ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 3ನೇ ಸ್ಟೇಜಿನಲ್ಲಿದೆಯೆ?: ಭಯಬೇಡ ಎಂದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಮಾರ್ಚ್ 29: ಭಾರತದಲ್ಲಿ ಕೊರೊನಾ ವೈರಸ್ ಭೀಕರತೆಯ 3ನೇ ಹಂತ ತಲುಪಿದೆ. ದೇಶದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಈ ರೀತಿ ಸುದ್ದಿಯಿಂದ ಸಮೂಹಸನ್ನಿ ಉಂಟಾಗಿ ಆತಂಕ ಹೆಚ್ಚಾಗಲಿದೆ. ಈ ಬಗ್ಗೆ ಆತಂಕ ಬೇಡ ಎಂದಿದೆ.

ಮುಂದಿನ 5-10 ದಿನ ನಿರ್ಣಾಯಕ, ಕೊರೊನಾ ಕಡಿಮೆಯಾಗುವ ಹಂತಕ್ಕೆ ಬಂದಿದೆಯೇ ಅಥವಾ ಇನ್ನೂ ಹೆಚ್ಚಾಗುತ್ತದೋ ಎಂದು ತಿಳಿಯುವ ಸಮಯ ಇದಾಗಿದೆ. ಆದರೆ ಮುಂದಿನ ಒಂದು ವಾರ ತುಂಬಾ ಜಾಗರೂಕರಾಗಿರಬೇಕು ಎಂದು ಸರ್ಕಾರ ನಿರ್ಮಿಸಿರುವ ಟಾಸ್ಕ್ ಫೋರ್ಸ್ ಮುಖ್ಯಸ್ಥ ಡಾ. ಗಿರಿಧರ್ ಗ್ಯಾನಿ ಎಚ್ಚರಿಕೆ ನೀಡಿದ್ದಾರೆ.

ಕೊರೊನಾದ 3ನೇ ಹಂತದಲ್ಲಿ ಭಾರತ: 5-10 ದಿನ ತುಂಬಾ ಎಚ್ಚರದಿಂದಿರಿಕೊರೊನಾದ 3ನೇ ಹಂತದಲ್ಲಿ ಭಾರತ: 5-10 ದಿನ ತುಂಬಾ ಎಚ್ಚರದಿಂದಿರಿ

ವಿದೇಶದಿಂದ ವ್ಯಕ್ತಿಯ ಸಂಪರ್ಕವಿಲ್ಲದೆ, ವಿದೇಶಕ್ಕೆ ತೆರಳಿದ ಹಿಸ್ಟರಿ ಇಲ್ಲದವರಿಗೂ ಕಮ್ಯೂನಿಟಿ ಸಂಪರ್ಕ ಮೂಲಕ ಕೊರೊನಾ ಹಬ್ಬಲು ಆರಂಭಿಸಿದೆ ಎಂಬ ಸುದ್ದಿ ಎಲ್ಲೆಡೆ ಹರಡುತ್ತಿದೆ. ಆದರೆ, ಇದು ದಿಕ್ಕು ತಪ್ಪಿಸಲಿದೆ ಎಂದು ವಾರ್ತಾ ಇಲಾಖೆ ಸ್ಪಷ್ಟಪಡಿಸಿದೆ. ಆದರೆ, ಸೋಷಿಯಲ್ ಡಿಸ್ಟಂಸಿಂಗ್ ಕಾಪಾಡಿಕೊಳ್ಳದಿದ್ದರೆ ಅಪಾಯ ನಿಮ್ಮ ಮನೆ ಬಾಗಿಲು ತಟ್ಟಲಿದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.

Reports claiming India has entered Stage 3 of coronavirus is misleading says Govt

ಮಾರ್ಚ್ 24ರಂದು ಪ್ರಧಾನಿ ಮೋದಿಯವರೊಂದಿಗೆ ನಡೆದ ವಿಡಿಯೋ ಸಂವಾದದ ಬಳಿಕ ಕೊವಿಡ್ 19 ಹಾಸ್ಪಿಟರ್ ಟಾಸ್ಕ್ ಫೋರ್ಸ್ ಆರಂಭವಾಯಿತು. ನೀತಿ ಆಯೋಗವು ಈ ಟಾಸ್ಕ್ ಫೋರ್ಸ್ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದೆ. ಟಾಸ್ಕ್ ಫೋರ್ಸ್ ಮುಖ್ಯಸ್ಥರು ನೀಡಿದ ಹೇಳಿಕೆ, ಮಾಧ್ಯಮಗಳ ವರದಿಯಿಂದ ಅನೇಕರಿಗೆ ಆತಂಕ ಉಂಟಾಗಿತ್ತು.

ಮೂರನೇ ಹಂತ ತಲುಪುತ್ತಿದೆ ಕೊರೊನಾ; ಆಸ್ಪತ್ರೆ ಆದವು ರೈಲ್ವೆ ಬೋಗಿ!ಮೂರನೇ ಹಂತ ತಲುಪುತ್ತಿದೆ ಕೊರೊನಾ; ಆಸ್ಪತ್ರೆ ಆದವು ರೈಲ್ವೆ ಬೋಗಿ!

ಆದರೆ, ಭಾರತೀಯ ಮೆಡಿಕಲ್ ಸಂಶೋಧನಾ ಕೌನ್ಸಿಲ್(ಐಸಿಎಂಆರ್) ಹಾಗೂ ಆರೋಗ್ಯ ಇಲಾಖೆಯು ಸಾಮಾಜಿಕ ಸಂಪರ್ಕ ಮೂಲಕ ಕೊರೊನಾವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ.

English summary
Has the community transmission of coronavirus begun in India? Many reports have stated that India may be in stage 3 of the outbreak. The government says that these reports are misleading and amount to scaremongering.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X