ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಪಬ್ಲಿಕ್ ಸಮೀಕ್ಷೆ : ಕರ್ನಾಟಕದಲ್ಲಿ ಮತ್ತೆ ಮೋದಿ ಅಲೆ!

By Mahesh
|
Google Oneindia Kannada News

ಬೆಂಗಳೂರು, ಜನವರಿ 18: 2019ರ ಲೋಕಸಭೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಜನವರಿ 18, 2018 ಸಂಜೆ ಶುಭ ಸುದ್ದಿ ಸಿಕ್ಕಿದೆ. ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಹಾಗೂ ಸಿ ವೋಟರ್ ನಡೆಸಿರುವ ಸಮೀಕ್ಷೆಯಲ್ಲಿ ಎನ್ ಡಿಎ ಮುನ್ನಡೆ ಪಡೆದುಕೊಂಡಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಮತ್ತೆ ಮೋದಿ ಅಲೆ ಏಳುವುದು ಖಚಿತವಾಗಿದೆ.

543 ಲೋಕಸಭೆ ಸ್ಥಾನಗಳ ಪೈಕಿ ಎನ್ ಡಿಎ ಹಾಗೂ ಯುಪಿಎ ಎಷ್ಟು ಸ್ಥಾನ ಗಳಿಸಬಹುದು ಎಂದು ನಡೆಸಲಾದ ಸಮೀಕ್ಷೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಯುಪಿಎ ಗಿಂತ ಮೋದಿ ನೇತೃತ್ವದ ಎನ್ ಡಿಎ ನಡುವಿನ ಅಂತರ ನೂರಕ್ಕೂ ಅಧಿಕ ಸಂಖ್ಯೆಯಲ್ಲಿದೆ.

ಈ ಕ್ಷಣ ಚುನಾವಣೆಯಾದ್ರೆ ಮೋದಿಯದೇ ಜಯಭೇರಿ: ರಿಪಬ್ಲಿಕ್ ಸಮೀಕ್ಷೆಈ ಕ್ಷಣ ಚುನಾವಣೆಯಾದ್ರೆ ಮೋದಿಯದೇ ಜಯಭೇರಿ: ರಿಪಬ್ಲಿಕ್ ಸಮೀಕ್ಷೆ

ಕರ್ನಾಟಕದ ಸಮೀಕ್ಷೆ ಹೊರಬೀಳುವ ಹೊತ್ತಿಗೆ ಎನ್ ಡಿಎ 144 ಹಾಗೂ ಯುಪಿಎ 32ನಂತೆ ಇತ್ತು. ರಿಪಬ್ಲಿಕ್ ಸಮೀಕ್ಷೆಯಂತೆ ಕರ್ನಾಟಕದಲ್ಲಿ ಎನ್ ಡಿಎ 22 ಹಾಗೂ ಯುಪಿಎ 5 ಸ್ಥಾನಗಳು ಹಾಗೂ ಇತರೆ 1 ಬರಲಿದೆ.

Republic C Voter Survey #NationalApprovalRatings projection for Karnataka

ಕರ್ನಾಟಕದಲ್ಲಿ 2014ರ ಲೋಕಸಭೆ ಚುನಾವಣಾ ಫಲಿತಾಂಶ: ಎನ್ ಡಿಎ 17, ಯುಪಿಎ 9 ಹಾಗೂ ಇತರೆ 2 ಬಂದಿತ್ತು. ಜನವರಿ 2018ರ ಸಮೀಕ್ಷೆಯಂತೆ ಕಮಲ ಪಾಳಯಕ್ಕೆ 5 ಹೆಚ್ಚುವತಿ ಸ್ಥಾನ ಸಿಗಲಿದ್ದು, ಯುಪಿಎ 4 ಸ್ಥಾನ ಕಳೆದುಕೊಳ್ಳಲಿದೆ. ಇತರೆ ಪಕ್ಷಗಳು 1 ಸ್ಥಾನ ಕಳೆದುಕೊಳ್ಳಲಿವೆ.

English summary
Republic C Voter Survey #NationalApprovalRatings projection for Karnataka is out. NDA to gain 5 more seats vs 2014; UPA loses 4 seats vs 2014 Vote share projection
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X