ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೂ ಮುನ್ನ ಆರ್‌ಎಸ್‌ಎಸ್‌ನಲ್ಲಿ ಬದಲಾವಣೆ: ನೂತನ ಬಿಜೆಪಿ ಸಂಪರ್ಕ್ ಅಧಿಕಾರಿ ಅರುಣ್‌ ಯಾರು?

|
Google Oneindia Kannada News

ನವದೆಹಲಿ, ಜು.12: ಉತ್ತರಪ್ರದೇಶದಲ್ಲಿ ನಡೆಯುವ ನಿರ್ಣಾಯಕ ವಿಧಾನಸಭಾ ಚುನಾವಣೆಯ ತಯಾರಿ ನಡೆಯುತ್ತಿರುವ ನಡುವೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪ್ರಮುಖ ಸಾಂಸ್ಥಿಕ ಬದಲಾವಣೆಯನ್ನು ಘೋಷಿಸಿದೆ. ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಸಂಪರ್ಕ್ ಅಧಿಕಾರಿಯಾಗಿ ನೇಮೀಸಲಾಗಿದೆ.

ಸಾಹ್‌ ಸರ್ಕಾರ್ಯವಾಹ್‌ ಅರುಣ್ ಕುಮಾರ್ ಭಾನುವಾರ ಬಿಜೆಪಿಯ ಸಂಪರ್ಕ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಹಾಗೆಯೇ ರಾಜಕೀಯ ವಿಚಾರಗಳನ್ನು ನೋಡಿಕೊಳ್ಳಲಿದ್ದಾರೆ. ಈ ಹಿಂದೆ ಕೃಷ್ಣ ಗೋಪಾಲ್‌ ಬಿಜೆಪಿಯ ಸಂಪರ್ಕ್ ಅಧಿಕಾರಿಯಾಗಿದ್ದರು. ಕೃಷ್ಣ ಗೋಪಾಲ್ 2015 ರಿಂದ ಉಸ್ತುವಾರಿ ವಹಿಸಿಕೊಂಡಿದ್ದರು.

ಎಲ್ಲರ 'ಡಿಎನ್‌ಎ' ಒಂದೇ ಆದರೆ ಮತಾಂತರ ವಿರೋಧಿ ಕಾನೂನು ಏಕೆ?: ದಿಗ್ವಿಜಯ್ ಸಿಂಗ್ಎಲ್ಲರ 'ಡಿಎನ್‌ಎ' ಒಂದೇ ಆದರೆ ಮತಾಂತರ ವಿರೋಧಿ ಕಾನೂನು ಏಕೆ?: ದಿಗ್ವಿಜಯ್ ಸಿಂಗ್

ಮಧ್ಯಪ್ರದೇಶದ ಚಿತ್ರಕೂಟ್‌ನಲ್ಲಿ ನಡೆದ ಆರ್‌ಎಸ್‌ಎಸ್‌ನ ಸಭೆಯಲ್ಲಿ ಸಂಘದಲ್ಲಿನ ಬದಲಾವಣೆಯನ್ನು ಘೋಷಿಸಲಾಯಿತು. ಈ ವರ್ಷದ ಆರಂಭದಲ್ಲಿ, ದತ್ತಾತ್ರೇಯ ಹೊಸಬಾಳೆರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಹಾಗೆಯೇ ಅರುಣ್ ಕುಮಾರ್ ಹಾಗೂ ರಾಮದತ್ ಚಕಾರ್ಧರ್‌ರನ್ನು ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿ‌ತ್ತು.

 Rejig in RSS ahead of UP election, Arun Kumar appointed as interface for political issues

ಆರ್‌ಎಸ್‌ಎಸ್ ಪಶ್ಚಿಮ ಬಂಗಾಳದ ಕ್ಷೇತ್ರ ಪ್ರಚಾರಕ ಪ್ರದೀಪ್ ಜೋಶಿ ಅಖಿಲ್ ಭಾರತೀಯ ಸಹ ಸಂಪರ್ಕ್ ಪ್ರಮುಖ್ ಆಗಿ ವರ್ಗಾಯಿತರಾಗಿದ್ದರು. ಈ ನಡುವೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಸ್ಥೆ) ಬಿ.ಎಲ್.ಸಂತೋಷ್‌ಗೆ ಸಹಾಯ ಮಾಡಲು ಆರ್‌ಎಸ್‌ಎಸ್ ಎರಡನೇ ಜಂಟಿ ಪ್ರಧಾನ ಕಾರ್ಯದರ್ಶಿ ನೇಮಿಸಬಹುದು ಎಂದು ಮೂಲಗಳು ತಿಳಿಸಿವೆ.

