ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನ ಮಾಲೀಕರಿಗೆ ತಾತ್ಕಾಲಿಕ ನೆಮ್ಮದಿ: ಫಾಸ್ಟ್ಯಾಗ್ ಕಡ್ಡಾಯ ಸದ್ಯಕ್ಕಿಲ್ಲ

|
Google Oneindia Kannada News

ನವದೆಹಲಿ, ಡಿಸೆಂಬರ್ 14: ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಎಲ್ಲ ಸುಂಕದ ಫ್ಲಾಜಾಗಳಲ್ಲಿ ಸಾಗುವ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯದ ಗಡುವನ್ನು ಮತ್ತೆ ವಿಸ್ತರಿಸಲಾಗಿದೆ. ಇದರಿಂದ ವಾಹನ ಮಾಲೀಕರಿಗೆ ಸದ್ಯಕ್ಕೆ ನೆಮ್ಮದಿ ದೊರೆತಂತಾಗಿದೆ.

ಡಿ. 1ರಿಂದ ಅನ್ವಯವಾಗುವಂತೆ ದೇಶದಾದ್ಯಂತ ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಎಲ್ಲ ಟೋಲ್ ಪ್ಲಾಜಾಗಳಲ್ಲಿಯೂ ವಾಹನಗಳು ವಿದ್ಯುನ್ಮಾನ ಸುಂಕ ಪಾವತಿಗೆ ಅನುಕೂಲವಾಗುವಂತೆ ಫಾಸ್ಟ್ಯಾಗ್ ಹೊಂದುವುದನ್ನು ಕಡ್ಡಾಯಗೊಳಿಸಲಾಗಿತ್ತು. ಬಳಿಕ ಅದನ್ನು ಡಿ. 15ಕ್ಕೆ ವಿಸ್ತರಿಸಲಾಗಿತ್ತು. ಈಗ ಆ ಗಡುವು ಅಂತ್ಯಗೊಳ್ಳುವ ಒಂದು ದಿನ ಮುಂಚೆಯಷ್ಟೇ ಒಂದು ತಿಂಗಳ ಅವಧಿವರೆಗೆ ಗಡುವನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ಸ್ಟಿಕ್ಕರ್‌ಗಳ ಪೂರೈಕೆಯ ಕೊರತೆಯಿಂದಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಸುಂಕದ ಪ್ಲಾಜಾಗಳಲ್ಲಿನ ಎಲ್ಲ ಲೇನ್‌ಗಳನ್ನೂ ಫಾಸ್ಟ್ಯಾಗ್ ಲೇನ್‌ಗಳನ್ನಾಗಿ ಪರಿವರ್ತಿಸಲು 45 ದಿನಗಳ ಹೆಚ್ಚುವರಿ ಸಮಯ ನೀಡುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆದಿದೆ.

ಚಿಪ್ ಆಮದು ವಿಳಂಬ

ಚಿಪ್ ಆಮದು ವಿಳಂಬ

ಡಿ. 15ರವರೆಗೂ ಟ್ಯಾಗ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಇದರಿಂದ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ ಎಂದು ಪ್ರಾಧಿಕಾರ ಪತ್ರದಲ್ಲಿ ತಿಳಿಸಿದೆ.

ಆರ್‌ಎಫ್‌ಐಡಿಯಲ್ಲಿ ಬಳಸಲಾಗುವ ಚಿಪ್ ಅನ್ನು ಆಮದು ಮಾಡಿಕೊಳ್ಳಲಾಗಿದ್ದು, ಅದರ ಪೂರೈಕೆಗೆ ಆರು ವಾರಗಳ ಸಮಯ ಬೇಕಾಗುತ್ತದೆ. ಎಲ್ಲ ತಯಾರಕರ ಒಟ್ಟಾರೆ ಸರಾಸರಿ ಉತ್ಪಾದನಾ ಸಾಮರ್ಥ್ಯವು ದಿನಕ್ಕೆ 30 ರಿಂದ 50 ಸಾವಿರದವರೆಗೆ ಇರುತ್ತದೆ.

FASTag ಸಂಪೂರ್ಣ ಸುರಕ್ಷಿತವೇ? ಅದರ ಅನನುಕೂಲಗಳೇನು?FASTag ಸಂಪೂರ್ಣ ಸುರಕ್ಷಿತವೇ? ಅದರ ಅನನುಕೂಲಗಳೇನು?

