ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರು ಇನ್ನು ಯಾವ ಪಕ್ಷಕ್ಕೂ ಮತ ಹಾಕೋಲ್ಲ

By Srinath
|
Google Oneindia Kannada News

Reject all political parties- exercise NOTA option - Muslim voters advised
ನವದೆಹಲಿ, ನ. 26: ಮುಸ್ಲಿಂ ಮತಬಾಂಧವರೇ ಯಾವುದೇ ಪಕ್ಷದ ಅಭ್ಯರ್ಥಿಗೂ ತಾವಿನ್ನು ಮತ ಹಾಕಬೇಡಿ ಎಂದು ಮುಸ್ಲಿಂ ಧಾರ್ಮಿಕ ಮುಖಂಡರು ಹಕ್ಕೊತ್ತಾಯ ಮಾಡಿದ್ದಾರೆ. ಅಲ್ಲಿಗೆ ಮುಸ್ಲಿಮರ ಮತಗಳು ಇನ್ನು ಯಾವುದೇ ಪಕ್ಷದ ರಾಜಕಾರಣಿಗೂ ಪ್ರಾಪ್ತಿಯಾಗುವುದಿಲ್ಲ.

ಮುಸ್ಲಿಮರು ಯಾಕಪ್ಪಾ ಇಂಥಾ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಅಂದರೆ ಮುಸ್ಲಿಂ ಧಾರ್ಮಿಕ ಮುಖಂಡರು ಹೇಳುವಂತೆ 'ವೋಟ್ ಬ್ಯಾಂಕ್ ಆಗಿದ್ದು ಸಾಕು. ನಮ್ಮ ಮತದಾನವನ್ನು ಇನ್ನು ದುರುಪಯೋಗ ಮಾಡಿಕೊಳ್ಳುವುದು ತಪ್ಪಬೇಕು. ಹಾಗಾಗಿ ಯಾರಿಗೇ ಆಗಲಿ ಮತ ಹಾಕುವುದಿಲ್ಲ' ಎಂಬ ದಿಟ್ಟ ನಿರ್ಧಾರ ಕೈಗೊಳ್ಳಿ ಎಂದು ಈ ಧಾರ್ಮಿಕ ಮುಖಂಡರು ಕರೆ ನೀಡಿದ್ದಾರೆ. (ಜ.1ಕ್ಕೆ 18 ತುಂಬುವಂತಿದ್ದರೆ ಈಗಲೇ ವೋಟರ್ಸ್ ನೋಂದಣಿ)

ಇದು ಸದ್ಯದಲ್ಲೇ ದಿಲ್ಲಿಯಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಿಂದಲೇ ಆರಂಭವಾಗಲಿ. ದಿಲ್ಲಿ ಚುನಾವಣೆಯಲ್ಲಿ ಮುಸ್ಲಿಮರು ಯಾರೂ ವೋಟ್ ಮಾಡುವುದು ಬೇಡ ಎಂದು ಧಾರ್ಮಿಕ ನಾಯಕರು ಅಲವತ್ತುಕೊಂಡಿದ್ದಾರೆ. (ನೋಟಾ ಬಹುಮತವಾದರೆ ಮರು ಚುನಾವಣೆ ಇಲ್ಲ)

'ಜಾತ್ಯಾತೀತ ಪಕ್ಷಗಳ ಅಭ್ಯರ್ಥಿಗಳಿಗೂ ಮತ ಹಾಕಬೇಡಿ. ಇಂತಹ ಸಂದರ್ಭಕ್ಕಾಗಿ ಚುನಾವಣಾ ಆಯೋಗವು ನೋಟಾ (ನಕಾರಾತ್ಮಕ ಮತದಾನ) ಆಯ್ಕೆಯನ್ನು ಕಲ್ಪಿಸಿದೆ. ಅದನ್ನು ಬಳಸಿ, ನಿಮ್ಮ ಮತದಾನದ ಹಕ್ಕನ್ನು ದಾಖಲಿಸಿ. ತನ್ಮೂಲಕ ಈ ಹುಸಿ ಜಾತ್ಯಾತೀತ ರಾಜಕೀಯ ಪಕ್ಷಗಳ ವಿರುದ್ಧ ನಿಮ್ಮ ಕೋಪವನ್ನು ಮನನ ಮಾಡಿಕೊಡಿ' ಎಂದು ನಾನಾ ಮುಸ್ಲಿಂ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದ ತುಂಬು ಸಭೆಯಲ್ಲಿ ಮುಫ್ತಿ ಇಶ್ತಿಖ್ ಹುಸೇನ್ ಖದ್ರಿ ಕರೆ ನೀಡಿದ್ದಾರೆ.

All India Tanzeem Ulama-e-Islami of Baralive Sect ಆಯೋಜಿಸಿದ್ದ ಈ ಸಭೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. (ಪಾಕಿಸ್ತಾನದ ಚುನಾವಣೆಗೆ ಭಾರತದ ವೋಟಿಂಗ್ ಮೆಷಿನ್!)

ಸರಿಯಾದ ಸಂದೇಶ ರವಾನಿಸಬಹುದು:
ಈ ಕಡೆ, ದಶಕಗಳಿಂದಲೂ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡಿಕೊಂಡು ಬಂದಿದೆ. ಆದರೆ ನಾವು ಮುಸ್ಲಿಮರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಉದ್ಧಾರವಾಗಲಿಲ್ಲ. ಇನ್ನು, ಬಿಜೆಪಿ ಮೊದಲಿಂದಲೂ ನಮ್ಮನ್ನು ಪರಕೀಯವಾಗಿಯೇ ನೋಡಿಕೊಂಡು ಬಂದಿದೆ. ನಾವು ಯಾರಿಗೂ ಬೇಡವಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯ ಮಾರ್ಗವಿಲ್ಲದೆ ಇತ್ತೀಚೆಗೆ ಸುಪ್ರೀಂಕೋರ್ಟ್ ನಮಗೆ ಕೊಡಮಾಡಿರುವ ನಕಾರಾಥ್ಮಕ ಮತದಾನ ಹಕ್ಕನ್ನು ದಾಖಲಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

English summary
Reject all political parties- exercise NOTA option - Muslim voters advised by Mufti Ishtiaq Hussain Qadri. He was addressing a meeting held under the banner of the All India Tanzeem Ulama-e-Islami of Baralive sect in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X