ಅರುಣ್ ಕುಮಾರ್ ಯಾರು?

ಬಿಜೆಪಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದವರು, ಅರುಣ್‌ ಕುಮಾರ್. 370 ನೇ ವಿಧಿಯನ್ನು ರದ್ದುಪಡಿಸಿದ ಹಿಂದಿನ ಕೇಸರಿ ಕುಟುಂಬದ ಪ್ರಮುಖ ವ್ಯಕ್ತಿಗಳಲ್ಲಿ ಅರುಣ್‌ ಒಬ್ಬರಾಗಿದ್ದಾರೆ. ರಾಜಕೀಯವಾಗಿ ನಿರ್ಣಾಯಕ ಉತ್ತರ ಪ್ರದೇಶ ಸೇರಿದಂತೆ ಮುಂದಿನ ವರ್ಷ ಏಳು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅರುಣ್‌ ಕುಮಾರ್‌ರನ್ನು ಸಂಪರ್ಕ್ ಅಧಿಕಾರಿಯಾಗಿ ನೇಮಿಸಲಾಗಿದೆ.

2022 ರ ವಿಧಾನಸಭಾ ಚುನಾವಣೆ: ಪೂರ್ವ ಯುಪಿಯಲ್ಲಿ ಚುನಾವಣಾ ಚಟುವಟಿಕೆಗಳು ಈಗಲೇ ಪ್ರಾರಂಭ2022 ರ ವಿಧಾನಸಭಾ ಚುನಾವಣೆ: ಪೂರ್ವ ಯುಪಿಯಲ್ಲಿ ಚುನಾವಣಾ ಚಟುವಟಿಕೆಗಳು ಈಗಲೇ ಪ್ರಾರಂಭ

ಉತ್ತರ ಪ್ರದೇಶ ಮೂಲದ ಗೋಪಾಲ್ ವಿದ್ಯಾ ಭಾರತಿ ಮತ್ತು ವಿವಿಧ ಆರ್‌ಎಸ್‌ಎಸ್ ಅಂಗಸಂಸ್ಥೆಗಳ ಕೆಲಸವನ್ನು ನೋಡಿಕೊಳ್ಳಲಿದ್ದಾರೆ. ಆದರೆ ಆರೋಗ್ಯ ಕಾರಣಗಳಿಂದಾಗಿ ಅವರನ್ನು ಬದಲಾಯಿಸಲಾಯಿತು ಎಂದು ಆರ್‌ಎಸ್‌ಎಸ್ ಮೂಲಗಳು ತಿಳಿಸಿವೆ. ಸಂಘದ ಅಧಿಕಾರಿಗಳ ಜವಾಬ್ದಾರಿಗಳಲ್ಲಿ ಬದಲಾವಣೆ ದಿನನಿತ್ಯದ ವ್ಯಾಯಾಮ ಎಂದು ಆರ್‌ಎಸ್‌ಎಸ್ ಮುಖವಾಣಿ ಪಂಚಜನ್ಯದ ಸಂಪಾದಕ ಹಿತೇಶ್ ಶಂಕರ್ ಪಿಟಿಐಗೆ ತಿಳಿಸಿದ್ದಾರೆ. ಪಾತ್ರಗಳಲ್ಲಿನ ಇತ್ತೀಚಿನ ಬದಲಾವಣೆಯು ಮಾರ್ಚ್‌ನಲ್ಲಿ ಸಂಘದ ಉನ್ನತ ನಾಯಕತ್ವದ ಬದಲಾವಣೆಗೆ ಅನುಗುಣವಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Ahead of the crucial assembly election in Uttar Pradesh, the RSS has introduced a major organisational change. RSS joint general secretary Arun Kumar has been appointed as the new point person for the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X