ಜನರಿಗೆ ಫಾಸ್ಟ್ಯಾಗ್ ಸಿಗುತ್ತಿಲ್ಲ

ಜನರಿಗೆ ಫಾಸ್ಟ್ಯಾಗ್ ಸಿಗುತ್ತಿಲ್ಲ

ಬ್ಯಾಂಕ್‌ಗಳು ಮತ್ತು ಇತರೆ ಫಾಸ್ಟ್ಯಾಗ್ ಮಾರಾಟ ಪೂರೈಕೆದಾರರು ಉತ್ಪಾದನಾ ಸಾಮರ್ಥ್ಯದ ಅನಿಶ್ಚಿತತೆಯಿಂದ ತೊಂದರೆಗೆ ಸಿಲುಕಿದ್ದಾರೆ. ಪ್ರಸ್ತುತ ಅಂದಾಜು 18 ಲಕ್ಷ ಟ್ಯಾಗ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಚಿಪ್‌ಗಳ ಆಮದು ಮಾಡಿಕೊಳ್ಳುವ ಸಮಯ ಮತ್ತು ಅಗತ್ಯ ಪ್ರಮಾಣದ ಟ್ಯಾಗ್‌ಗಳ ಉತ್ಪಾದನೆಗಳ ಕೊರತೆಯಿಂದ ಮಾರುಕಟ್ಟೆಯಲ್ಲಿ ಫಾಸ್ಟ್ಯಾಗ್ ಲಭ್ಯತೆಗೆ ಹಿನ್ನಡೆಯಾಗಿದೆ. ಇದರಿಂದಾಗಿ ನಾಗರಿಕರಿಗೆ ಫಾಸ್ಟ್ಯಾಗ್ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಾಧಿಕಾರ ಹೇಳಿದೆ.

FASTag ಪಡೆಯೋದು ಹೇಗೆ? App ಬಳಸುವುದು ಹೇಗೆ?FASTag ಪಡೆಯೋದು ಹೇಗೆ? App ಬಳಸುವುದು ಹೇಗೆ?

ತಾತ್ಕಾಲಿಕ ಪರಿವರ್ತನೆ

ತಾತ್ಕಾಲಿಕ ಪರಿವರ್ತನೆ

ಎನ್‌ಎಚ್‌ಎಐನ ಮನವಿಯನ್ನು ಪರಿಗಣಿಸಿ ಮತ್ತು ನಾಗರಿಕರನ್ನು ಅನನುಕೂಲಕ್ಕೆ ಸಿಲುಕಿಸದಂತೆ ಎಚ್ಚರ ವಹಿಸುವ ದೃಷ್ಟಿಯಿಂದ ಮುಂದಿನ 30 ದಿನಗಳ ಅವಧಿಯವರೆಗೆ ಮಾತ್ರ ಫಾಸ್ಟ್ಯಾಗ್ ಬಳಕೆಯ ಗಡುವನ್ನು ವಿಸ್ತರಿಸಲಾಗುತ್ತಿದೆ. ಶೇ 25ಕ್ಕೂ ಹೆಚ್ಚಿಲ್ಲದಂತೆ ಸಂಚಾರ ದಟ್ಟಣೆಗೆ ಅನುಗುಣವಾಗಿ ಫೀ ಲೇನ್‌ನಲ್ಲಿನ ಫಾಸ್ಟ್ಯಾಗ್ ಲೇನ್‌ಗಳನ್ನು ತಾತ್ಕಾಲಿಕವಾಗಿ ಹೈಬ್ರಿಡ್ ಲೇನ್‌ಗಳಾಗಿ ಬದಲಾವಣೆ ಮಾಡಬಹುದಾಗಿದೆ ಎಂದು ಸಚಿವಾಲಯ ಹೇಳಿದೆ.

ನಿತ್ಯವೂ ವರದಿ ನೀಡಬೇಕು

ನಿತ್ಯವೂ ವರದಿ ನೀಡಬೇಕು

ಎನ್‌ಎಚ್‌ಎಐನ ನಿಯಮದಂತೆ ಹೈಬ್ರಿಡ್ ಲೇನ್‌ಗಳು ಟೋಲ್ ಪ್ಲಾಜಾಗಳಲ್ಲಿ ನಗದು ಸುಂಕ ಪಾವತಿಗೆ ತೆರೆದುಕೊಂಡಿರುತ್ತವೆ. ಸ್ಪಷ್ಟವಾಗಿ ಹೇಳುವುದಾದರೆ ಟೋಲ್ ಪ್ಲಾಜಾಗಳಲ್ಲಿನ ಸುಂಕದ ಲೇನ್‌ಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಲೇನ್‌ಗಳನ್ನೂ ಫಾಸ್ಟ್ಯಾಗ್ ಲೇನ್‌ಗಳನ್ನಾಗಿ ಪರಿವರ್ತಿಸಬೇಕಿದೆ. ಇಂತಹ ಪ್ರಕರಣಗಳನ್ನು ದಿನನಿತ್ಯವೂ ಮೌಲ್ಯಮಾಪನ ಮಾಡಬೇಕು ಮತ್ತು ಸರಿಪಡಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೆಯೇ ದೈನಂದಿನ ಒಟ್ಟಾರೆ ವರದಿಯನ್ನು ನೀಡಬೇಕು ಎಂದು ಸಚಿವಾಲಯ ಸೂಚಿಸಿದೆ.

English summary
The Centre has extended the deadline of fastag in NH Toll plazas for 30 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X