ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮತ್ತೆ 2 ಚೀನಾ ಕಂಪನಿಗಳ ನಿಷೇಧಕ್ಕೆ ಸಿದ್ಧತೆ

|
Google Oneindia Kannada News

ನವದೆಹಲಿ,ಮಾರ್ಚ್ 12: ಚೀನಾಗೆ ಮತ್ತೊಂದು ಶಾಕ್ ನೀಡಲು ಭಾರತ ಮುಂದಾಗಿದೆ. ಭದ್ರತಾ ಕಾರಣಗಳಿಂದಾಗಿ, ಚೀನಾ ಕಂಪನಿ ಹುವೈಯನ್ನು ನಿಷೇಧಿಸಲು ಸರ್ಕಾರ ಸಿದ್ಧತೆ ನಡೆಸಿದ್ದು ಜೂನ್ ವೇಳೆಗೆ ಇದನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಚೀನಾ ಆರ್ಥಿಕ ರಂಗದಲ್ಲಿ ಭಾರಿ ನಷ್ಟವನ್ನು ಅನುಭವಿಸುತ್ತದೆ. ಯಾಕೆಂದರೆ ಲಡಾಖ್ ಹಿಂಸಾಚಾರದ ನಂತರ ಭಾರತ ಈಗಾಗಲೇ ಇದರ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ.

ಭಾರತದಲ್ಲಿ ಮತ್ತೆ 47 ಚೀನಾ ಆ್ಯಪ್ ಗಳ ನಿಷೇಧಭಾರತದಲ್ಲಿ ಮತ್ತೆ 47 ಚೀನಾ ಆ್ಯಪ್ ಗಳ ನಿಷೇಧ

ಭಾರತೀಯ ಮೊಬೈಲ್ ಕಂಪನಿಗಳು ಹುವೈ ತಯಾರಿಸಿದ ದೂರಸಂಪರ್ಕ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಲಾಗುವುದು ಎಂದು ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚೀನಾ ಕಂಪನಿಗಳ ಮೇಲೆ ಹೊರಿಸಲಾದ ಆರೋಪಗಳು

ಚೀನಾ ಕಂಪನಿಗಳ ಮೇಲೆ ಹೊರಿಸಲಾದ ಆರೋಪಗಳು

ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುವ ಹೂಡಿಕೆಗಳನ್ನು ನಿಷೇಧಿಸಬೇಕು ಎಂದು ಸರ್ಕಾರ ನಂಬುತ್ತದೆ ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು, ಚೀನಾದ ಕಂಪನಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧ ಆರಂಭಿಸಿದೆ. ಅದೇ ಸಮಯದಲ್ಲಿ, ಚೀನಾದ ಕಂಪನಿ ಜಡ್‌ಟಿಇ ಕಾರ್ಪ್ (ZTE Corp) ಅನ್ನು ಸಹ ನಿಷೇಧಿಸಬಹುದು ಎಂದು ಮತ್ತೊಬ್ಬ ಅಧಿಕಾರಿ ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದರು.

ಸರ್ಕಾರ ಚೀನಾ ಕಂಪನಿ ನಿಷೇಧಿಸುವ ಮನಸ್ಥಿತಿಯಲ್ಲಿದೆ

ಸರ್ಕಾರ ಚೀನಾ ಕಂಪನಿ ನಿಷೇಧಿಸುವ ಮನಸ್ಥಿತಿಯಲ್ಲಿದೆ

ಜೂನ್ 15 ರ ನಂತರ, ಮೊಬೈಲ್ ಕ್ಯಾರಿಯರ್ ಕಂಪನಿಯು ಸರ್ಕಾರವು ಅನುಮೋದಿಸಿದ ಕಂಪನಿಗಳಿಂದ ಮಾತ್ರ ಕೆಲವು ಸ್ಥಿರ ಸಾಧನಗಳನ್ನು ಖರೀದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಅಷ್ಟೇ ಅಲ್ಲ, ಯಾವ ಉಪಕರಣಗಳನ್ನು ಖರೀದಿಸಬಾರದು ಎಂಬ ಕಂಪನಿಗಳ ಪಟ್ಟಿಯನ್ನು ಸಹ ಸರ್ಕಾರ ನೀಡಬಹುದು.
ಭದ್ರತಾ ಕಾಳಜಿ ಮತ್ತು ಹೆಚ್ಚಿನ ಟೆಲಿಕಾಂ ಉಪಕರಣಗಳನ್ನು ತಯಾರಿಸುವ ಭಾರತೀಯ ತಯಾರಕರ ಬಯಕೆಯನ್ನು ಗಮನದಲ್ಲಿಟ್ಟುಕೊಂಡು ಚೀನಾ ಕಂಪನಿಯನ್ನು ನಿಷೇಧಿಸುವ ಮನಸ್ಥಿತಿಯಲ್ಲಿ ಸರ್ಕಾರವಿದೆ ಎಂದು ಹೇಳಲಾಗಿದೆ.

ನಿರ್ಬಂಧ ತೆಗೆದುಹಾಕುವುದಿಲ್ಲ

ನಿರ್ಬಂಧ ತೆಗೆದುಹಾಕುವುದಿಲ್ಲ

ಕಳೆದ ವರ್ಷ 100 ಕ್ಕೂ ಹೆಚ್ಚು ಚೀನಾ ಮೊಬೈಲ್ ಆ್ಯಪ್‌ಗಳ ಮೇಲಿನ ನಿಷೇಧವನ್ನು ತೆಗೆದುಹಾಕುವ ಅಥವಾ ಚೀನಾದ ಕಂಪೆನಿಗಳಿಗೆ ಏರ್ ಇಂಡಿಯಾ ಮತ್ತು ಭಾರತ್ ಪೆಟ್ರೋಲಿಯಂನಂತಹ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡಲು ಅವಕಾಶ ನೀಡುವ ಮನಸ್ಥಿತಿಯಲ್ಲಿಲ್ಲ ಎಂದು ಅವರು ಹೇಳಿದರು.

ಚೀನಾ ಹೂಡಿಕೆ ಪ್ರಸ್ತಾಪಗಳಿಗೆ ಅನುಮೋದನೆ

ಚೀನಾ ಹೂಡಿಕೆ ಪ್ರಸ್ತಾಪಗಳಿಗೆ ಅನುಮೋದನೆ

ನಾವು ಚೀನಾದಿಂದ ಹೂಡಿಕೆ ಪ್ರಸ್ತಾಪಗಳಿಗೆ ಸ್ವಲ್ಪ ಅನುಮೋದನೆ ನೀಡಲು ಪ್ರಾರಂಭಿಸಿದ್ದೇವೆ, ಆದರೆ ಟೆಲಿಕಾಂ ಇನ್ಫ್ರಾಸ್ಟ್ರಕ್ಚರ್ ಮತ್ತು ಫೈನಾನ್ಷಿಯಲ್ ಮುಂತಾದ ಕ್ಷೇತ್ರಗಳಲ್ಲಿ ನಾವು ಯಾವುದೇ ಅನುಮೋದನೆ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
The centre is likely to block mobile carriers in the country from using telecom equipment made by China's Huawei, two government officials said, under procurement rules due to come into force in June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X