ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುರ್ತು ಸಂದರ್ಭದಲ್ಲಿ ಬಳಸುವ ಕೊರೊನಾ ಔಷಧಿ ಬೆಲೆ ಇಳಿಕೆ

|
Google Oneindia Kannada News

ಅಹಮದಾಬಾದ್, ಆ. 13: ಭಾರತದಲ್ಲಿ ಕೊರೊನಾವೈರಸ್‌ಗೆ ಲಸಿಕೆ ಕಂಡುಹಿಡಿಯಲು ನಾನಾ ಫಾರ್ಮಾ ಕಂಪನಿಗಳು ಪ್ರಯತ್ನಿಸುತ್ತಿವೆ. ಇದರ ನಡುವೆ ದೇಶದಲ್ಲಿ ಕೊರೊನಾವೈರಸ್‌ ಸೋಂಕಿನಿಂದ ಬಳಲುತ್ತಿರುವವರಿಗೆ ಮೇಲೆ ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ಪಡೆದಿರುವ ರೆಮ್‌ಡೆಸಿವಿರ್ ಜನರಿಕ್ ಔಷಧದ ಬೆಲೆಯನ್ನು ತಗ್ಗಿಸಲಾಗಿದೆ.

Recommended Video

Corona vaccine ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ | Oneindia Kannada

ಅಹಮದಾಬಾದ್ ಮೂಲದ ಜೈಡುಸ್ ಕ್ಯಾಡಿಲಾ ಹೆಲ್ತ್‌ಕೇರ್ (Zydus Cadila Healthcare) ಲಿಮಿಟೆಡ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರೆಮ್‌ಡೆಸಿವಿರ್ ಜನರಿಕ್ ಔಷಧವನ್ನು ಮಾನವರ ಮೇಲೆ ಪ್ರಯೋಗ ಮಾಡಲು ಕೂಡಾ ಡಿಸಿಜಿಐ (ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ನಿಂದ ಅನುಮೋದನೆ ಸಿಕ್ಕಿದೆ.

ಕೊವಿಡ್19: ಜುಲೈ ತಿಂಗಳಲ್ಲಿ ರೆಮ್‌ಡೆಸಿವಿರ್ ಮಾರಾಟ, ಬೆಲೆ 4800 ರೂ!ಕೊವಿಡ್19: ಜುಲೈ ತಿಂಗಳಲ್ಲಿ ರೆಮ್‌ಡೆಸಿವಿರ್ ಮಾರಾಟ, ಬೆಲೆ 4800 ರೂ!

ಆದರೆ, ರೆಮ್‌ಡೆಸಿವಿರ್ ಜನರಿಕ್ ಔಷಧ ವಿವಿಧ ಫಾರ್ಮಾ ಕಂಪನಿಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬೇರೆ ಬೇರೆ ಬೆಲೆ ಇದೆ. ಇತ್ತೀಚೆಗೆ ಔಷಧ ದಾಸ್ತಾನು ಕಡಿಮೆ, ಬೆಲೆ ಹೆಚ್ಚಳದ ಬಗ್ಗೆ ಸುದ್ದಿಯಾಗಿತ್ತು.

Remdac: Zydus Cadilla launches India cheapest coronavirus medicine Remdesivir

ಇದನ್ನು ಮನಗಂಡ ಜೈಡುಸ್ ಕ್ಯಾಡಿಲಾ ಹೆಲ್ತ್‌ಕೇರ್, ತನ್ನ ಸಂಸ್ಥೆಯಿಂದ ಹೊರ ತಂದಿರುವ ರೆಮ್‌ಡೆಸಿವಿರ್ ಜನರಿಕ್ ಔಷಧ ಆಧಾರಿತ Remdac ಬೆಲೆ ಇಳಿಕೆ ಮಾಡಿದೆ. 100 ಗ್ರಾಂ ವೈಲ್(vial) ಗೆ 2,800 ರು ಎಂದು ಜೈಡುಸ್ ಬೆಲೆ ನಿಗದಿ ಮಾಡಿದೆ. ರೆಮ್‌ಡೆಸಿವಿರ್ ಜನರಿಕ್ ಔಷಧ ಆಧಾರಿತ ಔಷಧಗಳ ಪೈಕಿ ಇದೇ ಅತ್ಯಂತ ಕಡಿಮೆ ಬೆಲೆಯದ್ದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಡಾ. ಶಾರ್ವಿಲ್ ಪಟೇಲ್ ಹೇಳಿದ್ದಾರೆ.

ಇನ್ನೊಂದೆಡೆ, ಸಿಪ್ಲಾ ಮತ್ತು ಹೆಟೆರೊ ಸಂಸ್ಥೆಗಳು ಈಗಾಗಲೇ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಕೋವಿಡ್ -19 ಚಿಕಿತ್ಸೆಗಾಗಿ ರೆಮ್‌ಡೆಸಿವಿರ್ ತಯಾರಿಸಲು ಮತ್ತು ಮಾರುಕಟ್ಟೆ ಮಾಡಲು ಅನುಮತಿ ಪಡೆದಿದೆ.

ಈ ಔಷಧವನ್ನು ಭಾರತದಲ್ಲಿ ಡೆಸ್ರೆಮ್ ಎಂಬ ಬ್ರಾಂಡ್ ಹೆಸರಿನಲ್ಲಿ ಬಿಡುಗಡೆ ಮಾಡಲಾಗುವುದು ಮತ್ತು 100 ಮಿಗ್ರಾಂ ಬಾಟಲಿಗೆ, 4,800 ದರದಲ್ಲಿ ಲಭ್ಯವಿರುತ್ತದೆ. ಅಂದಾಜು ಐದು ದಿನಗಳ ಚಿಕಿತ್ಸೆಯ ವೆಚ್ಚ ಸುಮಾರು 20,000 ಮತ್ತು 30,000 ಆಗುತ್ತದೆ.

ಮೈಲಾನ್ ಮತ್ತು ಗಿಲ್ಯಾಡ್ ಸೈನ್ಸಸ್ ಸಂಸ್ಥೆಗಳು ಅನೇಕ ವರ್ಷಗಳಿಂದ ಸಹಭಾಗಿತ್ವವನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಔಷಧಿಗಳನ್ನು ಸಾರ್ವಜನಿಕ ವಲಯಕ್ಕೆ ಪರಿಚಯಿಸುತ್ತಿದೆ. ವಿಶ್ವದಾದ್ಯಂತ ಎಚ್ಐವಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ಪ್ರಮಾಣವನ್ನು ಕಡಿಮೆ ಮಾಡಲು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ" ಎಂದು ಮೈಲಾನ್ ಅಧ್ಯಕ್ಷ ರಾಜೀವ್ ಮಲಿಕ್ ಹೇಳಿದ್ದಾರೆ.

English summary
Cadila Health's Zydus Cadila on Thursday launched the cheapest generic version of Gilead Sciences’ antiviral drug in India, to treat COVID-19. Called as Remdac (Remdesivir), the drug has been launched following reports of shortages at drugs at various hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X