ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಧರ ಪತ್ನಿಯರ ಶೀಲದ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದ ಶಾಸಕ ಸಸ್ಪೆಂಡ್

ಭಾರತೀಯ ಯೋಧರ ಪತ್ನಿಯರ ಶೀಲದ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದ ಬಿಜೆಪಿ ಬೆಂಬಲಿತ ಮಹಾರಾಷ್ಟ್ರ ವಿಧಾನ ಪರಿಷತ್ ನ ಪಕ್ಷೇತರ ಸದಸ್ಯ ಪ್ರಶಾಂತ್ ಪರಿಚಾರಕ್ ರನ್ನು ಒಂದೂವರೆ ವರ್ಷ ಕಾಲ ಅಮಾನತು ಮಾಡಲಾಗಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 9: ಭಾರತೀಯ ಯೋಧರ ಪತ್ನಿಯರ ಶೀಲದ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದ ಬಿಜೆಪಿ ಬೆಂಬಲಿತ ಮಹಾರಾಷ್ಟ್ರ ವಿಧಾನ ಪರಿಷತ್ ನ ಪಕ್ಷೇತರ ಸದಸ್ಯ ಪ್ರಶಾಂತ್ ಪರಿಚಾರಕ್ ರನ್ನು ಒಂದೂವರೆ ವರ್ಷ ಕಾಲ ಅಮಾನತು ಮಾಡಲಾಗಿದೆ.

ಫೆಬ್ರವರಿ 18ರಂದು ತನ್ನ ಜಿಲ್ಲೆ ಪಂಢರಾಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಶಾಂತ್ ಪರಿಚಾರಕ್, " ಇಡೀ ವರ್ಷ ತಾವು ಮನೆಗೆ ವಾಪಸಾಗದೇ ಇದ್ದರೂ ತಮಗೆ ಮಕ್ಕಳಾದರೆ, ಯೋಧರು ಪಂಜಾಬ್ ಗಡಿಯಲ್ಲಿ ಸಿಹಿ ಹಂಚುತ್ತಾರೆ," ಎಂಬ ವಿವಾದಾತ್ಮಕ ಹೇಳಿಕೆ ನಿಡಿದ್ದರು.[ಬರದ ನಾಡಲ್ಲಿ 'ಭರ್ಜರಿ' ಮದುವೆ ಮಾಡಿದ ಬಿಜೆಪಿ 'ಮಹಾ' ಅಧ್ಯಕ್ಷ]

Remarks on wives of army soldiers, Maharashtra MLC suspended

ಈ ಹೇಳಿಕೆಗೆ ಎಲ್ಲೆಡೆಯಿಂದ ಟೀಕೆಗಳು ಕೇಳಿ ಬಂದಿತ್ತು. ಸ್ವತಃ ಬಿಜೆಪಿಯೇ ಈ ಹೇಳಿಕೆಯನ್ನು ಖಂಡಾತುಂಡವಾಗಿ ಖಂಡಿಸಿತ್ತು.

ನಂತರ ಸಮಜಾಯಿಷಿ ನೀಡಿದ್ದ ಪ್ರಶಾಂತ್ ಪರಿಚಾರಕ್, "ಯೋಧನಿಗೆ ಅಗೌರವ ತೋರುವುದು ನನ್ನ ಉದ್ದೇಶವಾಗಿರಲಿಲ್ಲ. ವೈಯುಕ್ತಿಕವಾಗಿ ಯೋಧರು ಮತ್ತು ಅವರ ಕುಟುಂಬದ ಬಗ್ಗೆ ನನಗೆ ಗೌರವವಿದೆ. ನಾನು ಹಾಗೆ ಮಾತನಾಡಿದ್ದು ತಪ್ಪು. ಇದರಿಂದ ನಾನು ಯೋಧರ ಭಾವನೆಗಳಿಗೆ ನೋಟುಂಟು ಮಾಡಿದ್ದರೆ ಪ್ರಾಮಾಣಿಕವಾಗಿ ಕ್ಷಮೆಯನ್ನು ಕೋರುತ್ತೇನೆ," ಎಂದು ಹೇಳಿದ್ದರು.[ಶಿವಸೇನಾದ ವಿಶ್ವನಾಥ್ ಮಹದೇಶ್ವರ್ ಮುಂಬೈ ಮೇಯರ್]

ಏನೇ ಹೇಳಿದರೂ ಈಗ ಪರಿಚಾರಕ್ ರನ್ನು ಒಂದೂವರೆ ವರ್ಷ ಕಾಲ ಶಾಸಕ ಸ್ಥಾನದಿಂದ ಅಮಾನತು ಮಾಡಲಾಗಿದೆ. ರಾಜಕಾರಣದಲ್ಲಿ ಬೇಕೆಂದ ಹಾಗೆ ನಾಲಗೆ ಹರಿಯಬಿಡುವವರಿಗೆ ಇದೊಂದು ಎಚ್ಚರಿಕೆಯ ಪಾಠವೇ ಸರಿ.

English summary
BJP backed Independent MLC Prashant Paricharak of Maharashtra suspended for 1.5 years for his remarks on wives of army soldiers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X