ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೋತ್ತರ ಸಮೀಕ್ಷೆ; ಪುದುಚೇರಿಯಲ್ಲಿ ಎನ್‌ಡಿಎಗೆ ಅಧಿಕಾರ

|
Google Oneindia Kannada News

ಪುದುಚೇರಿ, ಏಪ್ರಿಲ್ 29; ಪುದುಚೇರಿ ವಿಧಾನಸಭೆ ಚುನಾವಣೆ 2021ರ ಚುನಾವಣೋತ್ತರ ಫಲಿತಾಂಶ ಪ್ರಕಟವಾಗಿದೆ. 30 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶದಲ್ಲಿ ಬಹುಮತಕ್ಕೆ 16 ಸ್ಥಾನಗಳು ಅಗತ್ಯವಿದೆ.

ಗುರುವಾರ Republic-CNX ನಡೆಸಿರುವ ಚುನಾವಣೋತ್ತರ ಸಮೀಕ್ಷೆಯ ವರದಿ ಬಿಡುಗಡೆಯಾಗಿದೆ. ಪುದುಚೇರಿಯಲ್ಲಿ ಎನ್‌ಡಿಯ ಮೈತ್ರಿಕೂಟ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆ ಹೇಳಿದೆ.

Today's Chanakya Exit Poll: ಅಸ್ಸಾಂನಲ್ಲಿ ಮತ್ತೆ ಬಿಜೆಪಿToday's Chanakya Exit Poll: ಅಸ್ಸಾಂನಲ್ಲಿ ಮತ್ತೆ ಬಿಜೆಪಿ

30 ವಿಧಾನಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ ಮೈತ್ರಿಕೂಟ 18 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ. ಯುಪಿಎ ಮೈತ್ರಿಕೂಟ 12 ಸ್ಥಾನಗಳಲ್ಲಿ ಜಯಗಳಿಸಲಿದೆ.

Republic-CNX Exit Poll NDA Is Set To Come To Power In Puducherry

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕಾರ ಹಿಡಿದಿತ್ತು. ಆದರೆ, ಅವಧಿ ಪೂರ್ಣಗೊಳ್ಳುವ ಮುನ್ನವೇ ಶಾಸಕರ ರಾಜೀನಾಮೆಯಿಂದಾಗಿ ಸರ್ಕಾರ ಪತನಗೊಂಡಿತ್ತು.

ABP C-Voter Exit Poll: ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಕೈಗೆ ಅಧಿಕಾರ ಚುಕ್ಕಾಣಿABP C-Voter Exit Poll: ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಕೈಗೆ ಅಧಿಕಾರ ಚುಕ್ಕಾಣಿ

ಯಾವ ಪಕ್ಷವೂ ಸರ್ಕಾರ ರಚನೆ ಮಾಡದ ಕಾರಣ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳ ಮತ್ತು ಪುದುಚೇರಿಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಸಾಕಷ್ಟು ಪ್ರಚಾರವನ್ನು ನಡೆಸಿದ್ದರು.

English summary
Check out Puducherry assembly election Republic-CNX Exit Poll Results 2021 in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X