್ ( ASEAN) ದೇಶಗಳ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿರುವುದು ವಿಶೇಷ.

ಥಾಯ್ಲಾಂಡ್, ವಿಯೆಟ್ನಾಂ, ಇಂಡೋನೇಷ್ಯ, ಮಲೇಷ್ಯ, ಫಿಲಿಪ್ಪೀನ್ಸ್, ಸಿಂಗಾಪುರ, ಮಯನ್ಮಾರ್, ಕಾಂಬೋಡಿಯಾ, ಲಾವೋಸ್ ಮತ್ತು ಬ್ರೂನೆ ದೇಶಗಳ ಮುಖ್ಯಸ್ಥರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಆಸಿಯಾನ್ ರಚನೆಗೊಂಡು 50 ವಸಂತಗಳು ಕಳೆದಿದ್ದು ಭಾರತ ಇದರ ಸದಸ್ಯತ್ವ ಪಡೆದ 25ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ.

Republic Day 2018: 10 ASEAN leaders to grace the occasion this year

ಈ ಎಲ್ಲಾ ಹಿನ್ನಲೆಯಲ್ಲಿ ರಾಜಪಥ್ ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ ಗೆ ವಿದೇಶಿ ಅತಿಥಿಗಳು ಸಾಕ್ಷಿಯಾಗಲಿದ್ದಾರೆ. ಜತೆಗೆ ಈ ದೇಶಗಳಿಗೆ ಸೇರಿದ 700 ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ.

ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಪ್ರದರ್ಶನಗಳು ಗಣರಾಜ್ಯೋತ್ಸವದಲ್ಲಿ ಇರಲಿದೆ. ಇದೆ ಮೊದಲ ಬಾರಿಗೆ ಗಡಿ ಭದ್ರತಾ ಪಡೆಯ ಮಹಿಳಾ ಬೈಕರ್ ಗಳು ತಮ್ಮ ಚೊಚ್ಚಲ ಪ್ರದರ್ಶನವನ್ನು ಇಂದು ನೀಡಲಿದ್ದಾರೆ. ಸಮಾರಂಭಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಇಂದಿರಾ ಗೇಟ್ ನಲ್ಲಿರುವ ಅಮರ್ ಜವಾನ್ ಜ್ಯೋತಿಗೆ ತೆರಳಿ ಮಡಿದ ಸೈನಿಕರಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಕುಳಿತುಕೊಳ್ಳಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ನಾಲ್ಕನೇ ಸಾಲಿನ ಆಸನ ನೀಡಿದ್ದು ಕಾಂಗ್ರೆಸ್ ಕಣ್ಣು ಕೆಂಪಗಾಗಿಸಿದೆ. ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾಗ ಯಾವತ್ತೂ ಮೊದಲ ಸಾಲಿನಲ್ಲೇ ಕುಳಿತುಕೊಳ್ಳುತ್ತಿದ್ದರು. ಆದರೆ ರಾಹುಲ್ ಗಾಂಧಿಗೆ ಮಾತ್ರ ನಾಲ್ಕನೇ ಸಾಲಿನ ಆಸನ ನೀಡಲಾಗಿದೆ.

English summary
India is all set to celebrate it's 69th Republic Day this year. Celebrated every year since January 26, 1950, the Constitution of the country came into effect on this day. This year, the Republic Day parade will be even grander as all ASEAN leaders will be present during the celebrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X