ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 23ರವರೆಗೂ ರೆಮ್‌ಡೆಸಿವಿರ್ ಹಂಚಿಕೆ: ಸಚಿವ ಡಿ ವಿ ಸದಾನಂದಗೌಡ

|
Google Oneindia Kannada News

ನವದೆಹಲಿ, ಮೇ 16: ಭಾರತದಲ್ಲಿ ಆಯಾ ರಾಜ್ಯಗಳ ಅಗತ್ಯಗೆ ಅನುಗುಣವಾಗಿ ರೆಮ್‌ಡೆಸಿವಿರ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮೇ 23ರವರೆಗೂ ಲಸಿಕೆ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದಗೌಡ ತಿಳಿಸಿದ್ದಾರೆ.

ಕಳೆದ ಏಪ್ರಿಲ್ 21 ರಿಂದ ಮೇ 16ರವರೆಗೂ ರೆಮ್‌ಡೆಸಿವಿರ್ ಲಸಿಕೆಯನ್ನು ಹಂಚಿಕೆ ಮಾಡಲಾಗಿದ್ದು, ಇದೊಂದು ನಿರಂತರ ಹಂಚಿಕೆ ಯೋಜನೆಯಾಗಿದೆ ಎಂದು ಎಲ್ಲ ರಾಜ್ಯಗಳ ಔಷಧಿ, ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಗಳಿಗೆ ಸಚಿವರು ಪತ್ರ ಬರೆದಿದ್ದಾರೆ.

ಕೊವಿಡ್ 19 ಸೋಂಕಿತರಿಗೆ ಬೆಡ್, ಆಕ್ಸಿಜನ್ ರೆಮ್‌ಡೆಸಿವಿರ್ ಎಲ್ಲಿ ಸಿಗುತ್ತೆ?ಕೊವಿಡ್ 19 ಸೋಂಕಿತರಿಗೆ ಬೆಡ್, ಆಕ್ಸಿಜನ್ ರೆಮ್‌ಡೆಸಿವಿರ್ ಎಲ್ಲಿ ಸಿಗುತ್ತೆ?

ರೆಮ್‌ಡೆಸಿವಿರ್ ಲಸಿಕೆಯ ಹಂಚಿಕೆ ಪ್ರಮಾಣವನ್ನು ಮೇ 7ರಂದು ಹೆಚ್ಚಿಸಲಾಗಿದೆ. ಅದೇ ಪ್ರಮಾಣದ ರೆಮ್‌ಡೆಸಿವಿರ್ ಅನ್ನು ಮೇ 23ರವರೆಗೂ ಹಂಚಿಕೆ ಮಾಡುವುದಕ್ಕೆ ಯೋಜನೆ ಚಾಲ್ತಿಯಲ್ಲಿ ಇರಲಿದೆ. ಈ ಹಿನ್ನೆಲೆ ಔಷಧ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಜಂಟಿಯಾಗಿ ಸಿದ್ಧಪಡಿಸಿದೆ.

 Remdesivir Allocation To States To Ensure Availability Till May 23rd: Minister D V Sadananda Gowda

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ:

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೂಕ್ತ ಪ್ರಮಾಣದಲ್ಲಿ ವಿತರಣೆ ಮತ್ತು ನ್ಯಾಯಯುತ ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಹಾಗೂ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೇಲ್ವಿಚಾರಣ ಮಾಡುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಖರೀದಿ ಮಾಡಲು ತಕ್ಷಣವೇ ಮಾರುಕಟ್ಟೆ ಕಂಪೆನಿಗಳಿಗೆ ಬೇಡಿಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಸೂಕ್ತ ಖರೀದಿ ಬೇಡಿಕೆ ಸಲ್ಲಿಸದಿದ್ದರೆ ಕಂಪೆನಿಗಳ ಸಂಪರ್ಕ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಪೂರೈಕೆ ರೀತಿಯಲ್ಲಿ ಹೊರಗಡೆ ಖರೀದಿಸಬಹುದಾಗಿದೆ. ರಾಜ್ಯದ ಖಾಸಗಿ ವಿತರಣಾ ಮಾರ್ಗದ ಸಮನ್ವಯದೊಂದಿಗೆ ಖರೀದಿಸಬಹುದಾಗಿದೆ.

English summary
Remdesivir Allocation To States To Ensure Availability Till May 23rd: Minister D V Sadananda Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X