ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುತ್ತಿಗೆದಾರರಿಗೆ ತಾತ್ಕಾಲಿಕ ನೆಮ್ಮದಿ ನೀಡಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಮೇ 13 : ಕೊರೊನಾ ಲಾಕ್ ಡೌನ್ ಪರಿಣಾಮ ಕಾರ್ಮಿಕರ ಮೇಲೆ ಭಾರೀ ಪ್ರಭಾವ ಬೀರಿದೆ. ವಿವಿಧ ರಾಜ್ಯಗಳಲ್ಲಿ ಇದ್ದ ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಇದರಿಂದಾಗಿ ನಿರ್ಮಾಣ ಕ್ಷೇತ್ರಕ್ಕೆ ಸಂಕಷ್ಟ ಎದುರಾಗಿದೆ.

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವಿಧ ಕೇಂದ್ರ ಸರ್ಕಾರದ ವಿವಿಧ ಯೋಜನೆಯ ಕಾಮಗಾರಿಗಳ ಗುತ್ತಿಗೆ ಕೈಗೊಂಡಿರುವವರಿಗೆ ತಾತ್ಕಾಲಿಕ ನೆಮ್ಮದಿ ನೀಡುವ ಘೋಷಣೆಗಳನ್ನು ಮಾಡಿದರು.

3 ತಿಂಗಳು ಇಪಿಎಫ್ ಸರ್ಕಾರ ತುಂಬಲಿದೆ; ಷರತ್ತುಗಳು ಅನ್ವಯ 3 ತಿಂಗಳು ಇಪಿಎಫ್ ಸರ್ಕಾರ ತುಂಬಲಿದೆ; ಷರತ್ತುಗಳು ಅನ್ವಯ

ಕೇಂದ್ರ ಸರ್ಕಾರದ ವಿವಿಧ ಕಾಮಗಾರಿಗಳ ಗುತ್ತಿಗೆ ಪಡೆದವರಿಗೆ ತಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಇನ್ನೂ ಆರು ತಿಂಗಳ ಅವಕಾಶ ನೀಡಲಾಗಿದೆ. ಆದರೆ, ಈ ಅವಧಿಗೆ ಗುತ್ತಿಗೆದಾರರು ಯಾವುದೇ ಹಣವನ್ನು ಪಾವತಿ ಮಾಡಬೇಕಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸಣ್ಣ ಕೈಗಾರಿಕೆಗಳಿಗೆ ಸಾಲ; ಮರುಪಾವತಿಗೆ 4 ವರ್ಷ ಅವಕಾಶ ಸಣ್ಣ ಕೈಗಾರಿಕೆಗಳಿಗೆ ಸಾಲ; ಮರುಪಾವತಿಗೆ 4 ವರ್ಷ ಅವಕಾಶ

Relief To Contractors Extension Of 6 Months To Complete Work

"ರೈಲು, ರಸ್ತೆ ಮತ್ತು ಭೂ ಸಾರಿಗೆ, ರಾಷ್ಟ್ರೀಯ ಹೆದ್ದಾರಿ, ಕೇಂದ್ರದ ಮೂಲ ಸೌಕರ್ಯಗಳ ಯೋಜನೆ ಗುತ್ತಿಗೆ ಪಡೆದವರು ಕಾಮಗಾರಿಗಳನ್ನು ಪೂರ್ಣಗೊಳಿಸಲು ಇನ್ನೂ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ" ಎಂದು ಹಣಕಾಸು ಸಚಿವರು ಹೇಳಿದರು.

ದೇಶಿ ಉದ್ಯಮಕ್ಕೆ ಬೆಂಬಲ; ಸರ್ಕಾರಿ ಖರೀದಿಯಲ್ಲಿ ಜಾಗತಿಕ ಟೆಂಡರ್ ಇಲ್ಲ ದೇಶಿ ಉದ್ಯಮಕ್ಕೆ ಬೆಂಬಲ; ಸರ್ಕಾರಿ ಖರೀದಿಯಲ್ಲಿ ಜಾಗತಿಕ ಟೆಂಡರ್ ಇಲ್ಲ

ಕಾಮಗಾರಿ ಪೂರ್ಣಗೊಳಿಸುವ ಅವಧಿ ವಿಸ್ತರಣೆ ಮಾಡಿದ್ದಕ್ಕೆ ಗುತ್ತಿಗೆದಾರರು ಯಾವುದೇ ಹಣವನ್ನು ಹೆಚ್ಚಾಗಿ ಪಾವತಿ ಮಾಡಬೇಕಿಲ್ಲ. ಇದು ನಿರ್ಮಾಣ,ಗೂಡ್ಸ್ ಮತ್ತು ಸೇವಾ ಗುತ್ತಿಗೆದಾರರಿಗೂ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ.

ಕೊರೊನಾ ಪರಿಸ್ಥಿತಿಯನ್ನ ನೈಸರ್ಗಿಕ ವಿಕೋಪ ಎಂದು ಪರಿಗಣಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಲಿದೆ. ಇದರಿಂದಾಗಿ ಕಾಮಗಾರಿಗಳು ವಿಳಂಬವಾದರೆ ದಂಡ ವಿಧಿಸುವಂತಿಲ್ಲ ಎಂದು ನಿರ್ದೇಶನ ನೀಡಲಾಗುತ್ತದೆ.

ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ಮರಳಿರುವುದರಿಂದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ರೈಲು, ಮೆಟ್ರೋ ಸೇರಿದಂತೆ ಸರ್ಕಾರದ ಕಾಮಗಾರಿಗಳು ವಿಳಂಬವಾಗಲಿವೆ.

English summary
In his announcement finance minister Nirmala Sitharaman said that contractors all central agencies to provide an extension of up to 6 months, without cost to the contractor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X